For Quick Alerts
  ALLOW NOTIFICATIONS  
  For Daily Alerts

  ಮದ್ವೆ ಸುದ್ದಿ ಹೇಳುತ್ತಿದ್ದಂತೆ ಸ್ಟಾರ್ ನಟನ ಚಿತ್ರದಿಂದ ಕಾಜಲ್ ಹೊರಕ್ಕೆ!

  |

  ಮದುವೆ ಆದ್ಮೇಲೆ ನಟಿಯರಿಗೆ ಸಿನಿ ಜಗತ್ತಿನಲ್ಲಿ ಬೇಡಿಕೆ ಕಡಿಮೆ ಆಗುತ್ತದೆ ಎಂಬ ಕೆಟ್ಟ ಸಂಪ್ರದಾಯ ಇದೆ. ವಾಸ್ತವವಾಗಿ ಇದು ಎಷ್ಟು ನಿಜಾ ಎನ್ನುವುದು ಗೊತ್ತಿಲ್ಲ ಆದ್ರೆ ಸನ್ನಿವೇಶಕ್ಕೆ ಇದು ನಿಜ ಇರಬಹುದು ಅನ್ನಿಸಿಬಿಡುತ್ತದೆ.

  ಇದಕ್ಕೊಂದು ತಾಜ ಉದಾಹರಣೆ ಕಾಜಲ್ ಅಗರ್‌ವಾಲ್. ಬಹುಭಾಷಾ ನಟಿ ಕಾಜಲ್ ಉದ್ಯಮಿ ಗೌತಮ್ ಜೊತೆ ವಿವಾಹವಾಗುತ್ತಿರುವುದಾಗಿ ಘೋಷಿಸಿದ್ದಾರೆ. ಅಕ್ಟೋಬರ್ 30 ರಂದು ಮುಂಬೈನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈ ನಡುವೆ ಕಾಜಲ್ ನಟಿಸಿಬೇಕಿದ್ದ ಬಹುದೊಡ್ಡ ಪ್ರಾಜೆಕ್ಟ್‌ನಿಂದ ನಟಿಯನ್ನು ಬದಲಿಸುವ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

  ತ್ರಿಷಾ ನಂತರ ಚಿರಂಜೀವಿ ಸಿನಿಮಾದಿಂದ ಹೊರ ನಡೆದ ನಟಿ ಕಾಜಲ್ ತ್ರಿಷಾ ನಂತರ ಚಿರಂಜೀವಿ ಸಿನಿಮಾದಿಂದ ಹೊರ ನಡೆದ ನಟಿ ಕಾಜಲ್

  ಆಚಾರ್ಯದಿಂದ ಕಾಜಲ್ ಹೊರಕ್ಕೆ!

  ಆಚಾರ್ಯದಿಂದ ಕಾಜಲ್ ಹೊರಕ್ಕೆ!

  ಮೆಗಾಸ್ಟಾರ್ ಚಿರಂಜೀವಿ ನಟಿಸಲಿರುವ ಆಚಾರ್ಯ ಚಿತ್ರದಿಂದ ನಟಿ ಕಾಜಲ್ ಅಗರ್‌ವಾಲ್ ಹೊರಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಶೂಟಿಂಗ್ ಆರಂಭವಾಗುವುದಕ್ಕೆ ಮುಂಚೆಯೇ ಇಂತಹದೊಂದು ಸುದ್ದಿ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

  ಮದುವೆ ಕಾರಣ ಆಯ್ತಾ?

  ಮದುವೆ ಕಾರಣ ಆಯ್ತಾ?

  ಕಾಜಲ್ ಅಗರ್‌ವಾಲ್ ಮದುವೆ ಅಕ್ಟೋಬರ್ 30 ರಂದು ನಡೆಯಲಿದೆ. ಆಚಾರ್ಯ ಸಿನಿಮಾ ಚಿತ್ರೀಕರಣ ನವೆಂಬರ್ ಮೊದಲ ವಾರದಿಂದ ಆರಂಭಿಸಲು ನಿರ್ಧರಿಸಲಾಗಿದೆ. ಮದುವೆ ಆದ ತಕ್ಷಣ ಶೂಟಿಂಗ್‌ನಲ್ಲಿ ಭಾಗಿಯಾಗಬೇಕಾಗಬಹುದು. ಇದು ಕಷ್ಟದ ಸ್ಥಿತಿ ಎಂಬ ಕಾರಣಕ್ಕೆ ಕಾಜಲ್ ಬದಲು ಮತ್ತೊಬ್ಬ ನಟಿಯನ್ನು ಚಿತ್ರತಂಡ ಹುಡುಕುತ್ತಿದೆ ಎಂದು ಹೇಳಲಾಗಿದೆ.

  ಫೋಟೋ ವೈರಲ್: ಕೊನೆಯ ಬ್ಯಾಚುಲರ್ ಪಾರ್ಟಿ ಎಂಜಾಯ್ ಮಾಡಿದ ನಟಿ ಕಾಜಲ್ ಅಗರ್ವಾಲ್ಫೋಟೋ ವೈರಲ್: ಕೊನೆಯ ಬ್ಯಾಚುಲರ್ ಪಾರ್ಟಿ ಎಂಜಾಯ್ ಮಾಡಿದ ನಟಿ ಕಾಜಲ್ ಅಗರ್ವಾಲ್

  ಚಿತ್ರತಂಡ ನಿರಾಕರಣೆ!

  ಚಿತ್ರತಂಡ ನಿರಾಕರಣೆ!

  ಕಾಜಲ್ ಅಗರ್‌ವಾಲ್ ಮದುವೆ ಬಗ್ಗೆ ನಿರ್ಮಾಪಕ ಹಾಗೂ ನಿರ್ದೇಶಕರು ತಲೆಕೆಡಿಸಿಕೊಂಡಿಲ್ಲ. ಮದುವೆಗೂ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ಅವರೇ ನಟಿಸಲಿದ್ದಾರೆ ಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

  ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada
  ಡೇಟ್ ಹೊಂದಾಣಿಕೆ ಆಗ್ತಿಲ್ಲ!

  ಡೇಟ್ ಹೊಂದಾಣಿಕೆ ಆಗ್ತಿಲ್ಲ!

  ಮದುವೆ ಸುದ್ದಿ ಪ್ರಕಟ ಮಾಡುವುದಕ್ಕೆ ಮುಂಚೆಯೂ ಕಾಜಲ್ ಆಚಾರ್ಯದಿಂದ ಹೊರಬರಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗಿತ್ತು. ತಮಿಳಿನಲ್ಲಿ ದೊಡ್ಡ ಪ್ರಾಜೆಕ್ಟ್ ಸಹಿ ಹಾಕಿ ಮುಂಗಡ ಹಣ ಸಹ ಪಡೆದಿರುವ ಕಾರಣ ಈ ಚಿತ್ರದಲ್ಲಿ ನಟಿಸಲು ಡೇಟ್ ಹೊಂದಾಣಿಕೆ ಆಗುತ್ತಿಲ್ಲ. ಹಾಗಾಗಿ, ಆಚಾರ್ಯ ಚಿತ್ರದಿಂದ ಕಾಜಲ್ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ಮಧ್ಯೆ ಮದುವೆ ಸುದ್ದಿಯೂ ಘೋಷಣೆಯಾಗಿದೆ.

  English summary
  After announced her marriage, Megastar Chiranjeevi's Acharya Film team decided to replace Kajal Aggarwal? what is the truth?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X