»   » ನನ್ನ ಪ್ರಭು ನಡುವೆ ಏನಿಲ್ಲ ಏನಿಲ್ಲ ಎಂದ ನಯನತಾರಾ

ನನ್ನ ಪ್ರಭು ನಡುವೆ ಏನಿಲ್ಲ ಏನಿಲ್ಲ ಎಂದ ನಯನತಾರಾ

Posted By:
Subscribe to Filmibeat Kannada
Nayantara and Prabhudeva
ನಾಲ್ಕೈದು ವರ್ಷಗಳಿಂದ  ದೇಶದ ಪ್ರಮುಖ ಪತ್ರಿಕೆಗಳ ಗಾಸಿಪ್ ಕಾಲಂಗೆ ಆಹಾರವಾಗಿದ್ದ ಪ್ರಭುದೇವ ಹಾಗೂ ನಯನತಾರಾ ಹಸೆಮಣೆ ಏರುವ ಮೊದಲೇ ತಮ್ಮ ಹೆಜ್ಜೆಯನ್ನು ಹಿಂತೆಗೆದುಕೊಂಡಿರುವ ಸುದ್ದಿ ಹೊರಬಿದ್ದಿದೆ.

ನಯನತಾರಾ ಅವರು ಕುಟುಂಬದ ಒತ್ತಡ ಹಾಗೂ ಸಿನಿಮಾ ಜಗತ್ತಿನ ಆಕರ್ಷಣೆಯ ಸಲುವಾಗಿ ಪ್ರಭುದೇವ ಅವರ ಪ್ರೇಮವನ್ನು ತ್ಯಾಗ ಮಾಡುವ ಹಂತಕ್ಕೆ ತಲುಪಿದ್ದಾರೆ ಎಂದುಒನ್ ಇಂಡಿಯಾ ತಮಿಳು ಬಾತ್ಮೀದಾರರು ಹೇಳಿದ್ದಾರೆ.

'ಈಗ ಕೈಲಿರುವ ಹೊಸ ಚಿತ್ರಗಳನ್ನು ಮುಗಿಸಿಬಿಡುತ್ತೇನೆ ಮತ್ತೆ ಯಾರಿಗೂ ಕಾಲ್ ಶೀಟ್ ಕೊಟ್ಟಿಲ್ಲ' ಎಂದು ನಯನತಾರಾ ಹೇಳಿದ್ದಾರೆ. ಆದರೆ,ಪ್ರೀತಿಯ ಸಲುವಾಗಿಯೇ ಪತ್ನಿ ರಾಮಲತಾರಿಂದ ವಿಚ್ಛೇದನ ಪಡೆದ ಪ್ರಭುದೇವ ಈಗ ಪೆಚ್ಚಾಗಿದ್ದಾರೆ.

ನಯನತಾರಾ ಮತ್ತೆ ತೆಲುಗು ಚಿತ್ರರಂಗದಲ್ಲಿ ಮಿಂಚಲು ಆರಂಭಿಸಿದ್ದು, ನಾಗಾರ್ಜುನ ಜೊತೆ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಪ್ರಭುದೇವ ಕೂಡಾ ನಿರ್ದೇಶಕನಾಗಿ ಹಿಂದಿಯಲ್ಲಿ ಹೆಸರು ಗಳಿಸುವತ್ತ ಯೋಜನೆ ಹಾಕಿಕೊಂಡಿದ್ದಾರೆ. ಇಬ್ಬರನ್ನು ಬೇರೆ ಮಾಡಲು ಚಿತ್ರರಂಗವೇ ಕಾರಣ ಎನ್ನಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಇದು ಮೊದಲ ಪತ್ನಿ ಶಾಪ ಹಾಗೂ ನಯನತಾರಾ ಕ್ರಿಶ್ಚಿಯನ್ ಧರ್ಮ ಬಿಟ್ಟು ಹಿಂದೂ ಧರ್ಮ ಸೇರಿದ ಫಲ ಎಂದು ಸುದ್ದಿ ಹಬ್ಬುತ್ತಿದೆ. ಈ ನಡುವೆ ಪ್ರಭು ಹಾಗೂ ನಯನತಾರಾ ಮತ್ತೆ ಒಂದಾಗಿ ನಲಿದಾಡಿದರೆ ಅದರಲ್ಲಿ ಆಶ್ಚರ್ಯ ಏನಿಲ್ಲ ಎಂದು ಕಾಲಿವುಡ್ ಮಂದಿ ಹೇಳುತ್ತಿದ್ದಾರೆ.

English summary
The 4 years long love affair between Nayanthara and Prabhu Deva comes to an end. According to sources, the actress decided to continue her career in Tamil and Telugu and said a good bye to the actor - director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada