For Quick Alerts
  ALLOW NOTIFICATIONS  
  For Daily Alerts

  ಧರ್ಮೇಂದ್ರ 'ಪದ್ಮ'ದ ಹಿಂದೆ ಹೇಮಾ ಮಾಲಿನಿ ಕೈವಾಡ

  By Rajendra
  |

  ಬಾಲಿವುಡ್ ಮಾಜಿ ಹೀರೋಯಿನ್, ಬಿಜೆಪಿ ಸಂಸದೆ ಹಾಗೂ ಕನಸಿನ ಕನ್ಯೆ ಹೇಮಾ ಮಾಲಿನಿ ಹಸ್ತಕ್ಷೇಪದಿಂದಲೇ ಆಕೆಯ ಪತಿ, ಹಿಂದಿ ನಟ, ಮಾಜಿ ಹೀರೋ ಧರ್ಮೇಂದ್ರ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಲು ಕಾರಣ ಎಂಬ ಸಮಾಚಾರವಿದೆ.

  ಪ್ರಧಾನಮಂತ್ರಿಗಳ ಕಾರ್ಯಾಲಯ ಮೂಲಗಳು ಈ ವಿವರಗಳನ್ನು ಬಹಿರಂಗಪಡಿಸಿವೆ. ಇತ್ತೀಚೆಗೆ ಹೇಮಾ ಮಾಲಿನಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದರಂತೆ, ತಮ್ಮ ಕಾಲದ ಸಿನಿಮಾ ತಾರೆಗಳ ಬಗ್ಗೆ ಪ್ರಧಾನಿಗಳಿಗೆ ತುಂಬ ಅಭಿಮಾನ. ಹಾಗಾಗಿ ಕೂಡಲೆ ಆಹ್ವಾನ ನೀಡಿದ್ದಾರೆ.

  ಎಂಬತ್ತು ವರ್ಷ ವಯಸ್ಸಿನ ತಮ್ಮ ಪತಿ ಧರ್ಮೇಂದ್ರ ಹಿಂದಿ ಚಿತ್ರರಂಗಕ್ಕೆ ಸಾಕಷ್ಟು ಕೃಷಿ ಮಾಡಿದ್ದಾರೆ. ಆದರೂ ಎನ್ಡಿಎ ಸರ್ಕಾರ ಅವರ ಸೇವೆಗಳನ್ನು ಗುರುಸಲಿಲ್ಲ. ಅವರಿಗೆ ಪದ್ಮವಿಭೂಷಣ ಅಥವಾ ಪದ್ಮಭೂಷಣ ಎರಡರಲ್ಲಿ ಯಾವುದಾದರೂ ಒಂದು ಪ್ರಶಸ್ತಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಹೇಮಾ ಗೋಳಾಡಿದರಂತೆ. ವಿಶಾಲ ಹೃದಯದ ಪ್ರಧಾನಿಗಳು ವಿಧಿಯಿಲ್ಲದೆ ಧರ್ಮೇಂದ್ರ ಹೆಸರನ್ನು ಪದ್ಮ ಪಟ್ಟಿಯಲ್ಲಿ ಸೇರಿಸಿದ್ದಾರೆ. (ಏಜೆನ್ಸೀಸ್)

  English summary
  Has veteran actress Hema Malini lobbyed to getting Padma award for her hubby Dharmendra? Prime Minister Manmohan Sing's office sources has revealed that Veteran actress lobbyed to be include her hubby Dharmendra name in the awards list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X