»   » ಸಲ್ಮಾನ್ ರಶ್ದಿ ಮಾಜಿ ಪತ್ನಿ ಪದ್ಮಾ ಲಕ್ಷ್ಮಿಗೆ ಹೆಣ್ಣು ಮಗು

ಸಲ್ಮಾನ್ ರಶ್ದಿ ಮಾಜಿ ಪತ್ನಿ ಪದ್ಮಾ ಲಕ್ಷ್ಮಿಗೆ ಹೆಣ್ಣು ಮಗು

Posted By:
Subscribe to Filmibeat Kannada

ಭಾರತೀಯ ಸಂಜಾತೆ ರೂಪದರ್ಶಿ ಹಾಗೂ ದೂರದರ್ಶನ ಮುಖ್ಯಸ್ಥೆ ಪದ್ಮಾ ಲಕ್ಷ್ಮಿ (39) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಮಾಜಿ ಪತ್ನಿ ಪದ್ಮಾ ಲಕ್ಷ್ಮಿ ಕಳೆದ ಅಕ್ಟೋಬರ್ ತಿಂಗಳಲ್ಲೇ ತಾವು ತಾಯಿಯಾಗುತ್ತಿರುವುದಾಗಿ ಪ್ರಕಟಿಸಿದ್ದರು.

ಹಲವಾರು ವರ್ಷಗಳಿಂದ ಪದ್ಮಾ ಲಕ್ಷ್ಮಿ ಎಂಡೋಮಿಟ್ರೈಟಿಸ್ (ಗರ್ಭಕೋಶದ ಒಳಪೊರೆಯ ಉರಿಯೂತ)ದಿಂದ ಬಳಲುತ್ತಿದ್ದು ಮಗುವಿಗೆ ಜನ್ಮ ನೀಡಿರುವುದು ವೈದ್ಯಲೋಕದಲ್ಲಿ ಅಚ್ಚರಿ ಮೂಡಿಸಿದೆ ಎಂದು ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ. ಫೆಬ್ರವರಿ 20ರಂದು ನ್ಯೂಯಾರ್ಕ್ ಸಿಟಿಯಲ್ಲಿ ಪದ್ಮಾ ಲಕ್ಷ್ಮಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದು ಮಗು ಆರೋಗ್ಯವಾಗಿದೆ. ಮಗುವಿಗೆ ಕೃಷ್ಣ ಎಂದು ಹೆಸರಿಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಮಗುವಿನ ತಂದೆ ಯಾರು ಎಂಬುದನ್ನು ತಿಳಿಸಲು ಪದ್ಮಾ ಲಕ್ಷ್ಮಿ ನಿರಾಕರಿಸಿದ್ದಾರೆ. ಆದರೆ ಮಗುವಿನ ತಂದೆ ಕೊಲಂಬಿಯಾ ಬಿಜಿನೆಸ್ ಸ್ಕ್ಕೂಲ್ ಟೀಚರಾಗಿ ಕಾರ್ಯನಿರ್ವಹಿಸುತ್ತಿರುವ ಆಡಂ ಡೆಲ್ ಎನ್ನುತ್ತವೆ ಬಲ್ಲ ಮೂಲಗಳು. ಡೆಲ್ ಕಂಪ್ಯೂಟರ್ಸ್ ನ ಸ್ಥಾಪಕ ಮೈಕೇಲ್ ಡೆಲ್ ಅವರ ಸಹೋದರ ಆಡಂ ಡೆಲ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada