»   » ರಮ್ಯಾ ಬೆನ್ನುಬಿಡದ ವಿವಾದ; ಚಿತ್ರಕ್ಕೂ ಬಂತು ನಂಟು

ರಮ್ಯಾ ಬೆನ್ನುಬಿಡದ ವಿವಾದ; ಚಿತ್ರಕ್ಕೂ ಬಂತು ನಂಟು

Posted By:
Subscribe to Filmibeat Kannada
ಲಕ್ಕಿ ಸ್ಟಾರ್ ರಮ್ಯಾಗೂ ವಿವಾದಗಳಿಗೂ ಬಿಡದ ನಂಟು. ಇಷ್ಟು ದಿನ ವಿವಾದಗಳಿಗೆ ರಮ್ಯಾ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಕಾರಣರಾಗಿರುತ್ತಿದ್ದರು. ಆದರೆ, ಈ ಬಾರಿ ರಮ್ಯಾಗೂ, ವಿವಾದಕ್ಕೂ ಸಂಬಂಧವೇ ಇಲ್ಲ. ಆದರೂ ಆಶ್ಚರ್ಯವೆಂಬಂತೆ ಈ ಬಾರಿ ರಮ್ಯಾ ನಟಿಸಿದ ಚಿತ್ರ 'ಕಠಾರಿವೀರ ಸುರಸುಂದರಾಂಗಿ' ಭಾರೀ ವಿವಾದ ಎದುರಿಸುತ್ತಿದೆ. ಈಗ ಗಾಂಧಿನಗರದಲ್ಲಿ ರಮ್ಯಾ ಚಿತ್ರದಲ್ಲಿ ಇದ್ದರೂ ಸಾಕು, ವಿವಾದ ಸೃಷ್ಟಿಯಾಗುತ್ತದೆ ಎಂಬ ಹಾಸು ಮಾತು ಹುಟ್ಟಿಕೊಂಡಿದೆ.

ಆದರೆ ಈ ಮಾತಿಗೆಲ್ಲಾ ಯಾವ ಪುಷ್ಟಿಯೂ ದೊರೆಯುವುದಿಲ್ಲ. ಕಾರಣ, ಇತ್ತೀಚಿಗೆ ಬಿಡುಗಡೆಯಾಗಿದ್ದ ರಮ್ಯಾ, ಯೋಗೇಶ್ ಅಭಿನಯದ ಸಿದ್ಲಿಂಗು ಚಿತ್ರ ಯಾವುದೇ ವಿವಾದವಿಲ್ಲದೇ ಬಿಡುಗಡೆ ಕಂಡು ಯಶಸ್ವಿಯಾಗಿತ್ತು. ಅಷ್ಟೇ ಅಲ್ಲ, ರಾಧಿಕಾ ನಿರ್ಮಾಣದ ಲಕ್ಕಿಯಲ್ಲೂ ರಮ್ಯಾ, ಯಶ್ ಕಿತ್ತಾಟ ಬಿಟ್ಟರೆ, ರಮ್ಯಾಗೆ ನಿರ್ದೇಶಕರ ಅಥವಾ ನಿರ್ಮಾಪಕರ ಜೊತೆ ಬೇರೆ ಯಾವುದೇ ಜಗಳ ಆಗಿಲ್ಲ. ರಮ್ಯಾ-ಯಶ್ ಕಿತ್ತಾಟದಿಂದ ಚಿತ್ರದ ಓಟಕ್ಕೆ ಯಾವ ತೊಂದರೆಯೂ ಆಗಿಲ್ಲ.

ಇದೀಗ ವಿವಾದದ ಕೇಂದ್ರಬಿಂದುವಾಗಿರುವ ಕಠಾರಿವೀರ ಚಿತ್ರದ ಬಗ್ಗೆ ರಮ್ಯಾ ಹೆಚ್ಚಾಗಿ ಎಲ್ಲೂ ಮಾತಾಡಿಯೇ ಇಲ್ಲ. ಯಾರೊಂದಿಗೂ ರಮ್ಯಾ ಕಿತ್ತಾಡಿಲ್ಲ. ಆದರೆ ಇದೇ ವೇಳೆ ರೂಪಾ ಅಯ್ಯರ್ ಚಿತ್ರ 'ಚಂದ್ರ'ದ ನಾಯಕ ಲವ್ಲಿ ಸ್ಟಾರ್ ಪ್ರೇಮ್ ಜೊತೆ ಕಿತ್ತಾಡಿಕೊಂಡು ರಮ್ಯಾ ಹೊರಬಂದಿದ್ದಾರೆಂಬ ಸುದ್ದಿ ಜಗಜ್ಜಾಹೀರು. ಯಾಕೋ ರಮ್ಯಾ ಮಾತನಾಡಿದರೂ, ಸುಮ್ಮನಿದ್ದರೂ ಅವರಿಗೂ ಅವರ ಚಿತ್ರಕ್ಕೂ ಪ್ರಚಾರ ಸಿಗುವುದು ಗ್ಯಾರಂಟಿ ಎಂಬಂತಾಗಿದೆ. (ಒನ್ ಇಂಡಿಯಾ ಕನ್ನಡ)

English summary
Ramya is the heroine who is always in Controversies. But, particularly in this movie Katari Veera Surasundarangi, there is no role of actress Ramya. Then also unfortunately her movie is in Controversy. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada