Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಉದ್ಯಮಿಯ ಕೈ ಹಿಡಿಯಲಿದ್ದಾಳೆ ನಟ ವಿಶಾಲ್ ಮಾಜಿ ಪ್ರೇಯಸಿ?
ಎಲ್ಲ ಅಂದುಕೊಂಡಂತೆ ಆಗಿದ್ದರೆ ತಮಿಳು ನಟ ವಿಶಾಲ್ ಮತ್ತು ಅನಿಶಾ ಅಲ್ಲ ರೆಡ್ಡಿ ಅವರ ಮದುವೆ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಿತ್ತು. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ 2020ರ ವರ್ಷಾಂತ್ಯಕ್ಕೆ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದರು.
ತಮಿಳು ನಟ ವಿಶಾಲ್ ಮದುವೆ ಮುರಿದು ಬಿತ್ತಾ? ಏನಾಯ್ತು ಈ ಜೋಡಿಗೆ?
ಆದರೆ ನಿಶ್ಚಿತಾರ್ಥ ಮಾಡಿಕೊಂಡ ಕೆಲವೇ ತಿಂಗಳಲ್ಲಿ ವಿಶಾಲ್ ಮತ್ತು ಅನಿಶಾ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವರದಿಗಳಾದವು. ಆದ್ದರಿಂದ ಎರಡು ಕುಟುಂಬಗಳು ಮದುವೆಯನ್ನು ಮುರಿದುಕೊಳ್ಳಲು ತೀರ್ಮಾನಿಸಿದೆ ಎಂದು ಸುದ್ದಿಯೂ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂತು. ಈ ಸುದ್ದಿಯನ್ನು ವಿಶಾಲ್ ಕುಟುಂಬ ನಿರಾಕರಿಸಿತ್ತು. ನಿಶ್ಚಿಯದಂತೆ ವಿವಾಹ ಜರುಗಲಿದೆ ಎಂದು ಹೇಳಿಕೊಂಡರು. ಆದ್ರೀಗ, ವಿಶಾಲ್‌ಗೆ ನಿಶ್ಚಿಯವಾಗಿದ್ದ ಹುಡುಗಿ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರೆ ಎಂದು ಫಿಲ್ಮೀಬೀಟ್ ಇಂಗ್ಲೀಷ್ ವರದಿ ಮಾಡಿದೆ. ಮುಂದೆ ಓದಿ...
''ದೇವರು ನನಗಾಗಿಯೇ ಕಳುಹಿಸಿದ ಹುಡುಗಿ ಅನೀಶಾ'' ಎಂದ ತಮಿಳು ನಟ ವಿಶಾಲ್.!

ಉದ್ಯಮಿ ಕೈ ಹಿಡಿಯಲಿದ್ದಾರೆ ಅನಿಶಾ?
ನಟ ವಿಶಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅನಿಶಾ ಅಲ್ಲ ರೆಡ್ಡಿ ಈಗ ಉದ್ಯಮಿಯೊಬ್ಬರ ಜೊತೆ ವಿವಾಹವಾಗಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ವಿಶಾಲ್ ಜೊತೆ ಭಿನ್ನಾಭಿಪ್ರಾಯದಿಂದ ಸಂಬಂಧ ಮುರಿದುಕೊಂಡಿರುವುದಾಗಿ ತಿಳಿದು ಬಂದಿದೆ. ಆದರೆ, ಉದ್ಯಮಿ ಜೊತೆಗಿನ ಮದುವೆ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.

ಬ್ರೇಕ್ ಅಪ್ ಖಚಿತ ಪಡಿಸಿದ್ರಾ ನಟ?
ಯೂಟ್ಯೂಬ್ ಚಾನಲ್ ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ನಟ ವಿಶಾಲ್ ಸ್ಪಷ್ಟನೆ ನೀಡಿದ್ದಾರಂತೆ. 'ಅನಿಶಾ ಜೊತೆಗಿನ ನಿಶ್ಚಿತಾರ್ಥ ಅಂತ್ಯವಾಗಿದೆ. ಅವರ ಮನೆಯಲ್ಲಿ ಆಕೆಗೆ ವರನನ್ನು ಹುಡುಕುತ್ತಿದ್ದಾರೆ' ಎಂದು ತಿಳಿಸಿದ್ದಾರೆ ಎಂದು ಫಿಲ್ಮಿಬೀಟ್ ಇಂಗ್ಲೀಷ್ ವರದಿ ಮಾಡಿದೆ.

ತಂದೆ ಹೇಳಿಕೆ ನೀಡಿದ್ದರು
ವಿಶಾಲ್ ಮತ್ತು ಅನಿಶಾ ಸಂಬಂಧ ಮುರಿದು ಬಿದ್ದಿದೆ ಎಂಬ ವಿಚಾರ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಹಿರಂಗವಾಗಿತ್ತು. ಅಷ್ಟೋತ್ತಿಗಾಗಲೇ ಅನಿಶಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಶಾಲ್ ಅವರ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಆಗ ವಿಶಾಲ್ ತಂದೆ ಪ್ರತಿಕ್ರಿಯಿಸಿ ''ಕಲಾವಿದರ ಸಂಘದ ಕಟ್ಟಡ ನಿರ್ಮಾಣವಾಗುತ್ತಿದೆ, ಉದ್ಘಾಟನೆಯಾದ ಬಳಿಕ ಮದುವೆ ನಿಶ್ಚಿಯವಾಗಲಿದೆ. ಮದುವೆ ಮುರಿದು ಬಿದ್ದಿಲ್ಲ'' ಎಂದಿದ್ದರು.

ಅನಿಶಾ ಅಲ್ಲ ರೆಡ್ಡಿ ಕುರಿತು
ಅನಿಶಾ ಮೂಲತಃ ತೆಲುಗಿನವರು. ಉದ್ಯಮಿ ವಿಜಯ್ ರೆಡ್ಡಿ ಮತ್ತು ಪದ್ಮಜಾ ದಂಪತಿಯ ಪುತ್ರಿ. ಅನಿಶಾ ನಟಿ ಕೂಡ ಹೌದು. ತೆಲುಗಿನ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ 'ಪೆಳ್ಳಿ ಚೂಪುಲು' ಮತ್ತು 'ಅರ್ಜುನ್ ರೆಡ್ಡಿ' ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತೆರೆಮೇಲೆ ಮಿಂಚಿದ್ದಾರೆ.