For Quick Alerts
  ALLOW NOTIFICATIONS  
  For Daily Alerts

  ದಿಗಂತ್ ಕೈಜಾರಿದ ಅನಾರ್ಕಲಿ ಕಿಟ್ಟಿಗೆ ಸಿಕ್ಕಿದ್ದು ಏಕೆ?

  By Mahesh
  |

  ಕನ್ನಡ ಚಿತ್ರರಂಗದ ಚೆಂದದ ಹುಡುಗ "ದೂಧ್ ಪೇಡ" ದಿಗಂತ್ ಯಾಕೋ ಸ್ವಲ್ಪ ರಾಂಗ್ ಆಗಿದ್ರು. ಆಗಷ್ಟೇ ಅವರ ಕೈಯಿಂದ ಅನಾರ್ಕಲಿ ಜಾರಿ ಶ್ರೀಗರ ಕೃಷ್ಣ ಅಲಿಯಾಸ್ ಕಿಟ್ಟಿ ಕೈ ಸೇರಿದ್ಳು. ಏನು ದಿಗಿ ಹೀಗಾಯ್ತು ಅಂದ್ರೆ, ಹೌದು ಎಲ್ಲದಕ್ಕೂ ನಾನೇ ಕಾರಣ, ನಾನು ಸ್ವಲ್ಪ ಹಾಗೆ ಓಕೆನಾ ಎಂದು ಮೊದಲೇ ಕೆಂಪಗಿರುವ ಮುಖವನ್ನು ಇನ್ನಷ್ಟು ಕೆಂಪಗೆ ಮಾಡಿಕೊಂಡು ಹೇಳ್ತಾ ಇದ್ದ.

  ಯಾಕೋ ದಿಗಿ ಮೈಮೇಲೆ ಮನಸಾರೆ ಹೀರೋ ಬಂದಿರೋ ರೀತಿ ಇತ್ತು ಸನ್ನಿವೇಶ. ಆಮೇಲೆ ಸ್ವಲ್ಪ ಕೂಲ್ ಆದ ಪಂಚರಂಗಿ ಹುಡ್ಗ, ಸಾಧು ಕೋಕಿಲ ಮಾಡಿದ ಅವಾಂತರ ಅಂದ್ರು. ಏನಾಯ್ತು ಅಂದ್ರೆ...

  ನಾನು ಹೇಳ್ದೆ "ಪಾರಿಜಾತ" ಮತ್ತೆ "ಲೈಫುಇಷ್ಟೇನೆ" ಚಿತ್ರದಲ್ಲಿ ಬ್ಯುಸಿ ಇದ್ದೀನಿ ಈಗ ಬೇರೆ ಪ್ರಾಜೆಕ್ಟ್ ಒಪ್ಪಿಕೊಳ್ಳೋದು ಕಷ್ಟ ಅಂತಾ, ಪರವಾಗಿಲ್ಲಮ್ಮ, ನೀನು ಫ್ರೀ ಆಗಿರುವ ಟೈಮ್ ಕೊಡು ನಾನು ಕಾಯ್ತೀನಿ ಅಂತಾ ಹೇಳಿದ್ರು. ಆಮೇಲೆ ಆಗಸ್ಟ್ ನಲ್ಲಿ ಮಳೆ ಇರುತ್ತೆ, ಶೂಟಿಂಗ್ ಕಷ್ಟ ಅಡ್ಜಸ್ಟ್ ಮಾಡ್ಕೋ ಬೇರೆ ಡೇಟ್ ಕೊಡು ಅಂದ್ರು. ನಾನು ನೋಡ್ತೀನಿ ಅಂದಿದ್ದೆ.

  ಪಂಚರಂಗಿ ಆದ್ಮೇಲೆ ನಾನು ನಾಲ್ಕು ಸಿನಿಮಾ ಮಾಡಿದ್ದೀನಿ. ರಜೆ ಅನ್ನೋದು ಸಿಕ್ಕಿಲ್ಲ. ಆರೋಪ ಮಾಡೋಕೆ, ಕಾರಣ ಹೇಳೋಕೆ ನನ್ನ ಹತ್ರಾನೂ ನೂರಾರು ವಿಷ್ಯ ಇದೆ ಆದ್ರೆ ನಾನು ಸಾಧು ಕೋಕಿಲ ಅಲ್ಲ ಎಂದು ದಿಗಿ ಮುಖ ಆ ಕಡೆ ಮಾಡಿ ಕೂತರು.

  ಯೋಗರಾಜ ಭಟ್ಟರ ಜೊತೆ ಮುಂಗಾರು ಮಳೆ, ಗಾಳಿಪಟ, ಮನಸಾರೆ ಹಾಗೂ ಪಂಚರಂಗಿ ಚಿತ್ರ ಮಾಡಿದ್ದೀನಿ. ನಾನು ಕಿರಿಕ್ ಮಾಡುವವನಾಗಿದ್ರೆ ಹೇಗೆ ನಾಲ್ಕು ಸಿನಿಮಾ ಮಾಡೋಕೆ ಸಾಧ್ಯ. ಇದುವರೆವಿಗೂ ಯಾವುದೇ ನಿರ್ದೇಶಕ, ನಿರ್ಮಾಪಕರ ಜೊತೆ ಮನಸ್ತಾಪ ಆಗಿಲ್ಲ. ಇವರು ನೋಡಿದ್ರೆ ನನ್ನ ಮೇಲೆ ಗೂಬೆ ಕೂರಿಸ್ತಾರೆ ಎಂದು ಸದ್ಯಕ್ಕೆ ದಿಗಂತ್ ಕಾಲ್ ಶೀಟ್ ರಾಕ್ ಲೈನ್ ವೆಂಕಟೇಶ್, ಸೌಂದರ್ಯ ಜಗದೀಶ್ ಹಾಗೂ ಇಂದ್ರಜೀತ್ ಲಂಕೇಶ್ ಕೈಲಿದೆ.

  English summary
  I m not throwing tantrums, my call sheet is tight and Sadhu Kokila is responsible for me missing Anarkali movie. I have disappointed says Pancharangi fame actor Diganth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X