»   » ಗುಟ್ಟಾಗಿ ಬಿಯರ್ ಖರೀದಿಸಿ ಸಿಕ್ಕಿಬಿದ್ದ ನಯನತಾರಾ!

ಗುಟ್ಟಾಗಿ ಬಿಯರ್ ಖರೀದಿಸಿ ಸಿಕ್ಕಿಬಿದ್ದ ನಯನತಾರಾ!

By: ಶಂಕರ್, ಚೆನ್ನೈ
Subscribe to Filmibeat Kannada

ನಟಿ ನಯನತಾರಾ ಏನಾದರೂ ಗುಂಡುಪ್ರಿಯಳೇ? ಗುಂಡಿನ ಗಮ್ಮತ್ತಿಗೆ ಅವರೂ ಮಾರುಹೋಗಿದ್ದಾರಾ? ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಎಂದು ಏನಾದರೂ ಸ್ಟೆಪ್ ಹಾಕುವ ಪ್ಲಾನ್ ಏನಾದರೂ ಇದೆಯೇ? ಈ ವಿಡಿಯೋ ನೋಡಿದರೆ ನಿಮಗೂ ಆ ಡೌಟು ಬಂದರೂ ಬರಬಹುದು.

ಇತ್ತೀಚೆಗೆ ಚೆನ್ನೈನ ಮದ್ಯದಂಗಡಿಯೊಂದರಲ್ಲಿ ಅವರು ಬಿಯರ್ ಬಾಟಲ್ ಖರೀದಿಸುತ್ತಿರುವ ವಿಡಿಯೋ ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತುಪ್ಪ ಸುರಿದಂತಿದೆ. ಕುಡಿಯೋ ಬಿಡೋದು ಅವರವರ ಖಾಸಗಿ ವಿಚಾರ. ಆದರೆ ನಯನತಾರಾ ಅವರಂತಹ ಜನಪ್ರಿಯ ತಾರೆ ಬಹಿರಂಗವಾಗಿ ಬಾಟಲ್ ಖರೀದಿಸಿರುವುದು ಹಲವರ ಹೊಟ್ಟೆಯಲ್ಲಿ ಚಿಟ್ಟೆ ಹಾರಾಡಿದಂತಾಗಿದೆ. [ಸದ್ದಿಲ್ಲದಂತೆ ನಡದೇಹೋಯ್ತು ನಯನತಾರಾ ಮದುವೆ!]

Actor Nayanatara wine shop visit becomes viral

ಈ ವಿಡಿಯೋ ನೋಡಿದರೆ, ನಯನತಾರಾ ನಿಜಕ್ಕೂ ಕುಡೀತಾರಾ, ಇಲ್ಲವೇ ಎಂಬುದು ಅವರ ಅಭಿಮಾನಿಗಳ ಮನಸ್ಸನಲ್ಲೂ ನಾನಾ ಅನುಮಾನಗಳನ್ನು ಹುಟ್ಟುಹಾಕಿದೆ. ಆದರೆ ಅದರ ಅಸಲಿ ವಿಷಯವೇ ಬೇರೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಈ ವಿಡಿಯೋ ದೃಶ್ಯಗಳಲ್ಲಿ ಇರುವುದು ಸ್ವತಃ ನಯನತಾರಾ ಎಂಬುದು ಹಂಡ್ರಡ್ ಪರ್ಸೆಂಟ್ ಸತ್ಯ. ಅವರು ಬಿಯರ್ ಬಾಟಲ್ ತೆಗೆದುಕೊಂಡಿರುವುದೂ ಅಷ್ಟೇ ನಿಜ. ಆದರೆ ಇದೆಲ್ಲಾ ಅವರು ಅಭಿನಯಿಸುತ್ತಿರುವ 'ನಾನುಂ ರೌಡಿದಾ' ಚಿತ್ರಕ್ಕಾಗಿ ಎಂಬುದೇ ವಿಶೇಷ.

ಚಿತ್ರೀಕರಣದ ಆ ಸನ್ನಿವೇಶವನ್ನು ಯಾರೋ ಪುಣ್ಯಾತ್ಮ ವಿಡಿಯೋ ತೆಗೆದು ಇದೀಗ ಯೂಟ್ಯೂಬ್ ನಲ್ಲಿ ಹರಿಯಬಿಟ್ಟಿದ್ದಾನೆ. ಆ ವಿಡಿಯೋ ಈಗ ಲಂಗುಲಗಾಮಿಲ್ಲದಂತೆ ಯೂಟ್ಯೂಬ್ ನಲ್ಲಿ ಓಡುತ್ತಿದೆ. ಇದು ಚಿತ್ರತಂಡವೇ ಮಾಡಿದ ಟ್ರಿಕ್ ಇರಬಹುದೇ? ಅಥವಾ ಚಿತ್ರತಂಡಕ್ಕೆ ಗೊತ್ತಿಲ್ಲದೆ ನಡೆದ ಕೃತ್ಯವೇ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

ಧನುಷ್ ಅವರು ತನ್ನ ಸ್ವಂತ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪೋಡಾ ಪೋಡಿ ಖ್ಯಾತಿಯ ವಿಘ್ನೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ಸೇತುಪತಿ ಜೊತೆ ನಯನತಾರಾ ತೆರೆಹಂಚಿಕೊಳ್ಳುತ್ತಿದ್ದಾರೆ.

English summary
There was a certain video of Nayantara buying beer from a local wine shop doing the rounds on many online portals. The fact is that the video is apparently a shot from the Nayantara-Vijay Sethupathi starrer 'Naanum Rowdydhaan' 'NDR' is being directed by 'Poda Podi' fame Vignesh Shivan and produced by Dhanush under the Wunderbar Films banner.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada