»   »  ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಇಲ್ಲ!

ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಇಲ್ಲ!

Subscribe to Filmibeat Kannada
Kannada film industry and multiplexes in row over revenue sharing
ಕಳೆದ ವಾರ ಬಿಡುಗಡೆಯಾದ ಉಪೇಂದ್ರ ಅಭಿನಯದ 'ದುಬೈಬಾಬು' ಮತ್ತು ವಿಜಯ್ ಅಭಿನಯದ 'ತಾಕತ್' ಚಿತ್ರಗಳು ಬೆಂಗಳೂರಿನ ಯಾವುದೇ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನ ಕಂಡಿಲ್ಲ. ಕನ್ನಡ ಚಿತ್ರೋದ್ಯಮ ಮತ್ತು ಮಲ್ಟಿಪ್ಲೆಕ್ಸ್ ಆಡಳಿತ ಮಂಡಳಿಯ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಕನ್ನಡ ಚಿತ್ರಗಳು ಪ್ರದರ್ಶನ ಕಾಣುತ್ತಿಲ್ಲ.

ಚಿತ್ರದ ಲಾಭ ಹಂಚಿಕೆಯ ವಿಷಯದಲ್ಲಿ ಮಲ್ಟಿಪ್ಲೆಕ್ಸ್ ಮತ್ತು ಚಿತ್ರ ನಿರ್ಮಾಪಕರು ವಿಭಿನ್ನ ನಿಲುವು ತಾಳಿರುವುದೇ ಇದಕ್ಕೆ ಕಾರಣ. ಈ ಬಗ್ಗೆ ಸಾಕಷ್ಟು ಮಾತುಕತೆ ನಡೆದರೂ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಈಗ ಸಿಟ್ಟಾಗಿದೆ. ಕನ್ನಡ ಚಿತ್ರಗಳನ್ನು ನೀವು ಮಲ್ಟಿಫ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡಬೇಡಿ. ಮೊದಲು ಅವರು ಇತ್ಯರ್ಥ ಮಾಡಿಕೊಡಲಿ ಎಂದು ಸಂಬಂಧಪಟ್ಟ ನಿರ್ಮಾಪಕರಿಗೆ ಚೇಂಬರ್ ಫರ್ಮಾನು ಹೊರಡಿಸಿದೆ.

ಇದರಿಂದಾಗಬಹುದಾದ ದೊಡ್ಡ ನಷ್ಟವನ್ನು ನಿರ್ಮಾಪಕರು ಆಗಲೇ ಅಂದಾಜಿಸಲು ಶುರು ಮಾಡಿದ್ದಾರೆ. ಅದಕ್ಕೆ ತಕ್ಕ ಮಾರ್ಗವನ್ನು ಕಂಡುಕೊಡಿ ಎಂದು ಚೇಂಬರ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಮಾತುಕತೆ ಫಲಪ್ರದವಾದರೆ ಮಾತ್ರ ಇಂದು (ಮೇ 29)ಬಿಡುಗಡೆಯಾರಿರುವ 'ಕಲಾಕಾರ್', 'ನನ್ನದೆಯ ಹಾಡು' ಮತ್ತು 'ಅಭಿಮಾನಿ' ಚಿತ್ರಗಳು ಮಲ್ಟಿಪ್ಲೆಕ್ಸ್ ಪ್ರೇಕ್ಷಕರನ್ನು ತಲುಪಲಿದೆ.

ಈ ವರ್ಷ ಬಿಡುಗಡೆಗೊಂಡ ಜಂಗ್ಲಿ, ಅಂಬಾರಿ, ಸವಾರಿ, ಜೋಷ್ ಚಿತ್ರಗಳು ಮಲ್ಟಿಪ್ಲೆಕ್ಸ್ ನಲ್ಲಿ ಉತ್ತಮ ಗಳಿಕೆ ಕಂಡಿರುವುದು ಗಮನಾರ್ಹ ಅಂಶ. ವಿಷಯ ಹೀಗಿದರೂ ಅತ್ತ ಮಲ್ಟಿಫ್ಲೆಕ್ಸ್ ಆಡಳಿತ ಮಂಡಳಿ ಇತ್ತ ಕನ್ನಡ ಚಿತ್ರೋದ್ಯಮ ಇಬ್ಬರೂ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಇವರಿಬ್ಬರ ಜಗಳದಲ್ಲಿ ಮಲ್ಟಿಫ್ಲೆಕ್ಸ್, ಪಿವಿಆರ್ ಮತ್ತು ಇನ್ನೋಕ್ಸ್ ಗಳು ಕನ್ನಡ ಚಿತ್ರಗಳಿಲ್ಲದೆ ಬಿಕೋ ಎನ್ನುತ್ತಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada