»   » 'ಜಾಕಿ' ಭಾವನಾ ಮದುವೆ ಆಗ್ತಿರೋದು ಇವರನ್ನಾ?

'ಜಾಕಿ' ಭಾವನಾ ಮದುವೆ ಆಗ್ತಿರೋದು ಇವರನ್ನಾ?

By: ಸೋನು ಗೌಡ
Subscribe to Filmibeat Kannada

'ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಲ್ಲು ಕುಟ್ಟಿ ನಟಿ ಭಾವನಾ ಅವರ ಮದುವೆಯ ಬಗ್ಗೆ ಈ ಮೊದಲು ಗಾಂಧಿನಗರದ ಗಲ್ಲಿ-ಗಲ್ಲಿಗಳಲ್ಲಿ ಸುದ್ದಿಯಾಗಿತ್ತು. ಕೇರಳದ ಬೆಡಗಿ ಭಾವನಾ ಅವರು ನಮ್ಮ ಕನ್ನಡ ಹುಡುಗನನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಅಂತಾನೂ ಸುದ್ದಿಯಾಗಿತ್ತು.

ಕನ್ನಡದಲ್ಲಿ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ ಮುಂತಾದವರ ಜೊತೆ ಸಿನಿಮಾ ಮಾಡಿರುವ ಭಾವನಾ ಅವರು ಇದೀಗ ಕನ್ನಡದ ಹುಡುಗನನ್ನು ಮದುವೆಯಾಗುತ್ತಿರೋದು ಪಕ್ಕಾ.['ಜಾಕಿ' ಭಾವನಾ ಮದುವೆ ಆಗ್ತಿರೋದು ಯಾರನ್ನ ಅಂತ ನಿಮಗೆ ಗೊತ್ತಾ?]

ಈ ಮೊದಲು ಕನ್ನಡದ ಹುಡುಗ ಆದರೂ ಯಾರು ಅನ್ನೋದು ಯಾರಿಗೂ ಗೊತ್ತಿರಲಿಲ್ಲ ಇದೀಗ ಹುಡುಗ ಯಾರೆಂಬುದು ತಿಳಿದಿದ್ದು ನಟಿ ಜೂನ್ ತಿಂಗಳಲ್ಲಿ ಹಸೆಮಣೆ ಏರುತ್ತಿದ್ದಾರೆ.[ನಟಿ 'ಪ್ರೇಮ' ಸಂಸಾರ 'ಜೀವನ'ದಲ್ಲಿ ಬಿರುಕು! ಅಸಲಿ ಕಾರಣವೇನು?]

ಅಂದಹಾಗೆ 'ಜಾಕಿ' ಹುಡುಗಿಯ ಮನಗೆದ್ದ ಆ ಸುರ-ಸುಂದರಾಂಗ ಹುಡುಗ ಯಾರು ಅನ್ನೋದು ನಿಮಗೆ ಗೊತ್ತಾಗಬೇಕೇ?, ಹಾಗಿದ್ರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ನಟ ಕಮ್ ನಿರ್ಮಾಪಕ ನವೀನ್

'ಜಾಕಿ' ಭಾವನಾ ಮದುವೆಯಾಗುತ್ತಿರುವ ಕನ್ನಡದ ಹುಡುಗ ಬೇರಾರು ಅಲ್ಲ. ಭಾವನಾ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿಸಿದ್ದ 'ರೋಮಿಯೋ' ಚಿತ್ರಕ್ಕೆ ಬಂಡವಾಳ ಹೂಡಿದ್ದ ನಟ ಕಮ್ ನಿರ್ಮಾಪಕ ನವೀನ್ ನಾಗರಾಜನ್.[ಹುಡುಗರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್: ಪ್ರಿಯಾಮಣಿಗೆ ಮದುವೆ]

'ನಾಯಕ' ಸಿನಿಮಾ ಮಾಡಿದ್ದ ನವೀನ್

ಭಾವನಾ ಅವರ ಕೈ ಹಿಡಿಯಲಿರುವ ನಿರ್ಮಾಪಕ ನವೀನ್ ನಾಗರಾಜನ್ ಅವರು ನಟಿ ರಾಗಿಣಿ ದ್ವಿವೇದಿ ಅವರ ಜೊತೆ 'ನಾಯಕ' ಎಂಬ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಅದೊಂದೇ ಸಿನಿಮಾದಲ್ಲಿ ನಟಿಸಿದ್ದು ಬಿಟ್ಟರೆ ಬೇರೆ ಯಾವ ಸಿನಿಮಾದಲ್ಲೂ ನವೀನ್ ಅವರು ನಟಿಸಿಲ್ಲ.

4 ವರ್ಷಗಳ ಲವ್

ಅಂದಹಾಗೆ ಇವರಿಬ್ಬರು ಮೊದ ಮೊದಲು ಒಳ್ಳೆಯ ಸ್ನೇಹಿತರಾಗಿದ್ದರು ತದನಂತರ ಸ್ನೇಹ ಪ್ರೀತಿಗೆ ತಿರುಗಿತಂತೆ. ಅಂತೂ ಇವರಿಬ್ಬರು ಸತತ ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದಾರೆ.

ಜೂನ್ ತಿಂಗಳಿನಲ್ಲಿ ಮದುವೆ

ಇದೀಗ 'ಜಾಕಿ', 'ಬಚ್ಚನ್' ಖ್ಯಾತಿಯ ನಟಿ ಭಾವನಾ ಅವರು ಜೂನ್ ತಿಂಗಳಿನಲ್ಲಿ ಕನ್ನಡದ ಹುಡುಗ ನವೀನ್ ಅವರ ಜೊತೆ ಹಸೆಮಣೆ ಏರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನವೀನ್ ತಂದೆ ಬ್ಯುಸಿನೆಸ್ ಮೆನ್

ನಟ ಕಮ್ 'ರೋಮಿಯೋ' ಚಿತ್ರದ ನಿರ್ಮಾಪಕ ನವೀನ್ ಅವರದು ಬ್ಯುಸಿನೆಸ್ ಬ್ಯಾಕ್ ಗ್ರೌಂಡ್. ಅವರ ತಂದೆ ದೊಡ್ಡ ಉದ್ಯಮಿಯಾಗಿದ್ದಾರೆ.

ಕನ್ನಡದ ಮನೆಮಗಳಾದ ಭಾವನಾ

ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ', 'ಯಾರೇ ಕೂಗಾಡಲಿ' ಮತ್ತು 'ಮೈತ್ರಿ', ಕಿಚ್ಚ ಸುದೀಪ್ ಅಭಿನಯದ 'ವಿಷ್ಣುವರ್ಧನ' ಮತ್ತು 'ಬಚ್ಚನ್', ಗಣೇಶ್ ರವರ 'ರೋಮಿಯೋ' ಹಾಗೂ ಉಪೇಂದ್ರ ಅಭಿನಯದ 'ಟೋಪಿವಾಲಾ' ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಭಾವನಾ ಅವರು ಕನ್ನಡದ ಮನೆಮಗಳಾಗಿಯೇ ಖ್ಯಾತಿ ಪಡೆದರು.

English summary
Actress Bhavana of 'Jackie' fame has opened up on her relationship status during an interview with a Malayalam Channel. Bhavana has revealed that she has been in a serious relationship with Producer in Kannada Film Industry. The couple will be entering wedlock this year itself.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada