»   » ಅಜಯ್ ರಾವ್‌ಗೆ 'ಭಾರ'ವಾದ ರಮ್ಯಾ ನಂಬೀಷನ್

ಅಜಯ್ ರಾವ್‌ಗೆ 'ಭಾರ'ವಾದ ರಮ್ಯಾ ನಂಬೀಷನ್

Posted By:
Subscribe to Filmibeat Kannada

ಕೆಲವು ನಾಯಕಿಯರೆ ಹೀಗೆ ನೋಡಿ. ಅವರ ಕೈಗುಣ, ಕಾಲ್ಗುಣ ಎಲ್ಲವೂ ಚೆನ್ನಾಗಿದ್ದರೂ ಮೈಗುಣ ಕೈಕೊಟ್ಟರೆ ಹೀಗಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಲಯಾಳಿ ಬೆಡಗಿ ರಮ್ಯಾ ನಂಬೀಷನ್ ಕನ್ನಡದಲ್ಲಿ 'ಜಾದೂ' ಮಾಡಬೇಕಾಗಿತ್ತು. ಆದರೆ ಈಕೆಗೆ ಕನ್ನಡದಲ್ಲಿ ಅಭಿನಯಿಸುವ ಸುವರ್ಣಾವಕಾಶ ಕೈತಪ್ಪಿಹೋಗಿದೆ.

ಬಾಕ್ಸಾಫೀಸಲ್ಲಿ ಅಷ್ಟಾಗಿ ಸದ್ದು ಮಾಡದ 'ಸಂಗಮ' ಚಿತ್ರವನ್ನು ನಿರ್ದೇಶಿಸಿದ ರವಿವರ್ಮ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಚಿತ್ರ 'ಜಾದೂ'. ಈ ಚಿತ್ರದ ನಾಯಕ ನಟ ಅಜಯ್ ರಾವ್. ಈ ಚಿತ್ರಕ್ಕೆ ನಾಯಕಿಯಾಗಿ ರಮ್ಯಾ ನಂಬೀಷನ್ ಆಯ್ಕೆಯಾಗಿದ್ದರು. ಆದರೆ ಈಕೆಯನ್ನು ಚಿತ್ರದಿಂದ ಕೈಬಿಟ್ಟಿದ್ದಾರೆ. ಕಾರಣ ಆಕೆ ಆರು ತಿಂಗಳಲ್ಲಿ ಆರು ಕೆಜಿ ತೂಕ ಜಾಸ್ತಿಯಾಗಿದ್ದಿದ್ದರೆ ಪರ್ವಾಗಿರಲಿಲ್ಲ. ಆದರೆ ಬರೋಬ್ಬರಿ 18 ಕೆಜಿಯಷ್ಟು ಜಾಸ್ತಿಯಾಗಿದ್ದಾರಂತೆ.

ಅತ್ತ ಅಜಯ್ ರಾವ್ ಮಾತ್ರ ದಿನದಿಂದ ದಿನಕ್ಕೆ ಸ್ಲಿಮ್ ಆಗುತ್ತಿದ್ದಾರೆ. ಈಕೆ ನೋಡಿದರೆ ಕಾದ ಎಣ್ಣೆಗೆ ಬಿಟ್ಟ ಪೂರಿ ತರಹ ಊದಿಕೊಂಡಿದ್ದಾರೆ. ವಿಧಿಯಿಲ್ಲದೆ ಈಕೆಯನ್ನು ಚಿತ್ರದಿಂದ ಕೈಬಿಡಲಾಗಿದೆ ಎನ್ನುತ್ತವೆ ಮೂಲಗಳು. ರಮ್ಯಾರ 'ಭಾರ'ಕ್ಕೆ ಕಂಗಾಲಾಗಿರುವ ರವಿವರ್ಮ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ 'ಜಾದೂ' ಶೂಟಿಂಗ್ ಶುರುವಾಗಲಿದೆ. (ಏಜೆನ್ಸೀಸ್)

English summary
South actress Remya Nambeeshan has opted out of Kannda movie Jaadu. Reports says that she is suffring from over weight. Ravi Verma is the director of the movie and Ajay Rao is the hero.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada