For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯಲ್ಲಿ ಬಿದ್ದ ಜೆಕೆ: ಸಮಂತಾ ಜೊತೆಗೆ ಮದುವೆ ಯಾವಾಗ?

  |

  ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಆಗಿ ಮಿಂಚಿದ ನಟರಲ್ಲಿ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಕೂಡ ಒಬ್ಬರು. ಜೆಕೆ ಕಿರುತೆರೆ ಮೂಲಕ ತಮ್ಮ ಬಣ್ಣದ ಬದುಕಿನ ಪಯಣವನ್ನು ಆರಂಭಿಸಿದರು. ಕಡಿಮೆ ಸಮಯದಲ್ಲೇ ಜೆಕೆ ಕಿರುತೆರೆಯ ಸೂಪರ್ ಸ್ಟಾರ್‌ ಆಗಿ ಮಿಂಚಿದರು. ಮನೆ ಮನೆಯಲ್ಲೂ ಸೂಪರ್ ಸ್ಟಾರ್ ಆಗಿ ಕಾರ್ತಿಕ್ ಜಯರಾಮ್ ಮಿಂಚಿದರು.

  ಆದರೆ ಕಾರ್ತಿಕ್ ಜಯರಾಮ್ ಸಿನಿಮಾರಂಗದಲ್ಲಿ, ನಾಯಕನಾಗಿ ದೊಡ್ಡ ಯಶಸ್ಸು ಕಂಡಿಲ್ಲ. ಅದರೂ ಸಾಕಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇನ್ನು ಜೆಕೆ ಸದಾ ತಮ್ಮ ಫಿಟ್‌ನೆಸ್ ಮೂಲಕ ಗಮನ ಸೆಳೆಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಫಿಟ್ನೆಸ್ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಾರೆ.

  ಕಿರುತೆರೆ ರಾವಣ ಜೆಕೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಕಿರುತೆರೆ ರಾವಣ ಜೆಕೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

  ಇನ್ನು ಜೆಕೆಗೆ ಸದಾ ಮದುವೆಯ ಬಗ್ಗೆ ಒಂದು ಪ್ರಶ್ನೆ ಎದುರಾಗುತ್ತಲೆ ಇರುತ್ತದೆ. ಅದುವೇ ಮದುವೆ ಯಾವಾಗ ಎನ್ನುವ ಬಗ್ಗೆ. ಈಗ ಇದಕ್ಕೆ ಜೆಕೆ ಸೈಲೆಂಟ್ ಆಗಿಯೇ ಉತ್ತರ ಕೊಟ್ಟಂತಿದೆ. ಅಂದ್ರೆ ಜೆಕೆ ಮದುವೆ ಆಗ್ತಿದ್ದಾರೆ?, ಹುಡುಗಿ ಯಾರು ಎನ್ನುವ ಬಗ್ಗೆ ಮುಂದೆ ಓದಿ...

  ಜೆಕೆ ಗರ್ಲ್ ಫ್ರೆಂಡ್ ಇವರೇನಾ?

  ನಟ ಜೆಕೆ ಸದ್ಯ ಹಲವು ಸಿನಿಮಾಗಳಲ್ಲಿ, ಕಿರುತೆರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಬಿಟ್ಟರೆ ಜೆಕೆ ಹೆಚ್ಚಾಗಿ ಗಮನ ಸೆಳೆಯೋದು ತಮ್ಮ ಫಿಟ್ ನೆಸ್‌ನಿಂದ. ಈಗ ಜೆಕೆ ಹುಡುಗಿಯ ವಿಚಾರದಲ್ಲಿ ಗಮನ ಸೆಳೆದಿದ್ದಾರೆ. ನಟ ಜೆಕೆ ತನ್ನ ಲೈಫ್ ಲೈನ್ ಎಂದು ಬರೆದುಕೊಂಡು ಪೋಟೋ ಹಂಚಿಕೊಂಡಿದ್ದಾರೆ ಅಪರ್ಣಾ ಸಮಂತಾ.

  ಐರಾವನ್ ಸಿನಿಮಾ ಆರಂಭಿಸಿದ ನಟ ಕಾರ್ತಿಕ್ ಜಯರಾಂಐರಾವನ್ ಸಿನಿಮಾ ಆರಂಭಿಸಿದ ನಟ ಕಾರ್ತಿಕ್ ಜಯರಾಂ

  ಅಪರ್ಣಾ ಸಮಂತಾ ಜೆಕೆ ಗರ್ಲ್ ಫ್ರೆಂಡ್?

  ನಟ ಜೆಕೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಫಿಟ್ನೆಸ್ ಮತ್ತು ಫ್ಯಾಷನ್ ಬಗ್ಗೆ ಫೊಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಆದರೆ ಇತ್ತೀಚೆಗೆ ಫ್ಯಾಷನ್ ಜೊತೆಗೆ ತಮ್ಮ ಲವ್ ಲೈಫ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೆ ಜೆಕೆ ಅವರ ಖಾತೆಯಲ್ಲಿ ಅಪರ್ಣಾ ಸಮಂತಾ ಎನ್ನುವವರ ಫೊಟೋಗಳ ಪೋಸ್ಟ್ ಆಗುತ್ತಿವೆ. ಇವರು ಯಾರು ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ಹೊಸ ಪೋಸ್ಟ್‌ನಲ್ಲಿ ಈ ಬಗ್ಗೆ ಜೆಕೆ ಹಿಂಟ್ ಕೊಟ್ಟಿದ್ದಾರೆ.

  ಜೆಕೆ ಲೈಫ್ ಲೈನ್ ಅಪರ್ಣಾ ಸಮಂತಾ ಯಾರು?

  ಅಪರ್ಣಾ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜೆಕೆ ಜೊತೆಗಿನ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ "ನನ್ನ ಲೈಫ್‌ ಲೈನ್" ಎಂದು ಬರೆದುಕೊಂಡು ಹೃದಯದ ಚಿನ್ಹೆ ಹಾಕಿದ್ದಾರೆ. ಅಪರ್ಣಾ ಹಾಕಿದ ಫೋಟೋವನ್ನು ಕಾರ್ತಿಕ್ ಜಯರಾಮ್ ಕೂಡ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಈಕೆ ಜೆಕೆಯ ಬಾಳ ಸಂಗಾತಿ ಆಗುವ ಪೋರಿ ಎನ್ನಲಾಗುತ್ತಿದೆ. ಈಕೆ ಜೆಕೆಯ ಸ್ಟೈಲಿಸ್ಟ್ ಎನ್ನಲಾಗಿದೆ.

  ಕಾಲ ಕಾಲಕ್ಕೆ ನಡೆಯಬೇಕಾದದ್ದು ನಡೆದೇ ನಡೆಯುತ್ತೆ..!- ಜೆ.ಕೆಕಾಲ ಕಾಲಕ್ಕೆ ನಡೆಯಬೇಕಾದದ್ದು ನಡೆದೇ ನಡೆಯುತ್ತೆ..!- ಜೆ.ಕೆ

  ಸಿಹಿ ಸುದ್ದಿ ಕೊಡ್ತಾರ ಜೆಕೆ?

  ಈ ಸುದ್ದಿ ಸದ್ಯ ಊಹಾಪೋಹಗಳ ನಡುವೆ ಇದೆ. ಆದರೆ ಈ ಬಗ್ಗೆ ಜೆಕೆ ಮತ್ತು ಅಪರ್ಣಾ ಇಬ್ಬರು ಸಿಹಿ ಕೊಟ್ಟು, ಅಧಿಕೃತ ಪಡಿಸುತ್ತಾರಾ ನೋಡ್ಬೇಕು. ಇನ್ನು ನಟ ಜೆಕೆ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಹೆಸರುವಾಸಿ ಆಗಿದ್ದು, ಹಲವು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 15ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  English summary
  Actor Karthik Jayaram New Girlfriend Samanta Photo Viral In Social Media, Know More,
  Monday, May 30, 2022, 16:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X