For Quick Alerts
  ALLOW NOTIFICATIONS  
  For Daily Alerts

  ನಿರ್ದೇಶನಕ್ಕೆ ಸಿದ್ಧರಾಗಿರುವ ಮನದೀಪ್ ರಾಯ್

  By ಜೀವನ್ ಸೂರ್ಯ
  |

  ಮನದೀಪ್ ರಾಯ್ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲಾವಿದ. ಶಂಕರ್ ನಾಗ್ ಜೊತೆಗಿದ್ದ ಅತ್ಯಾಪ್ತರಲ್ಲಿ ಮಂದೀಪ್ ಕೂಡಾ ಒಬ್ಬರು. ಮನದೀಪ್ ಅನೇಕ ರೀತಿಯ ಪಾತ್ರ ಮಾಡಿದ್ದರೂ ಇವತ್ತಿಗೂ ಅನೇಕರಿಗೆ ಪುಷ್ಪಕ ವಿಮಾನದಲ್ಲಿ ಅವರು ನಿರ್ವಹಿಸಿರುವ ಪಾತ್ರ ನೆನಪಾಗಿ ಮುಖದಲ್ಲಿ ಮಂದಹಾಸ ಮೂಡುತ್ತದೆ. ಬಣ್ಣದ ಪೇಪರಿನಲ್ಲಿ ಸುತ್ತಿದ ಗಿಫ್ಟ್ ಪ್ಯಾಕ್ ಒಂದನ್ನು ಹೊತ್ತೊಯ್ಯುವ, ಆಮೇಲೆ ಬೇಸ್ತು ಬೀಳುವ ಪಾತ್ರವದು.

  ಚಿಕ್ಕ ಪಾತ್ರಗಳಾದರೂ ಅದರಲ್ಲಿ ತನ್ನದೊಂದು ಗುರುತು ಉಳಿಸಿಹೋಗುವ ಮನದೀಪ್ ಕನ್ನಡದ ಉತ್ತಮ ಪೋಷಕ ಕಲಾವಿದರಲ್ಲೊಬ್ಬರು. ಅಂಥ ಮನದೀಪ್ ಇತ್ತೀಚೆಗೆ ಒಂದು ಹೊಸ ಸುದ್ದಿ ಸಿಡಿಸಿದ್ದಾರೆ. ಅದೇನೆಂದರೆ ಚಿತ್ರವೊಂದನ್ನ ನಿರ್ದೇಶಿಸಲು ಮಂದೀಪ್ ಸಿದ್ದವಾಗುತ್ತಿದ್ದಾರಂತೆ...!

  ಮುತ್ತಿನ ಹನಿ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಗುರುರಾಜ್ ಕವಲೂರು ಮನದೀಪ್ ಅವರ ಹೊಸ ಸಾಹಸಕ್ಕೆ ಹಣ ತೊಡಗಿಸಲಿದ್ದಾರೆ. ಮನದೀಪ್ ಈ ಚಿತ್ರಕ್ಕೆ 'ನಾಯಿ ಬಾಲ ಡೊಂಕೆ' ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಈ ಚಿತ್ರದ ಸ್ಕ್ರಿಪ್ಟ್ ತಯಾರಾಗಿದ್ದು, ಚಿತ್ರದ ಅಧಿಕೃತ ಘೋಷಣೆಯಷ್ಟೇ ಬಾಕಿ.

  "ನಮ್ಮ ಸಮಾಜದಲ್ಲಿ ಇಂಥ ಡೊಂಕುಗಳು ಸಾಕಷ್ಟಿವೆ. ಅವ್ಯಾವನ್ನೂ ಸರಿಪಡಿಸಲು ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ಅವು ಸ್ಥಿರಗೊಂಡಿವೆ. ಅದನ್ನೇ ತಮಾಷೆಯಾಗಿ ಹೇಳುವ ಕಥೆ ಸಿದ್ಧಪಡಿಸಿದ್ದೇನೆ. ಈ ಕಥೆಯಲ್ಲಿ ಒಂದು ಮರ್ಡರ್ ಮಿಸ್ಟರಿಯನ್ನೂ ಸೇರಿಸಿದ್ದು ಅದು ಪ್ರೇಕ್ಷಕರಿಗೆ ಹಿಡಿಸುತ್ತದೆ ಎಂದು ನಂಬಿದ್ದೇನೆ" ಎಂದಿದ್ದಾರೆ ಮನದೀಪ್. ಗೆಳೆಯರಿಬ್ಬರು ಮನದೀಪ್ ಸ್ಕ್ರಿಪ್ಟ್ ಮಾಡುವಾಗ ಅವರ ಜೊತೆ ಕೈಜೋಡಿಸಿ 'ನಾಯಿ ಬಾಲ ಡೊಂಕೆ'ಗೆ ಇನ್ನಷ್ಟು ಜೀವ ತುಂಬಿದ್ದಾರಂತೆ.

  ಈ ಚಿತ್ರದ ಪ್ರಮುಖ ಪಾತ್ರಗಳಿಗೆ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳುವುದು ಅವರ ಸದ್ಯದ ಯೋಜನೆ. ದಶಕಗಳಿಂದ ಚಿತ್ರರಂಗದಲ್ಲಿರುವ ಮನದೀಪ್ ಅವರಿಗೆ ನಿರ್ದೇಶನ ಕಷ್ಟವಾಗಲಾರದು ಅನ್ನೋದು ಅವರ ಗೆಳೆಯರ ಮಾತು. ಯಾಕೆಂದರೆ ಈ ಮನದೀಪ್, ಶಂಕರ್ ನಾಗ್ ಜೊತೆಯಿದ್ದಾಗ ಅವರ ನಿರ್ದೇಶನಕ್ಕೆ ಸಹಾಯಕರಾಗಿದ್ದವರು. ಜೊತೆಗೆ ಇವರಿಗೆ ಎಡಿಟಿಂಗ್ , ಸೌಂಡ ಬಗ್ಗೆಯೂ ಹೀಗಾಗಿ ನಾಯಿ ಬಾಲ ಡೊಂಕೆ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು. (ಒನ್ ಇಂಡಿಯಾ ಕನ್ನಡ)

  English summary
  Kannada Actor Mandeep Rai directs a movie titled 'Nayi Bala Dinke' very shortly. He is searching for Hero, Heroine and other star casts. He told that he will start very soon this movie and his friends are ready to help him to directs this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X