For Quick Alerts
  ALLOW NOTIFICATIONS  
  For Daily Alerts

  ರಮ್ಯ, ರಕ್ಷಿತಾ, ಪಾರ್ವತಮ್ಮ ಬಂಧನಕ್ಕೆ ವಾರೆಂಟ್

  By Mahesh
  |

  ನಿರ್ಮಾಪಕರು ಮಾಡಿದ ಸಣ್ಣ ತಪ್ಪಿಗೆ ಖ್ಯಾತ ತಾರೆ ರಮ್ಯ ಅಲಿಯಾಸ್ ದಿವ್ಯ ಸ್ಪಂದನ, ಮಾಜಿ ತಾರೆ, ಹಾಲಿ ರಾಜಕಾರಣಿ ರಕ್ಷಿತಾ ಹಾಗೂ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ಬಂಧನ ಭೀತಿ ಎದುರಿಸುವಂತಾಗಿದೆ.

  ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಮ್ಯ, ರಕ್ಷಿತ ಹಾಗೂ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ಅಮರ್ ಚಂದ್ ಜೈನ್ , ಶಂಕ್ರೇಗೌಡ ಹಾಗೂ ಎಂಎಚ್ ಸುನೀಲ್ ಬಂಧನ ಭೀತಿ ಎದುರಿಸುತ್ತಿದ್ದಾರೆ.

  2011 ರ ನವೆಂಬರ್ ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಗರದ ಗೋಡೆಗಳ ಮೇಲೆ ಅಂದ ಹಾಳುಮಾಡುವ ಸಿನಿಮಾ ಪೋಸ್ಟರ್ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

  ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಇದಕ್ಕೆ ಸಿನಿಮಾ ಮಂದಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

  ಆದರೆ, ಈಗ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ@divyaspandana
  How am I responsible for posters being pasted without permission?Neither am I the producer or the person who pasted them!!Verification.. ಎಂದು ಟ್ವೀಟ್ ಮಾಡಿ ಉತ್ತರಿಸಿದ್ದಾರೆ.

  ದೂರು ದಾಖಲಿಸುವ ವೇಳೆ ಉಪ್ಪಾರಪೇಟೆ ಪೊಲೀಸರು ಸಿನಿಮಾ ಪೋಸ್ಟರ್ ಗಳನ್ನು ಸಹ ದಾಖಲೆಯಾಗಿ ಸಲ್ಲಿಸಿದ್ದರು. ಈ ವೇಳೆ ಜೋಗಯ್ಯ, ಖದೀಮರು, ಸಂಜು ವೆಡ್ಸ್ ಗೀತಾ, ಕೆಂಪೇಗೌಡ ಹಾಗೂ ಹುಡುಗರು ಸಿನಿಮಾದ ಪೋಸ್ಟರ್ ಗಳೇ ನ್ಯಾಯಾಲಯಕ್ಕೆ ಸಲ್ಲಿಕೆಯಾದ ದಾಖಲೆ.

  ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾ. ರುಡೋಲ್ಫ್ ಪೆರೀರಾ, ಈ ಎಲ್ಲರಿಗೂ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

  English summary
  Actress Ramya, Rakshita, Producers Parvatamma, Shankare Gowda, Amarchand Jain fear detention for posting movie poster illegally on walls of Bangalore. BBMP complaint is accepted by Upparpet Police and ionvestigation is going on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X