For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ರ 'ಹೆಬ್ಬುಲಿ'ಗೆ ನಾಯಕಿ ಇವರೇನಾ?

  By Suneetha
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಕೋಟಿಗೊಬ್ಬ 2' ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಇನ್ನೇನು ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಇದಾದ ನಂತರ ಸುದೀಪ್ ಅವರು 'ಹೆಬ್ಬುಲಿ' ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

  'ಗಜಕೇಸರಿ' ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಹೊಂದಿರುವ ಛಾಯಾಗ್ರಾಹಕ ಎಸ್ ಕೃಷ್ಣ ಅವರು ಇದೀಗ ಸುದೀಪ್ ಅವರ 'ಹೆಬ್ಬುಲಿ' ಚಿತ್ರಕ್ಕೆ ನಿರ್ದೇಶನ ಮಾಡುವ ಹೊಣೆ ಹೊತ್ತಿದ್ದಾರೆ.[ಆರಂಭಿಕ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಚ್ಚ ಸುದೀಪ್]

  ಅಂದಹಾಗೆ ಈ ಚಿತ್ರಕ್ಕೆ ನಾಯಕಿಯರ ಹುಡುಕಾಟದಲ್ಲಿ ತೊಡಗಿದ್ದ 'ಗಜಕೇಸರಿ' ಕೃಷ್ಣ ಅವರು ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರನ್ನು ಸಂಪರ್ಕ ಮಾಡಿದ್ದಾರಂತೆ.

  ಈಗಾಗಲೇ ಕಥೆ ಕೇಳಿರುವ 'ತಲೈವಾ', 'ಪಸಂಗ' ಹಾಗೂ 'ನಾಯಕ್', ಖ್ಯಾತಿಯ ನಟಿ ಅಮಲಾ ಪೌಲ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಉತ್ಸಾಹ ತೋರಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ಮಾಹಿತಿ ಇನ್ನೂ ಖಚಿತವಾಗಿಲ್ಲ.[ಗಂಡನೊಂದಿಗೆ ಮುನಿಸಿಕೊಂಡ ತಾರೆ ಅಮಲಾ ಪೌಲ್]

  ಯಾಕೆಂದರೆ ಅಮಲಾ ಪೌಲ್ ಅವರ ಡೇಟ್ ಹೊಂದಾಣಿಕೆ ಆದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ. ಆದ್ದರಿಂದ ಕೆಲವು ವಿಧಿ ವಿಧಾನಗಳು ಮುಗಿದ ನಂತರವೇ ಆಫೀಶಿಯಲ್ ಆಗಿ ಘೋಷಣೆ ಮಾಡಲಾಗುತ್ತದೆ ಎಂದು ಎಸ್.ಕೃಷ್ಣ ತಿಳಿಸಿದ್ದಾರೆ.

  ಇನ್ನು ನಟಿ ಅಮಲಾ ಪೌಲ್ ಅವರು ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಒಂದೊಳ್ಳೆಯ ಸ್ಕ್ರಿಪ್ಟ್ ಗಾಗಿ ಕಾದು ಕುಳಿತಿದ್ದು, ಒಂದು ವೇಳೆ ಎಸ್ ಕೃಷ್ಣ ಅವರ ಕಥೆ ಇಷ್ಟವಾಗಿ ಡೇಟ್ ಹೊಂದಾಣಿಕೆ ಆದರೆ ಅವರು ಸ್ಯಾಂಡಲ್ ವುಡ್ ಗೆ ಕಾಲಿಡೋದು ಪಕ್ಕಾ.[ಕಂದಮ್ಮನ ನಿರೀಕ್ಷೆಯಲ್ಲಿ ತಾರೆ ಅಮಲಾ ಪೌಲ್?]

  ಎಸ್.ಆರ್.ವಿ ಪ್ರೊಡಕ್ಷನ್ಸ್ ಹಾಗೂ ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 'ಹೆಬ್ಬುಲಿ' ಚಿತ್ರಕ್ಕೆ ಇನ್ನುಳಿದ ತಾರಾಗಣದ ಹುಡುಕಾಟದಲ್ಲಿ 'ಗಜಕೇಸರಿ' ಕೃಷ್ಣ ಅವರು ಬ್ಯುಸಿಯಾಗಿದ್ದಾರೆ.[ಹಿಂದೂ ಸಂಪ್ರದಾಯದಂತೆ ಅಮಲಾ ಪೌಲ್ ಮದುವೆ]

  ಮೇ ಮೊದಲ ವಾರದಿಂದ ಶೂಟಿಂಗ್ ಆರಂಭವಾಗಲಿದ್ದು, ಸುದೀಪ್ ಅವರು 'ಹೆಬ್ಬುಲಿ' ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. 'ಮಾಣಿಕ್ಯ' ಚಿತ್ರದ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಚಿತ್ರದಲ್ಲಿ ಕಿಚ್ಚನ ಅಣ್ಣನ ಪಾತ್ರ ವಹಿಸಲಿದ್ದಾರೆ.

  ಕಿಚ್ಚ ಸುದೀಪ್ ರ 'ಹೆಬ್ಬುಲಿ'ಗೆ ನಾಯಕಿ ಇವರೇನಾ?

  English summary
  Director S Krishna is approached the South Indian Actress Amala Paul and are now working on the dates and other formalities before making an official announcement. If everything goes as planned, Amala will be paired opposite Sudeep for the first time in Kannada Movie 'Hebbuli'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X