»   »  ಏಕಾಂಗಿ ಜೊತೆಗಾರ! ಹರೇ ರಾಮ!

ಏಕಾಂಗಿ ಜೊತೆಗಾರ! ಹರೇ ರಾಮ!

Posted By: * ಜಯಂತಿ
Subscribe to Filmibeat Kannada
Ashwini Ramprasad
ನಿರ್ಮಾಪಕರು ಮತ್ತು ಸಿನಿಮಾ ಪತ್ರಕರ್ತರ ನಡುವಣ ಮುಸುಕಿನೊಳಗೊಣ ಗುದ್ದಾಟ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಸುದ್ದಿಗೋಷ್ಠಿಗಳ ಕುರಿತು ನಿರ್ಮಾಪಕರ ಸಂಘ ರೂಪಿಸಿರುವ ಚೌಕಟ್ಟುಗಳು ತಮ್ಮ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು ಎಂದು ಕೆಲವು ಪತ್ರಕರ್ತರು ಭಾವಿಸಿದಂತಿದೆ. ನಿರ್ಮಾಪಕರ ಒಂದು ಗುಂಪು ಕೂಡ ಸಂಘದ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಮುಸುಕಿನೊಳಗಣ ಗುದ್ದಾಟದ ಬಿಸಿ ಭಾನುವಾರ ನಡೆದ ಅಶ್ವಿನಿ ರಾಮ್‌ಪ್ರಸಾದ್‌ರ ಜೊತೆಗಾರ ಸಿನಿಮಾದ ಸುದ್ದಿಗೋಷ್ಠಿ ಮೇಲೆ ಪರಿಣಾಮ ಬೀರಿತ್ತು. ಜೊತೆಗಾರನ ಐಟಂಸಾಂಗ್‌ಗೆ ಕುಣಿಯಲಿಕ್ಕೆ ಸದ್ಯದಲ್ಲೇ ಯಾನಾ ಗುಪ್ತಾ ಸದ್ಯದಲ್ಲೇ ಬೆಂಗಳೂರಿಗೆ ಬರಲಿದ್ದಾಳೆ. ಯಾನಾ ಸಮಾಚಾರ ಸೇರಿದಂತೆ ಸಿನಿಮಾಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹೇಳಿಕೊಳ್ಳುವ ಉಮೇದಿನಿಂದ ರಾಮ್‌ಪ್ರಸಾದ್ ಬಳಗ ಸುದ್ದಿಗೋಷ್ಠಿಗೆ ಬಂದರೆ ಅಲ್ಲಿದ್ದುದು ಮೂರು ಮತ್ತೊಬ್ಬರು ಮಾತ್ರ!

ಜೊತೆಗಾರ ಸುದ್ದಿಗೋಷ್ಠಿಗೆ ಪತ್ರಕರ್ತರ ಗೈರುಹಾಜರಿಯ ವಾಸನೆ ಪ್ರಚಾರಕರ್ತ ನಾಗೇಂದ್ರ ಅವರಿಗೆ ಮೊದಲೇ ಬಡಿದಂತಿತ್ತು. ಚಿತ್ರೋದ್ಯಮದಲ್ಲಿನ ಅನಾರೋಗ್ಯಕರ ಬೆಳವಣಿಗೆಯಿಂದ ರೋಸಿಹೋದ ಅವರು ತಮ್ಮ ಆಪ್ತರೊಡನೆ ಅಸಮಾಧಾನ ತೋಡಿಕೊಂಡಿದ್ದಾರೆ.

ಇಪ್ಪತ್ತೈದು ವರ್ಷಗಳಿಂದ ಉದ್ಯಮದಲ್ಲಿದ್ದೇನೆ. ನಾನು ಆಯೋಜಿಸುವ ಸುದ್ದಿಗೋಷ್ಠಿ ಖಾಲಿ ಇರುತ್ತದೆಂದರೆ ನಾನೇಕೆ ಈ ವೃತ್ತಿಯಲ್ಲಿರಬೇಕು? ಪ್ರೂಫ್‌ರೀಡರ್ ಕೆಲಸಕ್ಕೆ ಎಲ್ಲಿಯಾದರು ಸೇರಿಕೊಳ್ಳುವುದು ಒಳ್ಳೆಯದು ಎನ್ನುವ ಅರ್ಥದ ಮಾತುಗಳನ್ನು ಪಿಆರ್‌ಒ ನಾಗೇಂದ್ರ ಆಡಿದ್ದಾರೆ.

ಸದ್ಯಕ್ಕಂತೂ ಯಾವ ಕನ್ನಡ ಸಿನಿಮಾ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿಲ್ಲ. ಗಾಂಧಿನಗರದಲ್ಲೇನಿದ್ದರೂ ವಿವಾದ-ಮುನಿಸುಗಳದೇ ಗದ್ದಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada