For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಗಾಗಿ ಚಿರಂಜೀವಿ ಸಿನಿಮಾ ತಿರಸ್ಕರಿಸಿದ್ರಾ ನಟಿ ಅನುಷ್ಕಾ ಶೆಟ್ಟಿ?

  |

  ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ಆಚಾರ್ಯ ಸಿನಿಮಾಗೆ ನಾಯಕಿಯ ಸಮಸ್ಯೆ ಎದುರಾಗಿದೆ. ನಟಿ ತ್ರಿಷಾ ಚಿತ್ರದಿಂದ ಔಟ್ ಆದ ನಂತರ ಮೆಗಾ ಸ್ಟಾರ್ ಜೊತೆ ರೋಮ್ಯಾನ್ಸ್ ಮಾಡುವ ನಾಯಕಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ನಾಯಕಿಯನ್ನು ಹುಡುತ್ತಿರುವ ಚಿತ್ರತಂಡಕ್ಕೆ ಈಗ ದೊಡ್ಡ ತಲೆ ನೋವಾಗಿದೆ.

  ತುಳು ನಾಡಿನ ಪೆಳಕಾಯಿ ಗಟ್ಟಿ ಸವಿದ ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ | Shilpa Shetty | Mangalore Food

  ತ್ರಿಷಾ ಜಾಗಕ್ಕೆ ನಟಿ ಕಾಜಲ್ ಅಗರ್ವಾಲ್ ಬರ್ತಾರೆ, ನಟಿ ಅನುಷ್ಕಾ ಬರ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ನಾಯಕಿಯ ವಿಚಾರವಾಗಿ ಯಾವುದೆ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಚಿರಂಜೀವಿ ಜೊತೆ ನಟಿ ಅನುಷ್ಕಾ ನಾಯಕಿಯಾಗಿ ಕಾಣಿಸಿಕೊಳ್ಳುವುದು ಪಕ್ಕಾ ಎಂದು ಹೇಳಲಾಗಿತ್ತು. ಆದರೀಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಅನುಷ್ಕಾ, ಚಿರು ಸಿನಿಮಾಗೆ ನೋ ಎಂದಿದ್ದಾರಂತೆ.

  ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿ ಅನುಷ್ಕಾ ರೋಮ್ಯಾನ್ಸ್?ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿ ಅನುಷ್ಕಾ ರೋಮ್ಯಾನ್ಸ್?

  'ಆಚಾರ್ಯ'ದಲ್ಲಿ ಅನುಷ್ಕಾ ಅಭಿನಯಿಸುವುದು ಅನುಮಾನ

  'ಆಚಾರ್ಯ'ದಲ್ಲಿ ಅನುಷ್ಕಾ ಅಭಿನಯಿಸುವುದು ಅನುಮಾನ

  ನಟಿ ಅನುಷ್ಕಾ ಶೆಟ್ಟಿ ಆಚಾರ್ಯ ಸಿನಿಮಾದಲ್ಲಿ ಅಭಿನಯಿಸುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ತ್ರಿಷಾ ಬಿಟ್ಟುಹೋದ ಜಾಗಕ್ಕೆ ಅನುಷ್ಕಾ ಅವರನ್ನು ಕರೆತರಲು ಚಿತ್ರತಂಡ ಪ್ಲಾನ್ ಮಾಡಿತ್ತು. ಅಲ್ಲದೆ ಅನುಷ್ಕಾ ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಚಿತ್ರತಂಡ ಪ್ರಯತ್ನ ವಿಫಲವಾಗಿದೆ. ಯಾಕಂದ್ರೆ ಅನುಷ್ಕಾ ಆಚಾರ್ಯ ಸಿನಿಮಾವನ್ನು ತಿರಸ್ಕರಿಸಿದ್ದಾರಂತೆ.

  ಪ್ರಭಾಸ್ ಜತೆಗಿನ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ ಹೇಳಿದ್ದೇನು?ಪ್ರಭಾಸ್ ಜತೆಗಿನ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ ಹೇಳಿದ್ದೇನು?

  ನೋ ಎನ್ನಲು ಕಾರಣವೇನು?

  ನೋ ಎನ್ನಲು ಕಾರಣವೇನು?

  ಅಂದ್ಹಾಗೆ ಅನುಷ್ಕಾ ಸದ್ಯ ನಿಶಬ್ದಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ನಂತರ ಅನುಷ್ಕಾ, ಪ್ರಭಾಸ್ ನಿರ್ಮಾಣದ ಮೊದಲ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆ ಸಿನಿಮಾ ಮಹಿಳಾ ಪ್ರಧಾನವಾದ ಚಿತ್ರವಾಗಿದೆಯಂತೆ. ಈಗಾಗಲೆ ಈ ಚಿತ್ರ ಒಪ್ಪಿಕೊಂಡ ಕಾರಣ ಅನುಷ್ಕಾ ಆಚಾರ್ಯ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

  ಚಿರಂಜೀವಿಗೆ ನಾಯಕಿಯಾಗಿಲ್ಲ ಅನುಷ್ಕಾ

  ಚಿರಂಜೀವಿಗೆ ನಾಯಕಿಯಾಗಿಲ್ಲ ಅನುಷ್ಕಾ

  ಆಚಾರ್ಯ ಸಿನಿಮಾಗೆ ಅನುಷ್ಕಾ ಆಯ್ಕೆಯಾದರೆ ಮೊದಲ ಬಾರಿಗೆ ಚಿರು ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಚಿರಂಜೀವಿ ಜೊತೆ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ಎರಡೂ ಸಿನಿಮಾದಲ್ಲೂ ಅನುಷ್ಕಾ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. 'ಸ್ಟಾಲಿನ್' ಸಿನಿಮಾದಲ್ಲಿ ಅನುಷ್ಕಾ ಹಾಡೊಂದರಲ್ಲಿ ಚಿರು ಜೊತೆ ಹೆಜ್ಜೆಹಾಕಿದ್ದರು. ಇನ್ನು ಇತ್ತೀಚಿಗೆ ತೆರೆಕಂಡ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲೂ ಅನುಷ್ಕಾ ವಿಶೇಷ ಪಾತ್ರದಲ್ಲಿ ಬಣ್ಣಹಚ್ಚಿದ್ದರು. ಸದ್ಯ ಆಚಾರ್ಯ ಸಿನಿಮಾ ಕೂಡ ಮಿಸ್ ಆಗುವ ಸಾಧ್ಯತೆ ಇದೆ.

  ಚಿರಂಜೀವಿ ಸಿನಿಮಾದಿಂದ ಹೊರಬಂದ ಮಹೇಶ್ ಬಾಬು: ಅಸಲಿ ಕಾರಣ ಬಹಿರಂಗಚಿರಂಜೀವಿ ಸಿನಿಮಾದಿಂದ ಹೊರಬಂದ ಮಹೇಶ್ ಬಾಬು: ಅಸಲಿ ಕಾರಣ ಬಹಿರಂಗ

  ಸಿನಿಮಾದಿಂದ ಹೊರಬಂದ ಮಹೇಶ್ ಬಾಬು

  ಸಿನಿಮಾದಿಂದ ಹೊರಬಂದ ಮಹೇಶ್ ಬಾಬು

  ಆಚಾರ್ಯ ಸಿನಿಮಾದ ವಿಶೇಷ ಪಾತ್ರದಲ್ಲಿ ನಟ ಮಹೇಶ್ ಬಾಬು ಕಾಣಿಸಿಕೊಳ್ಳಬೇಕಿತ್ತು. ಆದರೆ ಮಹೇಶ್ ಬಾಬು ಕೂಡ ಸಿನಿಮಾದಿಂದ ಹೊರಬಂದಿದ್ದಾರೆ. ಸಂಭಾವನೆ ವಿಚಾರವಾಗಿ ಪ್ರಿನ್ಸ್ ಮೆಗಾ ಸ್ಟಾರ್ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ಪಾತ್ರವನ್ನು ನಟ ರಾಮ್ ಚರಣ್ ಮಾಡಲಿದ್ದಾರಂತೆ. ಒಟ್ನಲ್ಲಿ ಆಚಾರ್ಯ ತಂಡ ಒಂದಲ್ಲೊಂದು ತಲೆನೋವಿನಲ್ಲಿ ಸಿಲುಕಿದೆ.

  English summary
  Actress Anushka Shetty reject Chiranjeevi starrer Acharya film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X