»   » ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ್ರಾ ನಟ ಧ್ರುವ ಶರ್ಮಾ.?

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ್ರಾ ನಟ ಧ್ರುವ ಶರ್ಮಾ.?

Posted By:
Subscribe to Filmibeat Kannada

ನಟ ಹಾಗೂ ಸಿಸಿಎಲ್ ಕ್ರಿಕೆಟ್ ಆಟಗಾರ ಧ್ರುವ ಶರ್ಮಾ ಇಂದು ಮುಂಜಾನೆ ಅನಾರೋಗ್ಯದ ಹಿನ್ನೆಲೆ ಸಾವುಗೀಡಾಗಿದ್ದರು ಎನ್ನಲಾಗಿತ್ತು. ಆದ್ರೀಗ, ಧ್ರುವ ಶರ್ಮಾ ಅವರ ಸಾವು ಸಹಜವಾದುದ್ದಲ್ಲ. ಅವರ ಸಾವು ಆತ್ಮಹತ್ಯೆ ಎಂದು ಹೇಳಲಾಗ್ತಿದೆ.

'ಸ್ನೇಹಾಂಜಲಿ' ನಟ ಧ್ರುವ್ ಶರ್ಮ ನಿಧನ

35 ವರ್ಷದ ಧ್ರುವ ಶರ್ಮಾ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದರು ಎನ್ನುವ ಸುದ್ದಿ ಕೇಳಿದಾಗ, ಎಲ್ಲರಲ್ಲೂ ಅನುಮಾನ ಮೂಡಿತ್ತು. ಇಷ್ಟು ಚಿಕ್ಕವಯಸ್ಸಿಗೆ ಬಹು ಅಂಗಾಂಗ ವೈಫಲ್ಯವಾಗುತ್ತಾ ಎಂಬ ಪ್ರಶ್ನೆ ಕಾಡಿತ್ತು. ಹೀಗಿರುವಾಗ ಧ್ರುವ ಶರ್ಮಾ ಅವರ ಮೃತದೇಹ ನೀಲಿ ಬಣ್ಣಕ್ಕೆ ತಿರುಗಿದೆ ಮತ್ತು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.

ಹಾಗಿದ್ರೆ, ನಿಜಕ್ಕೂ ಧ್ರುವ ಶರ್ಮಾ ಅವರದ್ದು ಆತ್ಮಹತ್ಯೆನಾ? ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಮುಂದೆ ಓದಿ.....

ಆತ್ಮಹತ್ಯೆ ಮಾಡಿಕೊಂಡ್ರಾ ಧ್ರುವ ಶರ್ಮಾ!

ನಟ ಧ್ರುವ ಶರ್ಮಾ ಅವರದ್ದು ಸಹಜ ಸಾವಲ್ಲ. ಜುಲೈ 29 ರಂದು ವಿಷ ಸೇವಿಸಿ ನಟ ಧ್ರುವ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಕಾರಣಕ್ಕೆ ಅವರನ್ನ ಹೆಬ್ಬಾಳದ ಕೊಲಂಬಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ, ಇಂದು (ಆಗಸ್ಟ್ 1) ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗ್ತಿದೆ.

ಆರ್ಥಿಕ ಸಮಸ್ಯೆಯಿಂದ ಬೇಸತ್ತಿದ್ದರು.!

ನಟ ಧ್ರುವ ಶರ್ಮಾ ಅವರು ವೈಯಕ್ತಿಕವಾಗಿ ಒಂದು ಬಿಸ್ ನೆಸ್ ಮಾಡುತ್ತಿದ್ದರು. ಈ ಉದ್ಯಮದಲ್ಲಿ ಅವರಿಗೆ ನಷ್ಟವಾಗಿತ್ತು. ಹೀಗಾಗಿ, ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ತಂದೆ-ಮಗನ ಮಧ್ಯೆ ಮನಸ್ತಾಪ.!

ಈ ವಿಚಾರವಾಗಿ ತಂದೆ ಸುರೇಶ್ ಶರ್ಮಾ ಹಾಗೂ ಮಗನ ಮಧ್ಯೆ ಮನಸ್ತಾಪ ಉಂಟಾಗಿತ್ತು ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಮರಣೋತ್ತರ ಪರೀಕ್ಷೆ ಯಾಕೆ?

ಧ್ರುವ ಶರ್ಮಾ ಅವರ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆಯನ್ನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಧ್ರುವ ಶರ್ಮಾ ಅವರದ್ದು ಸಹಜ ಸಾವು ಎನ್ನುವುದಾರೇ, ಮರಣೋತ್ತರ ಪರೀಕ್ಷೆ ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ.

ಸ್ಪಷ್ಟ ಮಾಹಿತಿ ನೀಡುತ್ತಿಲ್ಲ

ಧ್ರುವ ಶರ್ಮಾ ಅವರ ಸಾವಿನ ಬಗ್ಗೆ ತಂದೆ ಸುರೇಶ್ ಶರ್ಮಾ ಅವರಗಾಲಿ, ಅಥವಾ ಆಸ್ಪತ್ರೆಯ ವೈದ್ಯರಾಗಲಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಹೀಗಾಗಿ, ಧ್ರುವ ಶರ್ಮಾ ಅವರ ಸಾವಿನ ಬಗ್ಗೆ ಮತ್ತಷ್ಟು ಅನುಮಾನ ಮೂಡಿತ್ತಿದೆ.

ಪೊಲೀಸರಿಗೆ ಮಾಹಿತಿ ನೀಡಿರುವ ವೈದ್ಯರು

ಇನ್ನು ನಟ ಧ್ರುವ ಶರ್ಮಾ ಅವರ ಸಾವಿನ ಬಗ್ಗೆ ರಾಜಾನುಕುಂಟೆ ಪೊಲೀಸರಿಗೆ ಆಸ್ಪತ್ರೆಯಿಂದ ಮಾಹಿತಿ ನೀಡಲಾಗಿದೆ. ಈ ವಿಚಾರವಾಗಿ ಪೊಲೀಸರು ಕೂಡ ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Kannada Actor Dhruv Sharma No More | Filmibeat Kannada

ದೂರು ದಾಖಲಾಗಿಲ್ಲ

ನಟ ಧ್ರುವ ಶರ್ಮಾ ಅವರ ತಂದೆ ಸುರೇಶ್ ಶರ್ಮಾ ಅವರ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ, ತಮ್ಮ ಮಗನ ಸಾವಿನ ಬಗ್ಗೆ ದೂರು ದಾಖಲಿಸಿದ್ದಾರೆ ಎನ್ನಲಾಗಿತ್ತು. ಆದ್ರೆ, ನಾವು ಯಾವುದೇ ದೂರು ದಾಖಲಿಸಿಲ್ಲ ಎಂದು ಧ್ರುವ ಶರ್ಮಾ ಅವರ ಚಿಕ್ಕಪ್ಪ ದಿನೇಶ್ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಟ ಧ್ರುವ ಶರ್ಮಾ ಅಭಿನಯಿಸಿದ್ದ ಕನ್ನಡ ಚಿತ್ರಗಳಿವು

English summary
Actor Dhruv Sharma committed suicide? Dhruv Sharma Passes Away on Today Morning (August 1st).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada