For Quick Alerts
  ALLOW NOTIFICATIONS  
  For Daily Alerts

  ಪ್ರಿಯಾ ವಾರಿಯರ್ ಬಗ್ಗೆ ಕೇಳಿ ಬಂದಿರುವ ಈ 5 ಸುದ್ದಿಗಳು ನಿಜಾನ.?

  By Bharath Kumar
  |

  ಕಣ್ಸನ್ನೆ ಮೂಲಕ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ಆದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಪ್ರಿಯಾಗೆ ಬಾಲಿವುಡ್ ನಲ್ಲಿ ಆಫರ್ ಬಂದಿದೆಯಂತೆ. ಆ ಸ್ಟಾರ್ ನಟನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರಂತೆ. ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಾಕಿದ್ರೆ ಇಷ್ಟು ಲಕ್ಷವಂತೆ....ಹಾಗಂತೆ, ಹೀಗಂತೆ ಎಂಬ ಸುದ್ದಿಗಳು ಕೇಳಿ ಬರುತ್ತಲೇ ಇದೆ.

  ಇದೆಲ್ಲ ಎಷ್ಟರಮಟ್ಟಿಗೆ ನಿಜಾನೋ ಗೊತ್ತಿಲ್ಲ. ಆದ್ರೆ, ಪ್ರಿಯಾ ಹೆಸರು ಮಾತ್ರ ಈ ಎಲ್ಲ ವಿಷ್ಯಗಳಲ್ಲಿ ಹೆಡ್ ಲೈನ್ ಆಗಿದೆ. ಅದರಲ್ಲೂ ಸ್ಟಾರ್ ನಟರ ಹೆಸರಿನ ಜೊತೆ ಪ್ರಿಯಾ ಹೆಸರು ಇತ್ತೀಚಿಗೆ ಹೆಚ್ಚು ತಳುಕು ಹಾಕಿಕೊಳ್ಳುತ್ತಿದೆ.

  ಕೇವಲ ಒಂದು ಹಾಡಿನ ಮೂಲಕ ಇಷ್ಟೆಲ್ಲ ಸಂಚಲನ ಸೃಷ್ಟಿಸಿರುವ ನಟಿಯ ಬಗ್ಗೆ ಏನೆಲ್ಲಾ ಸುದ್ದಿಯಾಗಿದೆ ಗೊತ್ತಾ.? ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ಹೆಡ್ ಲೈನ್ ಆಗಿದ್ದ ಟಾಪ್ 5 ಸುದ್ದಿಗಳು ಯಾವುದು.? ಮುಂದೆ ಓದಿ.....

  ರಣ್ವೀರ್ ಸಿಂಗ್ ಸಿನಿಮಾಗೆ ನಾಯಕಿ.!

  ರಣ್ವೀರ್ ಸಿಂಗ್ ಸಿನಿಮಾಗೆ ನಾಯಕಿ.!

  ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆ ಅಭಿನಯಿಸಬೇಕು ಎನ್ನುವ ಆಸೆಯನ್ನ ಪ್ರಿಯಾ ಪ್ರಕಾಶ್ ವಾರಿಯರ್ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು ಅಷ್ಟೇ. ಈ ಆಸೆಯನ್ನ ಅದ್ಯಾವ ದೇವರು ಕೇಳಿಸಿಕೊಂಡನೋ ಏನೋ ಮರುದಿನವೇ ರಣ್ವೀರ್ ಸಿಂಗ್ ಚಿತ್ರಕ್ಕೆ ಪ್ರಿಯಾಗೆ ಅಫರ್ ಬಂದಿದೆ ಎಂಬ ಸುದ್ದಿಯಾಗೋಯ್ತು. ಆಮೇಲೆ ಈ ಚಿತ್ರಕ್ಕೆ ಸೈಫ್ ಪುತ್ರಿ ಸಾರಾ ಅಲಿ ಖಾನ್ ನಾಯಕಿ ಎಂದು ಘೋಷಿಸಿದರು. ಅಲ್ಲಿಗೆ ಪ್ರಿಯಾ ಹೆಸರು ಕೇವಲ ಗಾಸಿಪ್ ಆಗಿತ್ತು.

  ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ಹಬ್ಬಿರುವ ಹೊಸ ಸುದ್ದಿ ನಿಜವೇ.?ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ಹಬ್ಬಿರುವ ಹೊಸ ಸುದ್ದಿ ನಿಜವೇ.?

  ತಮಿಳು ನಟ ಸೂರ್ಯಗೆ ಪ್ರಿಯಾ ಜೋಡಿ.!

  ತಮಿಳು ನಟ ಸೂರ್ಯಗೆ ಪ್ರಿಯಾ ಜೋಡಿ.!

  ಇನ್ನು ತಮಿಳು ಸ್ಟಾರ್ ನಟ ಸಿಂಗಂ ಸೂರ್ಯ ಅವರ ಮುಂದಿನ ಚಿತ್ರದಲ್ಲಿ ಪ್ರಿಯಾ ಅವರನ್ನ ನಾಯಕಿಯನ್ನಾಗಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ದೊಡ್ಡ ಚರ್ಚೆಯಾಗಿತ್ತು. ಆದ್ರೆ, ಇದನ್ನ ನಿರಾಕರಸಿದ ನಿರ್ದೇಶಕ ''ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನ ನಾಯಕಿಯಾಗಿ ಆಯ್ಕೆ ಮಾಡುವ ಯೋಚನೆಯೇ ಇಲ್ಲ. ಚಿತ್ರದಲ್ಲಿ ಅನುಭವಿ ನಟಿಯೇ ಇರ್ತಾರೆ'' ಎಂದು ವದಂತಿಗೆ ಬ್ರೇಕ್ ಹಾಕಿದರು.

  ಕನ್ನಡಕ್ಕೂ ಕಾಲಿಡುತ್ತಿದ್ದಾಳೆ ಕಣ್ಸನ್ನೆ ಹುಡುಗಿ.!

  ಕನ್ನಡಕ್ಕೂ ಕಾಲಿಡುತ್ತಿದ್ದಾಳೆ ಕಣ್ಸನ್ನೆ ಹುಡುಗಿ.!

  ನಿರ್ದೇಶಕ ಯೋಗಿ 'ಯೋಗಿ ಲವ್ಸ್ ಸುಪ್ರಿಯಾ' ಎಂಬ ಹೊಸ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ನಾಯಕಿ ಪಾತ್ರಕ್ಕೆ ಪ್ರಿಯಾ ಅವರನ್ನು ಸಂಪರ್ಕ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಟನೆಯನ್ನು ಯೋಗಿ ಅವರೇ ಮಾಡಲಿದ್ದಾರೆ. ಈಗಾಗಲೆ ಭೇಟಿ ಮಾಡಿದ್ದು, ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ ಎನ್ನಲಾಗಿದೆ. ಆದ್ರೆ, ಆ ಸಿನಿಮಾ ಸೆಟ್ಟೇರುವವರೆಗೂ ಇದು ಸುದ್ದಿಯಾಗಿಯೇ ಉಳಿಯಲಿದೆ.

  ಒಂದು ಪೋಸ್ಟ್ ಗೆ 8 ಲಕ್ಷ ಅಂತೆ.!

  ಒಂದು ಪೋಸ್ಟ್ ಗೆ 8 ಲಕ್ಷ ಅಂತೆ.!

  ಪ್ರಿಯಾ ಪ್ರಕಾಶ್ ವಾರಿಯರ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಾಕಿದ್ರೆ 8 ಲಕ್ಷ ಸಂಭಾವನೆ ಪಡೆಯುತ್ತಾರಂತೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಹುಟ್ಟುಹಾಕಿದೆ. ಬಾಲಿವುಡ್ ತಾರೆಗಳು ಕೂಡ ಇಷ್ಟೊಂದು ಮೊತ್ತ ಪಡೆಯುವುದಿಲ್ಲ ಎನ್ನಲಾಗಿದೆ. ಇದು ನಿಜನಾ ಅಥವಾ ಬರಿ ವದಂತಿಯೋ ಗೊತ್ತಿಲ್ಲ. ಸದ್ಯಕ್ಕೆ ಈ ಸುದ್ದಿ ಮಾತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.

  ಪ್ರಿಯಾ ವಾರಿಯರ್ ಒಂದು 'ಪೋಸ್ಟ್' ಹಾಕಿದ್ರೆ 8 ಲಕ್ಷ ಸಿಗುತ್ತಂತೆ.!ಪ್ರಿಯಾ ವಾರಿಯರ್ ಒಂದು 'ಪೋಸ್ಟ್' ಹಾಕಿದ್ರೆ 8 ಲಕ್ಷ ಸಿಗುತ್ತಂತೆ.!

  ಪ್ರಿಯಾಗಾಗಿ ಇಬ್ಬರು ನಿರ್ದೇಶಕರ ನಡುವೆ ಫೈಟ್.!

  ಪ್ರಿಯಾಗಾಗಿ ಇಬ್ಬರು ನಿರ್ದೇಶಕರ ನಡುವೆ ಫೈಟ್.!

  ಕರಣ್ ಜೋಹರ್ ತಮ್ಮ ‘ಸ್ಟುಡೆಂಟ್​ ಆಫ್​ ದಿ ಇಯರ್ 2​' ಸಿನಿಮಾಗೆ ಪ್ರಿಯಾ ಅವರನ್ನ ನಾಯಕಿಯಾಗಿಸುವ ಉದ್ದೇಶ ಹೊಂದಿದ್ದಾರಂತೆ. ಈ ಮಧ್ಯೆ ನದಿಯಾದ್​ ವಾಲಾ ಇನ್ನೊಂದು ಚಿತ್ರದಲ್ಲಿ ನಟಿಸುವಂತೆ ಬೇಡಿಕೆಯಿಟ್ಟು ಒಪ್ಪಿಗೆಗಾಗಿ ಕಾಯುತ್ತಿದ್ದಾರಂತೆ. ಹೊಸ ನಾಯಕಿಯ ಡೇಟ್ಸ್ ಗಾಗಿ ಸ್ಟಾರ್ ನಿರ್ಮಾಪಕರು ಕಾಯುತ್ತಿರುವುದು ಕೂಡ ಗಾಸಿಪ್ ಎನ್ನಲಾಗುತ್ತಿದೆ.

  ಸಾಮಾಜಿಕ ಜಾಲತಾಣದ ಕ್ವೀನ್ ಪ್ರಿಯಾ ಕನ್ನಡ ಸಿನಿಮಾ ಮಾಡ್ತಾರಂತೆ!ಸಾಮಾಜಿಕ ಜಾಲತಾಣದ ಕ್ವೀನ್ ಪ್ರಿಯಾ ಕನ್ನಡ ಸಿನಿಮಾ ಮಾಡ್ತಾರಂತೆ!

  English summary
  5 rumors about Malayali actress Priya Prakash varrier. Priya Prakash Varrier, The young actress, set to make her debut with 'oru Adaar Love'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X