»   » ವಿಜಯ್ ಜೊತೆ ನಟಿ ಅಮಲಾ ಪೌಲ್ ಜೂಟಾಟ

ವಿಜಯ್ ಜೊತೆ ನಟಿ ಅಮಲಾ ಪೌಲ್ ಜೂಟಾಟ

By: ರವಿಕಿಶೋರ್
Subscribe to Filmibeat Kannada

ಚಳಿಗಾಲ, ಮಳೆಗಾಲ, ಬೇಸಿಗೆ ಅದು ಯಾವುದೇ ಕಾಲವಾಗಿರಲಿ ಗಾಸಿಪ್ ಸುದ್ದಿಗಳಂತೂ ಬರಗಾಲ ಇರಲ್ಲ. ಈಗ ಅಮಲೇರಿಸುವ ಬೆಡಗಿ ಅಮಲಾ ಪೌಲ್ ಬಗ್ಗೆ ಒಂದು ಮಸಾಲಾ ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ ತಮಿಳು ನಿರ್ದೇಶಕ ವಿಜಯ್ ಜೊತೆ ಜೂಟಾಟ ಆಡುತ್ತಿದ್ದಾರೆ ಎಂಬುದು.

ಥಲೈವಾ ಚಿತ್ರದ ನಿರ್ದೇಶಕ ಎಎಲ್ ವಿಜಯ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇವರಿಬ್ಬರೂ ಈಗ ಜೊತೆಯಾಗಿ ಓಡಾಡುತ್ತಿರುವುದೇ ಈ ಗಾಳಿಸುದ್ದಿಗೆ ಕಾರಣವಾಗಿರುವುದು. ತಮಿಳು ಚಿತ್ರಗಳ ಮೂಲಕ ಅಮಲಾ ಪೌಲ್ ಬೆಳಕಿಗೆ ಬಂದ ತಾರೆ.


ವಿಜಯ್ ನಿರ್ದೇಶನದ ಥಲೈವಾ ಚಿತ್ರದ ಮೂಲಕ ಎಲ್ಲರ ಗಮನಸೆಳೆದರು. ಅಲ್ಲಿಂದ ನಿರ್ದೇಶಕನ ಜೊತೆಗೆ ಬಾಂಡೇಜ್ ಕೂಡ ಇನ್ನಷ್ಟು ಗಟ್ಟಿಯಾಗಿ ಬೆಸುಗೆ ಹಾಕಿಕೊಳ್ತು. ಇಬ್ಬರೂ ಮದುವೆಯಾಗುತ್ತಾರೆ ಎಂಬಷ್ಟರ ಮಟ್ಟಿಗೆ ಮಾತುಗಳು ಕೇಳಿಬರುತ್ತಿವೆ.

ಚೆನ್ನೈನಲ್ಲಿ ನಡೆದ ಭಾರತೀಯ ಚಿತ್ರರಂಗದ ಶತಮಾನೋತ್ಸವ ಸಂಭ್ರಮದಲ್ಲೂ ಇಬ್ಬರೂ ಬೆಸೆದುಕೊಂಡೇ ಓಡಾಡುತ್ತಿದ್ದರು. ಪತ್ರಕರ್ತರು ಕಣ್ಣಿಗೆ ಬಿದ್ದಾಗ ಮಾತ್ರ ತಪ್ಪಿಸಿಕೊಳ್ಳುತ್ತಿದ್ದರು. ನಿಮ್ಮಿಬ್ಬರ ಕಥೆ ಏನು ಎಂದು ಕೇಳೋಣವೆಂದರೂ ಸಿಗುತ್ತಿರಲಿಲ್ಲ. ಅಲ್ಲಿಗೆ ಇಬ್ಬರ ನಡುವಿನ ಗುಸುಗುಸು ಅನುಮಾನ ಬಲವಾಗಿದೆ.

ಅಂದಹಾಗೆ ಅಮಲಾ ಪೌಲ್ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿ ಠುಸ್ ಆಗಿದೆ. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸೊಂಟ ಬಳುಕಿಸಿದ್ದ ಅಮಲಾ ಪೌಲ್ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿ ಇತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಅಂಬರೀಶ' ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ ಎಂಬ ಮಾತು ಈಗ ಹುಸಿಯಾಗಿದೆ.

English summary
Amala Paul , the rising star in the industry has made it to the headlines once again. She is rumoured to be dating her Thalaivaa movie director AL Vijay ! According to sources, Amala Paul and the director were spotted together at many places.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada