»   » ಫಿಲಂ ಚೇಂಬರ್ ಗೆ ತೆಲುಗು ಚಿತ್ರದ 'ಗೋಲಿಮಾರ್'

ಫಿಲಂ ಚೇಂಬರ್ ಗೆ ತೆಲುಗು ಚಿತ್ರದ 'ಗೋಲಿಮಾರ್'

Posted By:
Subscribe to Filmibeat Kannada

ಮೊನ್ನೆ ಹಿಂದಿಯ 'ಕೈಟ್ಸ್' ಚಿತ್ರದ ಹಾರಾಟಕ್ಕೆ ಬ್ರೇಕ್ ಹಾಕಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇದೀಗ ತೆಲುಗಿನ 'ಗೋಲಿಮಾರ್' ಚಿತ್ರಕ್ಕೆ ಗೋಲಿ ಹೊಡೆದಿದೆ. ಆದರೆ ನಿಯಮ ಧಿಕ್ಕರಿಸಿ ಚಿತ್ರ ಪ್ರದರ್ಶಿಸುತ್ತಿರುವ ವಿತರಕರು ಕೆಎಫ್ ಸಿಸಿಗೇ ಗೋಲಿ ಹೊಡೆದಿದ್ದಾರೆ. ಕೆಎಫ್ ಸಿಸಿ ನಿಯಮಗಳನ್ನು ಮೀರಿ 'ಗೋಲಿಮಾರ್' ಚಿತ್ರ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವುದೆ ಈ ವಿವಾದಕ್ಕೆ ಕಾರಣವಾಗಿದೆ.

ವಿತರಣೆ ಹಕ್ಕುಗಳನ್ನು ಮೀರಿ ಚಿತ್ರ ಬಿಡುಗಡೆಯಾದ ಕಾರಣ ಬೆಂಗಳೂರಿನಲ್ಲಿ 'ಗೋಲಿ ಮಾರ್' ಚಿತ್ರದ ಎರಡು ಪ್ರದರ್ಶನಗಳನ್ನು ರದ್ದು ಪಡಿಸಲಾಗಿದೆ. ಪರಭಾಷಾ ಚಿತ್ರಗಳು ನೀತಿ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಬಗ್ಗೆ ಫಿಲಂ ಚೇಂಬರ್ ಚಿತ್ರ ವಿತರಕರನ್ನು ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರು ಹಾಗೂ ರಾಜ್ಯದಾದ್ಯಂತ ಗೋಲಿಮಾರ್ ಚಿತ್ರದ ವಿತರಣೆ ಹಕ್ಕುಗಳನ್ನು ತಿರುಮಲ ಚಿತ್ರದ ಮಾಲಿಕ ಗೋಪಿ ಪಡೆದುಕೊಂಡಿದ್ದಾರೆ. ಕೆಎಫ್ ಸಿಸಿ ನಿಯಮಗಳ ಪ್ರಕಾರ ಬೆಂಗಳೂರಿನ ಹೊರ ಭಾಗದಲ್ಲಿ ನಾಲ್ಕಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವಂತಿಲ್ಲ. ಆದರೆ ಗೋಪಿ ಅವರು ನಾಲ್ಕಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗೋಲಿಮಾರ್ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಒಟ್ಟಿನಲ್ಲಿ ಫಿಲಂ ಚೇಂಬರ್ ನಿಯಮಗಳಿಗೆ ಗೋಲಿಮಾರ್ ಆಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಬೆಂಗಳೂರಿನ ಮೂವಿಲ್ಯಾಂಡ್ ಹಾಗೂ ಉಳಿದ ಚಿತ್ರಮಂದಿರಗಳಲ್ಲಿ ಗೋಲಿಮಾರ್ ಚಿತ್ರ ಪ್ರದರ್ಶನವನ್ನು ನಿಲ್ಲಿಸುವಂತೆ ಫಿಲಂ ಚೇಂಬರ್ ಗೋಪಿಗೆ ಸೂಚಿಸಿದೆ.ವಿಷಯ ಇತ್ಯರ್ಥವಾಗುವ ಬಳಿಕ ಚಿತ್ರ ಪ್ರದರ್ಶನವನ್ನು ರದ್ದುಪಡಿಸಲು ಫಿಲಂ ಚೇಂಬರ್ ಆಜ್ಞಾಪಿಸಿರುವುದಾಗಿ ಕೆಎಫ್ ಸಿಸಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಬಸಂತ್ ಮಾತನಾಡುತ್ತಾ, ಚಿತ್ರ ಬಿಡುಗಡೆಗೂ ಎರಡು ದಿನ ಮುನ್ನ ಗೋಪಿ ತಮ್ಮನ್ನು ಭೇಟಿಯಾಗಿದ್ದರು. ಚಿತ್ರವನ್ನು ಗುರುವಾರವೆ ಬಿಡುಗಡೆ ಮಾಡುತ್ತಿರುವ ಬಗ್ಗೆ ಕಾರಣ ಏನು ಎಂದು ಕೇಳಿದ್ದೆ. ಈ ಬಗ್ಗೆ ಲಿಖಿತಪೂರ್ವ ಹೇಳಿಕೆ ಕೊಡಿ ಎಂದು ಗೋಪಿ ಅವರನ್ನು ಕೇಳಿದ್ದೆ.ಹಾಗೆ ಆಗಲಿ ಎಂದಿದ್ದರು. ಆದರೆ ಅವರು ಮಾತು ತಪ್ಪಿದರು ಎಂದು ಪ್ರತಿಕ್ರಿಯಿಸಿದ್ದಾರೆ.

ಮೂವಿಲ್ಯಾಂಡ್ ಚಿತ್ರಮಂದಿರದಲ್ಲಿ ಬೆಳಗಿನ ಹಾಗೂ ಎರಡನೆ ಆಟವನ್ನು ಹಾಗೂ ಮುಳಬಾಗಿಲು ಮತ್ತು ಹೋಸಕೋಟೆಯಲ್ಲಿ ಚಿತ್ರ ಪ್ರದರ್ಶನವನ್ನು ರದ್ದುಪಡಿಸಿ ಎಂದು ಹೇಳಿದ್ದೆವು. ಮುಳಬಾಗಿಲು ಮತ್ತು ಹೊಸಕೋಟೆಯ ಚಿತ್ರಮಂದಿರಗಳಲ್ಲಿ ಗೋಲಿಮಾರ್ ಚಿತ್ರ ಪ್ರದರ್ಶನವನ್ನು ರದ್ದುಪಡಿಸಲು ಗೋಪಿ ಒಪ್ಪಿದ್ದಾರೆ ಎಂದು ಬಸಂತ್ ತಿಳಿಸಿದ್ದಾರೆ.

ಆದರೆ ಗೋಪಿ ಹೇಳಿದ್ದೇನೆಂದರೆ, ತಾಂತ್ರಿಕ ತೊಂದರೆಯಿಂದ ಮೂವಿಲ್ಯಾಂಡ್ ಚಿತ್ರ ಮಂದಿರದಲ್ಲಿ ಪ್ರದರ್ಶವನ್ನು ರದ್ದುಪಡಿಸಿದ್ದೇವೆ. ಫಿಲಂ ಚೇಂಬರ್ ಜೊತೆ ನನಗೆ ಯಾವುದೇ ತಗಾದೆಯಿಲ್ಲ.ಗೋಲಿಮಾರ್ ಚಿತ್ರ ಉಳಿದ ಚಿತ್ರಮಂದಿರಗಳಲ್ಲೂ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಕ್ಕೆ ಭೇಟಿ ನೀವೂ ಭೇಟಿ ನೀಡಿ ನೋಡಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಫಿಲಂ ಚೇಂಬರ್ ನಿಯಮಗಳಿಗೆ ಗೋಲಿಮಾರ್ ಆಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada