»   » ಅಣ್ಣಾಬಾಂಡ್‌ ವಿರುದ್ಧ 'ಕಠಾರಿ' ಬೀಸಿದ ಮುನಿರತ್ನ

ಅಣ್ಣಾಬಾಂಡ್‌ ವಿರುದ್ಧ 'ಕಠಾರಿ' ಬೀಸಿದ ಮುನಿರತ್ನ

Posted By:
Subscribe to Filmibeat Kannada

ಏಪ್ರಿಲ್ ತಿಂಗಳಲ್ಲಿ ಎರಡು ಬಿಗ್ ಬಜೆಟ್ ಕನ್ನಡ ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಒಂದು ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಾಬಾಂಡ್' ಹಾಗೂ ಇನ್ನೊಂದು ಉಪೇಂದ್ರ ಅಭಿನಯದ 'ಕಠಾರಿವೀರ ಸುರ ಸುಂದರಾಂಗಿ'. ಈ ಎರಡೂ ಚಿತ್ರಗಳು ಹೆಚ್ಚು ಕಡಿಮೆ ಒಂದೇ ವಾರದಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ.

'ಅಣ್ಣಾಬಾಂಡ್' ಚಿತ್ರದ ಬಿಡುಗಡೆ ಸಮಯದಲ್ಲೇ ತಮ್ಮ 'ಕಠಾರಿವೀರ' ಚಿತ್ರವನ್ನು ಮುನಿರತ್ನ ಬಿಡುಗಡೆ ಮಾಡುತ್ತಿರುವ ಹಕೀಕತ್ತೇನು? ಎಂಬ ಪ್ರಶ್ನೆಗೆ ಗಾಂಧಿನಗರದ ಗುಪ್ತಚರ ಇಲಾಖೆ ಕೊಡುವ ಉತ್ತರ ಹೀಗಿದೆ. ಅಣ್ಣಾವ್ರ ಕುಟುಂಬದ ಮೇಲಿನ ಹಳೆಯ ದ್ವೇಷವೇ ಇದಕ್ಕೆ ಕಾರಣ ಎನ್ನಲಾಗಿದೆ.

ಅದೇನೆಂದರೆ ನಿಖಿತಾ ಮೇಲೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ನಿಷೇಧ ಹೇರಿದ್ದರು. ಕೂಡಲೆ ರಾಜ್ ಕುಟುಂಬ ಮಧ್ಯಪ್ರವೇಶಿಸಿ ನೀವು ಮಾಡಿದ್ದು ತಪ್ಪು. ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಅವರ ಮಾತಿಗೆ ತಲೆಬಾಗಿದ್ದ ಮುನಿರತ್ನ ಬಳಿಕ ಕ್ಷಮೆ ಕೋರಿದ್ದರು.

ಇದೆಲ್ಲಾ ಹಳೆ ಘಟನೆ. ಡಾ.ರಾಜ್ ಕುಟುಂಬದ ಮೇಲಿನ ಈ ಹಳೆ ಸಿಟ್ಟನ್ನು ಈಗ ತೀರಿಸಿಕೊಳ್ಳಲು ಹೊರಟಿದ್ದಾರೆ ಮುನಿರತ್ನ ಎನ್ನಲಾಗಿದೆ. ತಮ್ಮ ಭಾರಿ ಬಜೆಟ್‌ನ (ರು.15 ಕೋಟಿ ಎನ್ನಲಾಗಿದೆ) 'ಕಠಾರಿವೀರ' ಚಿತ್ರವನ್ನು 'ಅಣ್ಣಾಬಾಂಡ್' (ರು.5 ಕೋಟಿ ಬಜೆಟ್) ಮೇಲೆ ಪ್ರಯೋಗಿಸಲು ಹೊರಟಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಮುನಿರತ್ನ ಮಾತ್ರ ಈ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. (ಏಜೆನ್ಸೀಸ್)

English summary
Sandalwood film industry is poised to witness a clash of titans in April 2012. Puneeth Rajkumar and Upendra is all set to prove their superiority to the Box Office, as their film Anna Bond and Kataari Veera Sura Sundarangi adjacent screens in a space of one week.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X