»   » ಡಾ.ರಾಜ್ ಮೊಮ್ಮಗನ 3ನೇ ಚಿತ್ರಕ್ಕೆ ವೇದಿಕೆ ಸಜ್ಜು!

ಡಾ.ರಾಜ್ ಮೊಮ್ಮಗನ 3ನೇ ಚಿತ್ರಕ್ಕೆ ವೇದಿಕೆ ಸಜ್ಜು!

Posted By:
Subscribe to Filmibeat Kannada

'ರನ್ ಆಂಟನಿ' ಚಿತ್ರದ ನಂತರ ಡಾ.ರಾಜ್ ಕುಮಾರ್ ಮೊಮ್ಮಗ ವಿನಯ್ ರಾಜ್ ಕುಮಾರ್ ತಮ್ಮ ಮೂರನೇ ಚಿತ್ರಕ್ಕೆ ತಯಾರಾಗುತ್ತಿದ್ದಾರೆ.

'ಸಿದ್ಧಾರ್ಥ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ವಿನಯ್ ರಾಜ್ ಕುಮಾರ್, ಈಗ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರಕ್ಕೆ ಸಿದ್ದವಾಗ್ತಿದ್ದಾರೆ.

ಹಾಗಾದ್ರೆ, 3ಜಿ ಸ್ಟಾರ್ ವಿನಯ್ ರಾಜ್ ಕುಮಾರ್ ಅವರ ಮೂರನೇ ಚಿತ್ರ ಯಾವುದು? ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಡಾ.ರಾಜ್ ಹುಟ್ಟುಹಬ್ಬಕ್ಕೆ ವಿನಯ್ 3ನೇ ಚಿತ್ರ!

ಏಪ್ರಿಲ್ 24 ರಂದು ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಹಾಗಾಗಿ, ವಿನಯ್ ರಾಜ್ ಕುಮಾರ್ ಅಭಿನಯಿಸಲಿರುವ ಮೂರನೇ ಚಿತ್ರವನ್ನ ರಾಜ್ ಹುಟ್ಟುಹಬ್ಬದಂದು ಘೋಷಣೆ ಮಾಡಲು ತಯಾರಿ ನಡೆಸಿದ್ದಾರಂತೆ.

ವಿನಯ್ ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್!

ಮೂಲಗಳ ಪ್ರಕಾರ ವಿನಯ್ ರಾಜ್ ಕುಮಾರ್ ಅವರ ಮೂರನೇ ಚಿತ್ರಕ್ಕೆ, ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಲಿದ್ದಾರಂತೆ.

ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ

ವಿನಯ್ ಅಭಿನಯದ ಮೊದಲೆರಡು ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿರಲಿದ್ದು, ಔಟ್ ಅಂಡ್ ಔಟ್ ಕಮರ್ಷಿಯಲ್ ಎಲಿಮೆಂಟ್ಸ್ ಹೊಂದಿರುತ್ತಂತೆ. ಹೀಗಾಗಿ, ಇದಕ್ಕಾಗಿ ಪವನ್ ಕಥೆ ಕೂಡ ಸಿದ್ದ ಮಾಡ್ತಿದ್ದಾರಂತೆ.

ಚಿತ್ರತಂಡ ಹೇಗಿರುತ್ತೆ ಗೊತ್ತಾ?

ಈಗಾಗಲೇ ಕಥೆ ಕೇಳಿ ಗ್ರೀನ್ ಸಿಗ್ನಲ್ ಕೊಟ್ಟಿರುವ ರಾಘವೇಂದ್ರ ರಾಜ್ ಕುಮಾರ್ ಅವರು, ಕಲಾವಿದರ ಆಯ್ಕೆಯಲ್ಲಿದ್ದಾರೆ. ಈ ಮಧ್ಯೆ ಅಣ್ಣಾವ್ರ ಹುಟ್ಟುಹಬ್ಬದಂದು ಚಿತ್ರಕ್ಕೆ ಚಾಲನೆ ನೀಡಿ, ಶೂಟಿಂಗ್ ಶುರು ಮಾಡುವ ಪ್ಲಾನ್ ಕೂಡ ಮಾಡಲಾಗಿದೆಯಂತೆ.

ಅಧಿಕೃತ ಘೋಷಣೆ ಆಗಿಲ್ಲ

ಇದುವರೆಗೂ ಈ ಚಿತ್ರದ ಅಧಿಕೃತ ಘೋಷಣೆ ಮಾಡಿಲ್ಲ. ಆದ್ರೆ, ಈ ಪ್ರಾಜೆಕ್ಟ್ ಬಗ್ಗೆ ಎಲ್ಲವೂ ಅಂತಿಮವಾಗಿದೆ ಎನ್ನಲಾಗುತ್ತಿದೆ. ಎನಿ ವೇ, ವಿನಯ್ ರಾಜ್ ಕುಮಾರ್ ಅವರ ಮೂರನೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡ ಓದುತ್ತಿರಿ.....

English summary
According to Source, Actor Vinay Rajkumar’s third outing is likely to be directed by Pavan Wadeyar. The new movie is likely to go on floors on April 24, on the birthday of late actor Dr Rajkumar,

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X