For Quick Alerts
  ALLOW NOTIFICATIONS  
  For Daily Alerts

  ಏನು ಮಾಯವೋ ಏನೋ ಕಿರುತೆರೆಗೆ ಚಿರಂಜೀವಿ

  By ಅನಂತರಾಮು, ಹೈದರಾಬಾದ್
  |

  ಇದು ಏನು ಮಾಯವೋ ಏನು ಮರ್ಮವೋ ಗೊತ್ತಿಲ್ಲ ಕಿರುತೆರೆಗೆ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಎಂಟ್ರಿ ಕೊಡುತ್ತಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಸಚಿವರಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಟಾರ್ ಮೆರುಗನ್ನು ತಂದಂತಹ ಹೀರೋ ಈಗ ಜೀರೋ. ಸದ್ಯಕ್ಕೆ ಅವರು ರಾಜ್ಯಸಭಾ ಸದಸ್ಯರಾಗಿ ಮುಂದುವರಿಯಲಿದ್ದಾರೆ.

  ಚಿರಂಜೀವಿ ಇಮೇಜನ್ನು ನಂಬಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ಸೀಮಾಂಧ್ರದಲ್ಲಿ ಸಿಕ್ಕಿದ್ದು ಸೀರುಂಡೆ. ಅತ್ತ ರಾಜಕೀಯ ಭವಿಷ್ಯವೂ ಇಲ್ಲದೆ ಇತ್ತ ಚಿತ್ರಗಳು ಇಲ್ಲದೆ ಚಿರಂಜೀವಿ ಸದ್ಯಕ್ಕೆ ಖಾಲಿ ಕುಳಿತಿದ್ದಾರಂತೆ. ಈಗ ಅವರಿಗೆ ಇದ್ದಕ್ಕಿದ್ದಂತೆ ತಮ್ಮ 150ನೇ ಚಿತ್ರ ನೆನಪಿಗೆ ಬಂದಂತಿದೆ. [ಚುನಾವಣೆಯಲ್ಲಿ ಗೆದ್ದ ಮತ್ತು ಬಿದ್ದ ಸೆಲೆಬ್ರಿಟಿಗಳು]

  ಇದರ ಜೊತೆಗೆ ಅವರು ಶೀಘ್ರದಲ್ಲೇ ಕಿರುತೆರೆಗೂ ಅಡಿಯಿಡಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಕೇಳಿಬರುತ್ತಿದೆ. ರಿಯಾಲಿಟಿ ಶೋ ಒಂದನ್ನು ಚಿರಂಜೀವಿ ನಡೆಸಿಕೊಡಲಿದ್ದಾರಂತೆ. ಬೆಳ್ಳಿತೆರೆಯ ಮೇಲೆ ಮಿನುಗಿ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ ಚಿರಂಜೀವಿಗೆ ಇದೆಲ್ಲಾ ಬೇಕಾಗಿತ್ತಾ ಎಂಬ ಮಾತುಗಳು ಆಂಧ್ರದಲ್ಲಿ ಬಾಯಿಂದ ಬಾಯಿಗೆ ಹರಿದಾಡುತ್ತಿವೆ.

  ಖಾಸಗಿ ಟಿವಿ ವಾಹಿನಿಯೊಂದು ಚಿರಂಜೀವಿ ಅವರನ್ನು ಈಗಾಗಲೆ ಸಂಪರ್ಕಿಸಿದ್ದು ಶೋ ನಿರ್ವಹಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದೆಯಂತೆ. ಆಗಸ್ಟ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಿರಂಜೀವಿ ತನ್ನ 150ನೇ ಚಿತ್ರವನ್ನೂ ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

  ಇಲ್ಲಿ ವಿಶೇಷ ಎಂದರೆ ಅಪ್ಪನ ಚಿತ್ರವನ್ನು ಮಗ ನಿರ್ಮಿಸಲಿರುವುದು. ಚಿರಂಜೀವಿ ಪುತ್ರ ರಾಮ್ ಚರಣ್ ಅಪ್ಪನ 150ನೇ ಚಿತ್ರವನ್ನು ನಿರ್ಮಿಸಲಿದ್ದಾರಂತೆ. ರಾಜಕೀಯಕ್ಕೆ ಅಡಿಯಿಟ್ಟ ಮೇಲೆ ಚಿರಂಜೀವಿ ದೇಹದ ತೂಕವೂ ಸಿಕ್ಕಾಪಟ್ಟೆ ಬದಲಾಗಿದೆ. ಇನ್ನು ಅವರು ಮುಂಚಿನಂತೆ ಸ್ಟೆಪ್ ಹಾಕುವುದು ಕಷ್ಟ.

  ಇನ್ನು ಅವರು ತಮ್ಮ 150ನೇ ಚಿತ್ರದ ಕಥೆಯನ್ನು ತಮ್ಮ ಮುಂದಿನ ರಾಜಕೀಯ ಭವಿಷ್ಯತ್ತಿಗೆ ಅನುವಾಗುವಂತೆ ತೆರೆಗೆ ತರಲಾಗುತ್ತಿದೆಯಂತೆ. ತಮ್ಮ ರಾಜಕೀಯ ಜೀವನಕ್ಕೆ ಪ್ಲಸ್ ಪಾಯಿಂಟ್ ಆಗುವಂತೆ ಇದೊಂದು ಸಂದೇಶಾತ್ಮಕ ಚಿತ್ರ ಎನ್ನುತ್ತವೆ ಮೂಲಗಳು.

  English summary
  According to sources, Chiranjeevi, who has lost in the general elections, is very disappointed to overcome the sadness of the loss, Chiranjeevi is going to get back to films. But before that can happen, Chiranjeevi might host a reality TV show, is the latest industry buzz doing the rounds.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X