For Quick Alerts
  ALLOW NOTIFICATIONS  
  For Daily Alerts

  ಸೆಲ್ಯೂಟ್ ಗೆ ಚುನಾವಣಾ ಆಯೋಗದ ತಡೆಯಾಜ್ಞೆ

  By Staff
  |

  ಆಗಸ್ಟ್ 14ರಂದು ಬಿಡುಗಡೆಯಾಗಬೇಕಿದ್ದ ಬಿಸಿ ಪಾಟೀಲ್ ನಿರ್ದೇಶನದ'ಸೆಲ್ಯೂಟ್' ಚಿತ್ರಕ್ಕೆ ಚುನಾವಣಾ ಆಯೋಗ ತಡೆಯೊಡ್ಡಿದೆ. ರಾಜ್ಯದಲ್ಲಿ ಉಪಚುನಾವಣೆಗಳು ನಡೆಯಲಿರುವ ಹಿನ್ನೆಯಲ್ಲಿ ಚುನಾವಣಾ ಆಯೋಗ ಈ ನಿರ್ಧಾರವನ್ನು ಕೈಗೊಂಡಿದೆ. ಹಿರೇಕೆರೂರಿನ ಹಾಲಿ ಕಾಂಗ್ರೆಸ್ ಶಾಸಕರಾಗಿರುವ ಪಾಟೀಲರು ಪಕ್ಷಕ್ಕೆ ಸಂಬಂಧಪಟ್ಟಂತೆ ಪ್ರಚಾರ ಮಾಡಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣಾ ಆಯೋಗ ಈ ನಿರ್ಬಂಧ ಹೇರಿದೆ.

  ತಾವು ಈ ಉಪಚುನಾವಣೆಗೆ ಸ್ಪರ್ಧಿಸಿಲ್ಲ. ನನಗೂ ಈ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ದಯವಿಟ್ಟು ತಮ್ಮ ಚಿತ್ರ ಬಿಡುಗಡೆಗೆ ಅನುಮಾಡಿಕೊಡಿ ಎಂದು ಬಿ ಸಿ ಪಾಟೀಲರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಚುನಾವಣಾ ಆಯೋಗದಿಂದ ಇನ್ನೂ ಯಾವುದೇ ಸೂಚನೆ ಹೊರಬಿದ್ದಿಲ್ಲ.

  ಈ ಕುರಿತು ಪಾಟೀಲ್ ಮಾತನಾಡುತ್ತಾ, ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ಹೀಗಿದ್ದೂ ತಮ್ಮ ಸೆಲ್ಯೂಟ್ ಚಿತ್ರವನ್ನು ಯಾಕೆ ಮುಂದೂಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇದರಲ್ಲಿ ಕಾಣದ ಕೈವಾಡ ಇರುವ ಬಗ್ಗೆ ಅವರು ಶಂಕೆ ವ್ಯಕ್ತಪಡಿಸಿದರು.

  ಚಿತ್ರವನ್ನು ಒಂದು ತಿಂಗಳ ಕಾಲ ಮುಂದೂಡುವುದುದರಿಂದ ರು.20ರಿಂದ 25 ಲಕ್ಷದಷ್ಟು ನಷ್ಟವಾಗುತ್ತದೆ. ಚಿತ್ರದ ಪ್ರಚಾರ ಕಾರ್ಯವನ್ನು ನಿಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಇದು ಸಾರ್ವರ್ತಿಕ ಚುನಾವಣೆಯಲ್ಲ, ಉಪಚುನಾವಣೆ. ಹೀಗಿದ್ದೂ ಚುನಾವಣಾ ಆಯೋಗ ತಮ್ಮ ಚಿತ್ರಕ್ಕೆ ತಡೆಯೊಡ್ಡಿರುವುದು ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದ್ದಾರೆ.

  ಪಾಟೀಲರು ರಾಜಕೀಯ ರಂಗಕ್ಕೆ ಪ್ರವೇಶಿಸ ಬಳಿಕ ಚಿತ್ರರಂಗದಿಂದ ಬಹಳ ದೂರ ಉಳಿದಿದ್ದರು. ಐದು ವರ್ಷಗಳ ಸುದೀರ್ಘ ವಿರಾಮದ ಬಳಿಕ ಪಾಟೀಲರು ಮತ್ತೆ ಚಿತ್ರರಂಗಕ್ಕೆ ಮರಳಿ ಸೆಲ್ಯೂಟ್ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿ ಸ್ವತಃ ನಟಿಸಿದ್ದರು. ಚಿತ್ರ ಎಲ್ಲ ಹಂತಗಳನ್ನು ದಾಟಿ ಬಿಡುಗಡೆಗೆ ಸಿದ್ಧವಾಗಿತ್ತು. ಈಗ ಚುನಾವಣಾ ನೀತಿ ಸಂಹಿತೆ ರೂಪದಲ್ಲಿ ಸೆಲ್ಯೂಟ್ ಚಿತ್ರಕ್ಕೆ ವಿಘ್ನ ಎದುರಾಗಿದೆ. ಸೆಲ್ಯೂಟ್ ಚಿತ್ರಎರಡು ತಿಂಗಳಷ್ಟು ತಡವಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ.

  (ದಟ್ಸ್ ಕನ್ನಡಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X