»   » ಅಭಿನಯ ಚಕ್ರವರ್ತಿ ಸುದೀಪ್ ಗೆ ಎಂಎಲ್ಸಿ ಸೀಟು?

ಅಭಿನಯ ಚಕ್ರವರ್ತಿ ಸುದೀಪ್ ಗೆ ಎಂಎಲ್ಸಿ ಸೀಟು?

Posted By:
Subscribe to Filmibeat Kannada
ಈ ರೀತಿಯ ಸುದ್ದಿಯೊಂದು ಗಾಂಧಿನಗರದ ಪಡಸಾಲೆಯಿಂದ ಬಿಜೆಪಿ ಮೊಗಸಾಲೆ ತನಕ ಹಬ್ಬಿದೆ. ಇದು ಸುಳ್ಳೋ ನಿಜವೋ ಒಂದೂ ಗೊತ್ತಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಭಿನಯ ಚಕ್ರವರ್ತಿ ಸುದೀಪ್ ಅವರನ್ನು ಎಂಎಲ್ಸಿ ಸೀಟಿಗೆ ನಾಮಿನೇಟ್ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

20-05-2012ಕ್ಕೆ ನಟ ಪ್ರಣಯರಾಜ ಡಾ.ಶ್ರೀನಾಥ್ ಅವರ ಎಂಎಲ್ಸಿ ಅಧಿಕಾರವಧಿ ಮುಗಿದಿದೆ. ಖಾಲಿ ಉಳಿದಿರುವ ಸ್ಥಾನ ತುಂಬಲು ಸಿನಿಮಾ ಕ್ಷೇತ್ರದಿಂದ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದೆ. ಕೇಳಿಬರುತ್ತಿರುವ ಸಿನೆಮಾ ತಾರೆಗಳ ಹೆಸರುಗಳಲ್ಲಿ ಸುದೀಪ್ ಮುಂಚೂಣಿಯಲ್ಲಿದೆ.

ಪಟ್ಟಿಯಲ್ಲಿ ಹಲವಾರು ಹೆಸರುಗಳು ಕೇಳಿಬಂದಿವೆ. ಮುಖ್ಯವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧ, ನಟ ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್, ಮುಖ್ಯಮಂತ್ರಿ ಚಂದ್ರು, ಮದನ್ ಪಟೇಲ್ ಹೆಸರುಗಳು ಚಾಲ್ತಿಯಲ್ಲಿವೆ.

ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಸುದೀಪ್ ಸೂಕ್ತ ಎಂದು ಭಾವಿಸಲಾಗಿದೆ. ಇನ್ನು ಸೀನಿಯಾರಿಟಿ ದೃಷ್ಠಿಯಲ್ಲಿ ನೋಡುವುದಾದರೆ ದ್ವಾರಕೀಶ್ ಅವರನ್ನು ನಾಮಿನೇಟ್ ಮಾಡಬಹುದು. ಇನ್ನು ಸಾಂಸ್ಕೃತಿಕವಾಗಿ ಕೇಳಿಬರುತ್ತಿರುವ ಹೆಸರು ನಟ, ನಿರ್ದೇಶಕ, ನಿರ್ಮಾಪಕ ಮದನ್ ಪಟೇಲ್.

ಒಟ್ಟಾರೆಯಾಗಿ ಯಾರನ್ನು ಎಂಎಲ್ಸಿ ಸೀಟಿಗೆ ನಾಮಿನೇಟ್ ಮಾಡಬೇಕು ಎಂಬುದು ಬಿಜೆಪಿ ಪಾಳಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ತಾರಾ ಹಾಗೂ ಮುಖ್ಯಮಂತ್ರಿ ಚಂದ್ರು ಅವರಿಗೆ ಈಗಾಗಲೆ ಅವರದೇ ಆದ ಜವಾಬ್ದಾರಿಗಳಿವೆ. ಹಾಗಾಗಿ ಸುದೀಪ್ ಅವರ ಆಯ್ಕೆ ಬಹುತೇಕ ಸುಗಮ ಎನ್ನಲಾಗಿದೆ.

ಈ ಹಿಂದೊಮ್ಮೆ ಸುದೀಪ್ 'ಸಿನಿಮಾ ಜಗತ್ತು ಸಾಕಾಗಿದೆ ನಿವೃತ್ತಿ ಘೋಷಿಸುತ್ತೇನೆ' ಎಂದು ಟ್ವೀಟಿಸಿದ್ದೇ ತಡ ಜನ ಏನೇನೋ ಮಾತನಾಡಿಕೊಳ್ಳಲು ಶುರು ಮಾಡಿದರು. ಅವರೇನು ನಿವೃತ್ತಿ ಘೋಷಿಸಿ ಹಿಮಾಲಯಕ್ಕೆ ಹೋಗುತ್ತೇನೆ ಎಂದೇನು ಹೇಳಿರಲಿಲ್ಲ. ಆದರೂ ಜನ ರಾಜಕೀಯಕ್ಕೆ ಸೇರುತ್ತಾರೆ ಎಂದೇ ಭಾವಿಸಿದ್ದರು.

ಆದರೆ ಅವರು ಅಂದುಕೊಂಡಂತೆ ಏನೂ ಆಗಲಿಲ್ಲ. ಸುದೀಪ್ ತಮ್ಮ ಪಾಡಿಗೆ ತಾವು ಚಿತ್ರಗಳಲ್ಲಿ ತೊಡಗಿಕೊಂಡರು. ಅತ್ತ ಜೆಡಿಎಸ್ ಇತ್ತ ಬಿಜೆಪಿ ಇನ್ನೊಂದು ಕಡೆ ಕಾಂಗ್ರೆಸ್ ಸುದೀಪ್ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಇಳಿಸುವ ವ್ಯರ್ಥ ಕಸರತ್ತ ವಿಫಲವಾಗಿದ್ದವು.

ಸದ್ಯಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಡುವ ಆಲೋಚನೆ ಇಲ್ಲ. ರಾಜಕೀಯದಲ್ಲಿ ತನ್ನದೇ ಆದಂತಹ ಸಾಮಾಜಿಕ ಕಾಳಜಿ ಇರಬೇಕು. ಅದೆಲ್ಲಾ ತಮಗೆ ಈಗ ಸಾಧ್ಯವಾಗುವುದಿಲ್ಲ. ಮುಂದೆ ನೋಡಣ. ಆದರೆ ಸದ್ಯಕ್ಕಂತೂ ರಾಜಕೀಯ ಪ್ರವೇಶ ಇಲ್ಲ ಎಂದು ಗೋಣು ಆಡಿಸಿದ್ದರು. ಈಗ ಕಾಲ ಕೂಡಿಬಂದಿದೆಯಾ? (ಏಜೆನ್ಸೀಸ್)

English summary
The Sandalwood grapevine is buzzing with rumours about Kannada actor Sudeep is likely to MLC nomination from Bharathiya Janata Party. On basis of popularity his name is heard to the upper house of legislative Council.
Please Wait while comments are loading...