For Quick Alerts
  ALLOW NOTIFICATIONS  
  For Daily Alerts

  ಸಿಎಂ ಸಿದ್ಧರಾಮಯ್ಯ ಪರವಾಗಿ ಕಿಚ್ಚ ಸುದೀಪ್ ಚುನಾವಣಾ ಪ್ರಚಾರ ?

  By Naveen
  |
  ಸಿದ್ದು - ಸುದೀಪ್ ಮಧ್ಯೆ ಇದೆ ಒಂದು ನಂಟು !| FIlmibeat Kannada

  ಕನ್ನಡ ಚಿತ್ರರಂಗದ ಕೆಲವು ನಟರು ತಾವೇ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದರೆ, ಇನ್ನೂ ಕೆಲವು ನಟರು ತಮ್ಮ ಮೆಚ್ಚಿನ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಸದ್ಯ ಕನ್ನಡದ ಮತ್ತೊಬ್ಬ ನಟ ಸುದೀಪ್ ಕೂಡ ಚುನಾವಣಾ ಕಣಕ್ಕೆ ದುಮುಕಿದ್ದಾರೆ ಎಂದು ಹೇಳಲಾಗುತ್ತಿದೆ.

  ಸಿ ಎಂ ಸಿದ್ಧರಾಮಯ್ಯ ಈ ಬಾರಿ ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮುಖ್ಯಮಂತ್ರಿಗಳ ಪರವಾಗಿ ಸುದೀಪ್ ಪ್ರಚಾರ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಸುದೀಪ್ ಮತ್ತು ಸಿದ್ಧರಾಮಯ್ಯ ಇಬ್ಬರ ನಡುವೆ ಒಳ್ಳೆಯ ಒಡನಾಟ ಇದ್ದು, ಚುನಾವಣಾ ಪ್ರಚಾರದ ಮೂಲಕ ಅದು ಮುಂದುವರೆಯುತ್ತಿದೆ.

  ಯಾವ ನಟ-ನಟಿ, ಯಾರ ಪರ ಎಲ್ಲೆಲ್ಲಿ ಪ್ರಚಾರ ಮಾಡಿದ್ರು.? ಯಾವ ನಟ-ನಟಿ, ಯಾರ ಪರ ಎಲ್ಲೆಲ್ಲಿ ಪ್ರಚಾರ ಮಾಡಿದ್ರು.?

  ಈ ಹಿಂದೆ ಅನೇಕ ಬಾರಿ ಬೇರೆ ಬೇರೆ ಕಾರಣಕ್ಕೆ ಸಿದ್ಧರಾಮಯ್ಯ ಅವರನ್ನು ಬೇಟಿ ಮಾಡಿದ್ದ ಸುದೀಪ್ ಈಗ ಅವರಿಗಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರಂತೆ. ಇನ್ನು ಸಾಕಷ್ಟು ಬಾರಿ ಸುದೀಪ್ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಇತ್ತು, ಆದರೆ ಅವರು ಸ್ಪಷ್ಟವಾಗಿ ರಾಜಕೀಯದ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಸಿದ್ಧರಾಮಯ್ಯ ಅವರ ಜೊತೆಗೆ ತಮ್ಮ ಆಪ್ತರಾಗಿರುವ ಸುರಪುರದ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರಿಗಾಗಿ ಸಹ ಕಿಚ್ಚ ಮತಯಾಚನೆ ಮಾಡಲಿದ್ದಾರಂತೆ.

  ಅಂದಹಾಗೆ, ಸುದೀಪ್ ಹೊರತಾಗಿ ನಟ ಯಶ್ ಕೂಡ ಚುನಾವಣಾ ಪ್ರಚಾರದಲ್ಲಿ ಬಿಜಿ ಇದ್ದಾರೆ. ಉಳಿದಂತೆ, ಲೂಸ್ ಮಾದ ಯೋಗೀಶ್, ನಟಿ ಮಯೂರಿ, ನಿಖಿಲ್ ಕುಮಾರ್, ಪೂಜಾ ಗಾಂಧಿ, ಸಾಧುಕೋಕಿಲ, 'ತಿಥಿ' ಖ್ಯಾತಿಯ ಸೆಂಚುರಿ ಗೌಡ ಸಹ ಚುನಾವಣಾ ಪ್ರಚಾರಕ್ಕೆ ತಾರ ಮೆರಗು ನೀಡಿದ್ದಾರೆ.

  English summary
  Karnataka Election 2018 : According to the source kannada actor Kiccha Sudeep will campaign for CM Siddaramaih.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X