»   » ಹೋಟೆಲ್ ನಲ್ಲಿ ಪ್ರಭುದೇವ, ನಯನತಾರಾ ಜಟಾಪಟಿ

ಹೋಟೆಲ್ ನಲ್ಲಿ ಪ್ರಭುದೇವ, ನಯನತಾರಾ ಜಟಾಪಟಿ

Posted By:
Subscribe to Filmibeat Kannada

ಇನ್ನೇನು ನಟಿ ನಯನತಾರಾ ಮತ್ತು ಪ್ರಭುದೇವ ಮದುವೆ ನಡೆದೇ ಹೋಯಿತು ಎಂಬಂತಿತ್ತು.ಅಷ್ಟರಲ್ಲೇ ಇವರ ನಡುವೆ ಜಟಾಪಟಿ ನಡೆದುಹೋಗಿದೆ. ಪ್ರಭುದೇವ ಮತ್ತೊಬ್ಬ ನಟಿಯೊಂದಿಗೆ ಐಸ್ ಪೈಸ್ ಆಡಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ. ಸಂಪೂರ್ಣ ರಾಮಾಯಣ ಹೀಗಿವೆ.

ನಟಿ ಹನ್ಸಿಕಾ ಮೋಟ್ವಾನಿ ಅವರನ್ನು ಹೈದರಾಬಾದ್‌ನ ಹೋಟೆಲ್ ಒಂದಕ್ಕೆ ಪ್ರಭುದೇವ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಗೆ ವಿಶೇಷ ಆತಿಥ್ಯವನ್ನು ನೀಡಿದ್ದ ಎನ್ನಲಾಗಿದೆ. ಅದು ಹೇಗೋ ಏನೋ ಈ ಸುದ್ದಿ ನಯನತಾರಾ ಕಿವಿಗೆ ಬಿದ್ದಿದ್ದೆ. ಅಷ್ಟೇ ಬೆಂಕಿಗೆ ತುಪ್ಪ ಸುರಿದಂತಾಗಿ ಇಬ್ಬರ ನಡುವೆ ದಿಗ್ಗನೆ ಬೆಂಕಿ ಹೊತ್ತಿಕೊಂಡಿದೆ.

ಹೈದರಾಬಾದ್ ಹೋಟೆಲ್ ನಲ್ಲಿ ನಡೆಯುತ್ತಿರುವ ರಹಸ್ಯ ಕಾರ್ಯಾಚರಣೆಯನ್ನು ಆ(ಗು)ಪ್ತರೊಬ್ಬರು ನಯನತಾರಾ ಕಿವಿಗೆ ಹಾಕಿದ್ದರು ಎನ್ನಲಾಗಿದೆ. ಕೂಡಲೆ ಆ ಹೋಟೆಲ್‌ಗೆ ದೌಡಾಯಿಸಿದ ನಯನತಾರಾ ಇಬ್ಬರನ್ನೂ ರೆಡ್ ಹ್ಯಾಂಡೆಡ್ ಆಗಿ ಹಿಡಿದು ವಾಚಾಮಗೋಚರ ಬೈದಿದ್ದಾಗಿ ಸುದ್ದಿ. ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇನ್ನೇನು ಪರಿಸ್ಥಿತಿ ಕೈಮೀರಿ ಹೋಗುವ ಹಂತಕ್ಕೆ ಹೋಗಿತ್ತು ಎನ್ನುತ್ತವೆ ಮೂಲಗಳು.

ತಮಿಳಿನ 'ಎಂಗೇಯಂ ಕಾದಲ್' ಎಂಬ ಚಿತ್ರಕ್ಕೆ ಪ್ರಭುದೇವ ಆಕ್ಷನ್, ಕಟ್ ಹೇಳಿದ್ದಾರೆ. ಈ ಚಿತ್ರದ ನಾಯಕಿ ಮತ್ಯಾರು ಅಲ್ಲ ಹನ್ಸಿಕಾ ಮೋಟ್ವಾನಿ. ಸದ್ಯಕ್ಕೆ ಈ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದ್ದು ಪ್ರಭುದೇವ ಮತ್ತು ಹನ್ಸಿಕಾ ಮೋಟ್ವಾನಿ ಜೊತೆಜೊತೆಯಾಗಿ ಪ್ರಮೋಟ್ ಮಾಡುತ್ತಿದ್ದರು. ಅಷ್ಟರಲ್ಲೇ ಇಬ್ಬರಿಗೂ ನಯನತಾರಾ ಧೂಮಕೇತುವಿನಂತೆ ಅಪ್ಪಳಿಸಿದ್ದಾರೆ.

English summary
The most talked about couple of the recent times Nayanthara and Prabhu Deva fight in star hotel! This time, they are in the news for verbal spat in public over Prabhu"s closeness with another actress Hansika Motwani.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada