»   » ಯಶ್-ಶಿವಣ್ಣ ಅಭಿಮಾನಿಗಳಿಗೆ ಅಚ್ಚರಿಯ ಮೇಲೆ ಅಚ್ಚರಿ

ಯಶ್-ಶಿವಣ್ಣ ಅಭಿಮಾನಿಗಳಿಗೆ ಅಚ್ಚರಿಯ ಮೇಲೆ ಅಚ್ಚರಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸ್ಟಾರ್ ದಿಗ್ಗಜರಿಬ್ಬರನ್ನು ಒಟ್ಟಿಗೆ ಒಂದೇ ತೆರೆಯ ಮೇಲೆ ತೋರಿಸುವ ಸಾಹಸಕ್ಕೆ ಮೊದಲ ಬಾರಿಗೆ ಕೈ ಹಾಕಿದ್ದು, ನಟ ಕಮ್ ನಿರ್ದೇಶಕ 'ಜೋಗಿ' ಪ್ರೇಮ್ ಅವರು. ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು 'ಕಲಿ' ಮತ್ತು 'ದಿ ವಿಲನ್' ಎಂಬ ಚಿತ್ರದ ಮೂಲಕ ಪ್ರೇಮ್ ಅವರು ಒಟ್ಟಿಗೆ ತೋರಿಸಲಿದ್ದಾರೆ.

ಇದೀಗ ಸ್ಯಾಂಡಲ್ ವುಡ್ ಅಡ್ಡದಿಂದ ಮತ್ತೊಂದು ಸೆನ್ಸೇಶನಲ್ ಸುದ್ದಿ ಹೊರಬಿದ್ದಿದೆ. ಶಿವಣ್ಣ -ಸುದೀಪ್ ಅವರ ಬೆನ್ನಲ್ಲೇ, ಕನ್ನಡದ ಮಲ್ಟಿಸ್ಟಾರರ್ ಚಿತ್ರಕ್ಕೆ ಮತ್ತೊಂದು ವೇದಿಕೆ ಸಜ್ಜಾಗಿದೆ. ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಒಂದಾಗಲಿದ್ದಾರೆ ಎನ್ನಲಾಗುತ್ತಿದೆ.[ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

ಈ ಮೊದಲು ಶಿವಣ್ಣ ಮತ್ತು ಯಶ್ ಅವರು 'ತಮಸ್ಸು' ಎಂಬ ಚಿತ್ರದಲ್ಲಿ ಒಂದಾಗಿದ್ದರು. ಯಶ್ ಅವರು 'ಇಮ್ರಾನ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಹೊಸ ಸಿನಿಮಾದ ಮೂಲಕ ಬಿಗ್ ಸ್ಟಾರ್ಸ್ ಒಂದಾಗುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಮತ್ತು ಸೆಂಚುರಿ ಸ್ಟಾರ್ ಗೆ ಯಾರು ಸಿನಿಮಾ ಮಾಡ್ತಾರೆ, ಏನ್ಕತೆ? ನೋಡಲು ಮುಂದೆ ಓದಿ...

ರಾಕ್ ಲೈನ್ ನಿರ್ಮಾಣ

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ತಮ್ಮ ನಿರ್ಮಾಣದ ಚಿತ್ರದಲ್ಲಿ ಯಶ್ ಮತ್ತು ಶಿವಣ್ಣ ಅವರನ್ನು ಒಂದು ಮಾಡಲಿದ್ದಾರೆ. ಅದ್ಧೂರಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.

ಅದ್ಧೂರಿ ಸಿನಿಮಾ

ಈಗಾಗಲೇ ಈ ಚಿತ್ರದ ಬಗ್ಗೆ ಎಲ್ಲವೂ ಮಾತು-ಕತೆ ಹಂತದಲ್ಲಿರುವುದರಿಂದ ಯಾವುದೇ ಅಧೀಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣ ಎಂದಾಗಲಂತೂ, ಎಲ್ಲರಿಗೂ ಕೊಂಚ ನಿರೀಕ್ಷೆ ಜಾಸ್ತಿನೇ ಇರುತ್ತೆ.

ಡೇಟ್ ಹೊಂದಾಣಿಕೆ ಆದ್ರೆ ಶೂಟಿಂಗ್

ಆದ್ರೆ ಸ್ಟಾರ್ ನಟರಾದ ಶಿವಣ್ಣ ಮತ್ತು ಯಶ್ ಅವರು ಇಬ್ಬರೂ ಬಿಜಿ ಸ್ಟಾರ್ ಗಳು, ಶಿವಣ್ಣ ಅವರ ಕೈಯಲ್ಲಿ ಆಗಲೇ ಮೂರ್ನಾಲ್ಕು ಸಿನಿಮಾಗಳು ಇವೆ. ಇನ್ನು ಯಶ್ ಅವರು ಕೂಡ ಸ್ವಲ್ಪ ಬಿಜಿಯಾಗಿಯೇ ಓಡಾಡುತ್ತಿದ್ದಾರೆ. ಆದ್ದರಿಂದ ಇಬ್ಬರ ಡೇಟ್ ಹೊಂದಾಣಿಕೆ ಮಾಡಿಕೊಂಡು ಈ ಚಿತ್ರದ ಶೂಟಿಂಗ್ ಗೆ ಕೈ ಹಾಕಬೇಕು.

ಗುಟ್ಟಾಗಿ ಉಳಿದ ನಿರ್ದೇಶಕರು

ಜೊತೆಗೆ ಸ್ಟಾರ್ ನಟರ ಚಿತ್ರಕ್ಕೆ ನಿರ್ದೇಶನ ಯಾರದ್ದು, ಅನ್ನೋ ಮಾಹಿತಿ ಕೂಡ ಗುಟ್ಟಾಗಿಯೇ ಇದೆ. ಎಲ್ಲವೂ ಅಧೀಕೃತವಾಗಿ ಹೊರಬೀಳುವ ಸಂದರ್ಭದಲ್ಲಿ ನಿರ್ದೇಶಕರ ಮಾಹಿತಿ ಕೂಡ ಹೊರ ಬೀಳಬಹುದು.

ಅಭಿಮಾನಿಗಳು ಫುಲ್ ಖುಷ್

ಒಟ್ನಲ್ಲಿ ತೆರೆ ಮರೆಯ ಮೇಲೆ ಈ ಚಿತ್ರದ ಕೆಲಸಗಳು ನಡೆಯುತ್ತಿರುವುದರಿಂದ ಎಲ್ಲವನ್ನೂ ಈಗಲೇ ಹೇಳುವಂತಿಲ್ಲ. ಅದೇನೇ ಇರಲಿ ಇವರಿಬ್ಬರು ಒಂದಾಗಿದ್ದಾರೆ ಅಂದಾಗ ಸಹಜವಾಗಿ ಅಭಿಮಾನಿಗಳು ಕೂಡ ಸರ್ ಪ್ರೈಸ್ ಅಗೋದರ ಜೊತೆಗೆ, ಸಖತ್ ಖುಷಿ ಕೂಡ ಪಟ್ಟಿದ್ದಾರೆ.

English summary
Big stars of Sandalwood Hatrick Hero Shiva Rajkumar and Kannada Actor Yash will share on-screen space for a movie. This is a dream come true for Kannada audiences. The movie produced by Rockline Venkatesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada