twitter
    For Quick Alerts
    ALLOW NOTIFICATIONS  
    For Daily Alerts

    'ಆಚಾರ್ಯ' 100 ಕೋಟಿ ಲಾಸ್: ಚಿರಂಜೀವಿ, ರಾಮ್ ಚರಣ್ ಎಡವಿದ್ರಾ?

    |

    'ಕೆಜಿಎಫ್ 2' ಚಿತ್ರದ ನಂತರ ರಿಲೀಸ್ ಆದ ದೊಡ್ಡ ಚಿತ್ರ ಎಂದರೆ 'ಆಚಾರ್ಯ'. ಮೆಗಾ ಸ್ಟಾರ್ ಚಿರಂಜೀವಿ ಮತ್ತು ರಾಮ್‌ ಚರಣ್ ತೇಜ ಇಬ್ಬರು ಇರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಪ್ಪ ಮಗ ಇಬ್ಬರೂ ಒಂದೆ ಚಿತ್ರದಲ್ಲಿ ಇದ್ದಾರೆ ಎಂದರೆ ಕೇಳಬೇಕ, ಈ ಚಿತ್ರ ಸೂಪರ್ ಆಗಿರುತ್ತೆ ಎನ್ನುವ ನಿರೀಕ್ಷೆ ದುಪ್ಪಟ್ಟಾಗಿತ್ತು.

    ಏಪ್ರಿಲ್ 29 ರಂದು 'ಆಚಾರ್ಯ' ಚಿತ್ರ ಬಿಡುಗಡೆ ಆಗಿದೆ. ಚಿತ್ರವನ್ನು ನೋಡಿದರೆಲ್ಲಾ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಯಾಕೆಂದರೆ ನಿರೀಕ್ಷೆ ಜೊತೆಗೆ ಸಿನಿಮಾ ನೋಡಲು ಹೋದವರಿಗೆ ನಿರಾಸೆ ಆಗಿದೆ. ಚಿತ್ರ ರಿಲೀಸ್‌ಗೂ ಮುನ್ನ ಕೂಡ ಹೆಚ್ಚಿನ ಕ್ರೇಜ್ ಇರಲಿಲ್ಲ. ಚಿತ್ರದ ರಿಲೀಸ್ ಬಳಿಕವೂ ಬಕ್ಸಾಫೀಸ್ ಗಳಿಕೆಯಲ್ಲಿ ಚಿತ್ರ ಸೋಲುಂಡಿದೆ.

    'ಆಚಾರ್ಯ' 2ನೇ ದಿನದ ಬಾಕ್ಸಾಫೀಸ್ ರಿಪೋರ್ಟ್: ಚಿರಂಜೀವಿಗೆ ಸೋಲಿನ ಸೂಚನೆ!'ಆಚಾರ್ಯ' 2ನೇ ದಿನದ ಬಾಕ್ಸಾಫೀಸ್ ರಿಪೋರ್ಟ್: ಚಿರಂಜೀವಿಗೆ ಸೋಲಿನ ಸೂಚನೆ!

    ಇನ್ನು ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ರಿಲೀಸ್ ಆದ ಮೊದಲ ದಿನವೇ 'ಆಚಾರ್ಯ' ಬಗ್ಗೆ ನೆಗೆಟಿವ್ ಕಮೆಂಟ್‌ಗಳು ಬಂದಿವೆ. ಮತ್ತು ಚಿತ್ರಕ್ಕೆ ಯಾವುದೇ ರೀತಿಯ ಪಾಸಿಟಿವ್ ವಿಮರ್ಶೆಗಳು ಬಂದಿಲ್ಲ. ಬಾಕ್ಸಾಫೀಸ್‌ನಲ್ಲಿ ಆರಂಭಿಕ ದಿನವೇ ಕಳಪೆ ಮಟ್ಟದ ಗಳಿಕೆ ಕಂಡಿದೆ.

    Recommended Video

    KGF 2 Collection | 18 ನೇ ದಿನವು ಕಲೆಕ್ಷಷನ್ ವಿಚಾರದಲ್ಲಿ ಜಗ್ಗದ 'KGF 2' | Yash | Prashanth Neel
    'ಆಚಾರ್ಯ' ಕಳಪೆ ಪ್ರದರ್ಶನ!

    'ಆಚಾರ್ಯ' ಕಳಪೆ ಪ್ರದರ್ಶನ!

    'ಆಚಾರ್ಯ' ಚಿತ್ರ ಮೊದಲ ದಿನ ಕಳಪೆ ಮಟ್ಟದ ಗಳಿಕೆ ಕಂಡು, ನಂತರ ಎರಡನೇ ದಿನವೂ 'ಆಚಾರ್ಯ' ಉತ್ತಮ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಕುಸಿಯುತ್ತಿದೆ. ಈಗಾಗಲೆ ಚಿತ್ರ 50% ನಷ್ಟ ಅನುಭವಿಸುತ್ತಿದೆ ಎಂದು ಟಾಲಿವುಡ್‌ನಲ್ಲಿ ವರದಿ ಆಗಿದೆ. ಇದರೊಂದಿಗೆ ಪ್ರಮುಖ ಪ್ರಾಂತ್ಯಗಳಲ್ಲಿ ಭಾರಿ ನಷ್ಟ ಕಾಣುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

    'ಆಚಾರ್ಯ' ಚಿತ್ರಕ್ಕೆ 100 ಕೋಟಿ ಲಾಸ್!

    'ಆಚಾರ್ಯ' ಚಿತ್ರಕ್ಕೆ 100 ಕೋಟಿ ಲಾಸ್!

    ಆಚಾರ್ಯ ಸಿನಿಮಾವನ್ನು ಅದ್ದೂರಿ ಸೆಟ್‌ನಲ್ಲಿ, ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಕಲರ್ ಪುಲ್ ಫ್ರೇಮ್ ಬಿಟ್ಟರೆ ಚಿತ್ರದಲ್ಲಿ ಬೇರೆ ಏನು ಕಾಣುವುದಿಲ್ಲ. ಸದ್ಯ ಚಿತ್ರಕ್ಕೆ ಅಪಾರ ನಷ್ಟ ಆಗಿರುವ ಬಗ್ಗ ವರದಿ ಆಗಿದೆ. 140 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈಗ ಆಚಾರ್ಯ ಚಿತ್ರಕ್ಕೆ 100 ಕೋಟಿ ನಷ್ಟ ಆಗಿದೆ ಎನ್ನಲಾಗಿದೆ.

    'ಆಚಾರ್ಯ' ಬಾಕ್ಸಾಫೀಸ್ ದುರಂತ!

    'ಆಚಾರ್ಯ' ಚಿತ್ರಕ್ಕೆ ಪ್ರೀ- ರಿಲೀಸ್ ವ್ಯಾಪಾರ ಮಾತ್ರ ಹೆಚ್ಚಾಗಿ ಲಾಭ ತಂದು ಕೊಟ್ಟಿದೆ. ಮೂಲಗಳ ಪ್ರಕಾರ ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ 133 ಕೋಟಿಗೆ ಎನ್ನಲಾಗಿದೆ. ಇನ್ನು ವ್ಯಾಪಾರ ತಂತ್ರಜ್ಞರು ಆಚಾರ್ಯ ಚಿತ್ರದ ಅಂಕಿ ಅಂಶಗಳನ್ನು ಲೆಕ್ಕಾ ಹಾಕಿದ್ದರೆ. ಆ ಲೆಕ್ಕಾಚಾರದ ಪ್ರಕಾರ ಬಾಕ್ಸಾಫೀಸ್ ದುರಂತಕ್ಕೆ ಸಾಕ್ಷಿ ಆಗಲಿದೆ ಎನ್ನಲಾಗುತ್ತಿದೆ. ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಅಂತಹ ಇಬ್ಬರು ನಟರು ಇರುವ ದೊಡ್ಡ ಚಿತ್ರ ಈ ಮಟ್ಟಿಗೆ ಹಳ್ಳ ಹಿಡಿದು ಬಿಟ್ಟಿದೆಯಲ್ಲಾ ಎನ್ನುವ ಚರ್ಚೆ ಹುಟ್ಟಿದೆ.

    ಚಿರಂಜೀವಿಗೆ 'ಆಚಾರ್ಯ' ಸೋಲಿನ ರುಚಿ!

    ಚಿರಂಜೀವಿಗೆ 'ಆಚಾರ್ಯ' ಸೋಲಿನ ರುಚಿ!

    'ಆಚಾರ್ಯ' ನಿಸ್ಸಂದೇಹವಾಗಿ ಕೊರಟಾಲ ಶಿವ ನಿರ್ದೇಶನದ ಟ್ರ್ಯಾಕ್ ರೆಕಾರ್ಡ್‌ಗೆ ಕಳಂಕವಾಗಿದೆ. ಒಬ್ಬ ಅನುಭವಿ ನಿರ್ದೇಶಕ ಹೀಗೊಂದು ಸಿನಿಮಾ ಮಾಡಿದ್ದಾರೆ ಎಂದರೆ ನಂಬುವುದು ಕಷ್ಟ. ಹಾಗಾಗಿ ಅವರ ಮುಂದಿನ ಚಿತ್ರ ಜೂ.ಎನ್‌ಟಿಆರ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರ ಉತ್ತಮವಾಗಿ ಮೂಡಿ ಬರಲಿ ಎನ್ನುವ ಆಶಯ ವ್ಯಕ್ತವಾಗಿದೆ.

    English summary
    Acharya Loss 100 Crore, box office Cllection Is Very Dull, Collection detils Is Here
    Monday, May 2, 2022, 10:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X