For Quick Alerts
  ALLOW NOTIFICATIONS  
  For Daily Alerts

  'RRR' ಸಿನಿಮಾದಿಂದ ಹೊರಬಿದ್ದ ಅಲಿಯಾ ಭಟ್ ಜಾಗಕ್ಕೆ ಮತ್ತೋರ್ವ ಸ್ಟಾರ್ ನಟಿಯ ಎಂಟ್ರಿ

  |

  ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಆರ್ ಆರ್ ಆರ್' (ರೌದ್ರಂ ರಣಂ ರುಧಿರಂ) ಸಿನಿಮಾದಲ್ಲಿ ಪ್ರಮುಖ ನಾಯಕಿಯಾಗಿ ಬಾಲಿವುಡ್ ನಟಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿರುವುದು ಖಚಿತವಾಗಿತ್ತು. ಚಿತ್ರದಲ್ಲಿ ನಟ ರಾಮ್ ಚರಣ್ ಜೊತೆಗೆ ಅಲಿಯಾ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನುವ ಸುದ್ದಿ ಎಲ್ಲರಿಗೂ ಗೊತ್ತೇ ಇತ್ತು.

  ಸದ್ಯ ಕೊರೊನಾದಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಇತ್ತೀಚಿಗಷ್ಟೆ ಮಾಹಿತಿ ನೀಡಿದ್ದ ಸಿನಿಮಾತಂಡ, ಅಲಿಯಾ ಭಟ್ ಮುಂದಿನ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದರು. ಆದರೆ ಈ ನಡುವೆಯೇ ಅಲಿಯಾ ಭಟ್ ಚಿತ್ರದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮುಂದೆ ಓದಿ...

  ಅಲಿಯಾ ಹೊರ ನಡೆಯಲು ಕಾರಣವೇನು?

  ಅಲಿಯಾ ಹೊರ ನಡೆಯಲು ಕಾರಣವೇನು?

  ಅಲಿಯಾ ಹೊರ ನಡೆಯಲು ಕಾರಣ ಡೇಟ್ ಸಮಸ್ಯೆ ಎನ್ನಲಾಗುತ್ತಿದೆ. ಅಲಿಯಾ ಸದ್ಯ ಬಾಲಿವುಡ್ ನಲ್ಲಿ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಅಲಿಯಾ ಭಟ್ ಮಾಫಿಯಾ ಕ್ವೀನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೆ ಸಾಕಷ್ಟು ಸಮಯ ಹಿಡಿಯಲಿದೆಯಂತೆ. ಈ ಸಿನಿಮಾದ ಜೊತೆಗೆ ಬ್ರಹ್ಮಾಸ್ತ್ರ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಹಾಗಾಗಿ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗದ ಕಾರಣ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

  ಅಸಲಿ ಕಾರಣವೇ ಬೇರೆ ಇದೆ

  ಅಸಲಿ ಕಾರಣವೇ ಬೇರೆ ಇದೆ

  ಆದರೆ ಅಸಲಿ ಕಾರಣ ಬೇರೆಯೇ ಇದೆ ಇನ್ನುವ ಮಾತು ಕೇಳಿ ಬರುತ್ತಿದೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತದ ವಿರುದ್ಧ ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತಿದೆ. ಅದರಲ್ಲಿಯೂ ಮಹೇಶ್ ಭಟ್ ಕುಟುಂಬವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಮಹೇಶ್ ಭಟ್ ನಿರ್ದೇಶನದ ಅಲಿಯಾ ಭಟ್ ಅಭಿನಯದ ಸಡಕ್-2 ಸಿನಿಮಾದ ಟ್ರೇಲರ್ ಗೆ ಸಿಕ್ಕಾಪಟ್ಟೆ ಡಿಸ್ ಲೈಕ್ ಬಂದಿದೆ. ಅಲಿಯಾ ಆರ್ ಆರ್ ಆರ್ ಸಿನಿಮಾದಲ್ಲಿ ಕಾಣಿಸಿಕೊಂಡರೆ ಈ ಸಿನಿಮಾಗೂ ನೆಪೋಟಿಸಂ ಬಿಸಿ ತಟ್ಟಬಹುದು ಎನ್ನುವುದು ಚಿತ್ರತಂಡಕ್ಕೆ ಆತಂಕ. ಅಲಿಯಾ ಸಿನಿಮಾದಿಂದ ಔಟ್ ಆಗಲು ಪ್ರಮುಖ ಕಾರಣ ಇದೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

  ಅಲಿಯಾ ಜಾಗಕ್ಕೆ ಪ್ರಿಯಾಂಕಾ ಚೋಪ್ರಾ

  ಅಲಿಯಾ ಜಾಗಕ್ಕೆ ಪ್ರಿಯಾಂಕಾ ಚೋಪ್ರಾ

  ಅಲಿಯಾ ಭಟ್ ಜಾಗಕ್ಕೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಕರೆತರುವ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಪ್ರಿಯಾಂಕಾ ಚೋಪ್ರಾ ರಾಮ್ ಚರಣ್ ಜೊತೆ 'ಜಂಜೀರ್' ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಮತ್ತೆ ಆರ್ ಆರ್ ಆರ್ ಸಿನಿಮಾ ಮೂಲಕ ಮತ್ತೊಮ್ಮೆ ಈ ಜೋಡಿಯನ್ನು ಒಂದು ಮಾಡಲು ನಿರ್ಧರಿಸಿದೆ ಸಿನಿಮಾತಂಡ.

  ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ

  ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ

  ಅಲಿಯಾ ಸಿನಿಮಾದಿಂದ ಔಟ್ ಆಗಿದ್ದಾರೆ ಎನ್ನುವ ಮಾತು ಈ ಹಿಂದೆಯೇ ಕೇಳಿಬರುತ್ತಿತ್ತು. ಅಲಿಯಾ ಚಿತ್ರೀಕರಣದಲ್ಲಿ ಭಾಗಿಯಾಗದೆ ಡೇಟ್ ಮುಂದೂಡುತ್ತಲೇ ಬರುತ್ತಿದ್ದಾರೆ, ಇದರಿಂದ ಸಿನಿಮಾತಂಡಕ್ಕೆ ದೊಡ್ಡ ಸಮಸ್ಯೆಯಾಗುತ್ತಿರುವ ಕಾರಣ ಅಲಿಯಾರನ್ನು ಸಿನಿಮಾದಿಂದ ಕೈಬಿಡಲು ನಿರ್ಧರಿಸಿದ್ದಾರೆ ಎನ್ನುವ ಮಾತು ಹರಿದಾಡಿತ್ತು. ಇದೀಗ ಮತ್ತೆ ಅಲಿಯಾ ಸಿನಿಮಾದಿಂದ ಔಟ್ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಎಲ್ಲಿಯೂ ಅಧಿಕೃತವಾಗಿ ಮಾಹಿತಿ ಬಹಿರಂಗ ಪಡಿಸಿಲ್ಲ.

  English summary
  Bollywood Actress Alia Bhatt out from RRR movie. Priyanka Chopra replaces Alia Bhatt in This movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X