»   » ಮಿಸ್ಟರ್ ರಜನಿಕಾಂತ್ ಆಗ್ತಿದ್ದಾರೆ ಕೋಮಲ್ ಕುಮಾರ್

ಮಿಸ್ಟರ್ ರಜನಿಕಾಂತ್ ಆಗ್ತಿದ್ದಾರೆ ಕೋಮಲ್ ಕುಮಾರ್

By: ಜೀವನರಸಿಕ
Subscribe to Filmibeat Kannada

ಗೋವಿಂದಾ ಗೋವಿಂದ ಅಂತ ಗೆಲುವುಗಳು ಗೋವಿಂದಾಯ ನಮಃ ಚಿತ್ರಕ್ಕೇ ಕೈ ಕೊಟ್ಟ ನಂತ್ರ ಕನ್ನಡದ ಸೆನ್ಸೇಷನಲ್ ಸ್ಟಾರ್ ಕೋಮಲ್ ತಮಿಳು ಚಿತ್ರರಂಗದ ಕಡೆ ಮುಖಮಾಡಿರೋ ಸುದ್ದಿ ಬಂದಿತ್ತು.

ಈಗ ಕೋಮಲ್ ಅಭಿನಯಿಸ್ತಿರೋ ತಮಿಳು ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಕೋಮಲ್ ಅವರು 'ಮಿಸ್ಟರ್ ರಜನಿಕಾಂತ್' ಆಗಿ ನಟಿಸ್ತಿದ್ದಾರೆ. ಅಂದ್ರೆ ಚಿತ್ರದ ಹೆಸ್ರು ರಜನಿಕಾಂತ್ ಅಲ್ಲದಿದ್ರೂ ರಜನಿಕಾಂತ್ ಶೈಲಿಯ ಸಂಪೂರ್ಣ ಅನುಕರಣೆ ಚಿತ್ರದಲ್ಲಿ ಇರಲಿದೆಯಂತೆ. [ಗೋವಾ ಚಿತ್ರ ವಿಮರ್ಶೆ]

Actor Komal Kumar to debut Kollywood

ರಜನಿಕಾಂತ್ ಮೇಲಿರೋ ಅಭಿಮಾನ ಮತ್ತು ರಜನಿಕಾಂತ್ ಪ್ರೇರಣೆಯಿಂದ ಸಿನಿಮಾ ನಟನೆಗಿಳಿದ ಕೋಮಲ್ ಅವರ ಶೈಲಿಯನ್ನ ಅನುಕರಿಸಿ ಅಭಿನಯಿಸೋದ್ರಲ್ಲಿ ಎಕ್ಸ್ ಪರ್ಟ್. ಕೋಮಲ್ ರಜನಿಯಂತೆ ರೂಪಾಂತರವಾಗೋದು ನೋಡಿ ತಮಿಳು ನಿರ್ಮಾಪಕರು ಥ್ರಿಲ್ಲಾಗಿದ್ದಾರೆ.

ಈ ಚಿತ್ರದ ಬಗೆಗಿನ ಸಂಪೂರ್ಣ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ. ಕೋಮಲ್ ಅಭಿನಯದ ಲೇಟೆಸ್ಟ್ 'ಗೋವಾ' ಚಿತ್ರವೂ ಬಾಕ್ಸ್ ಆಫೀಸಲ್ಲಿ ಮಕಾಡೆ ಮಲಗಿದೆ. ಸಾಲುಸಾಲು ಚಿತ್ರಗಳ ಸೋಲು ಕೋಮಲ್ ಗೆ ಬೇಸರ ಮೂಡಿಸಿದೆ.

ಹಾಸ್ಯನಟ ಕೋಮಲ್ ಕುಮಾರ್ ಅವರನ್ನು ಪ್ರೇಕ್ಷಕ ಪ್ರಭುಗಳು ಈ ವರ್ಷ ಸಾರಾಸಗಟಾಗಿ ತಿರಸ್ಕರಿಸಲು ಹೋಗಿಲ್ಲ. ಈ ವರ್ಷ ಅವರಿಗೆ ಮಿಶ್ರ ಪ್ರತಿಫಲ. 'ಕರೋಡ್ ಪತಿ' ಹಾಗೂ 'ಪುಂಗಿದಾಸ' ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಲಿಲ್ಲ. ಆದರೆ 'ನಮೋ ಭೂತಾತ್ಮ' ಚಿತ್ರ ಮಾತ್ರ ನಿರೀಕ್ಷೆ ಮೀರಿ ಒಳ್ಳೆಯ ಫಸಲು ತಂದುಕೊಟ್ಟಿದೆ.

English summary
Sandalwood comedy actor Komal Kumar all set to debut Kollywood soon. According to sources, Komal to play as Rajinikanth in his upcoming movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada