For Quick Alerts
  ALLOW NOTIFICATIONS  
  For Daily Alerts

  ಆಸ್ತಿಪಾಸ್ತಿಯನ್ನು ಮಾರಾಟಕ್ಕಿಟ್ಟ ನಟಿ ಇಲಿಯಾನಾ

  By ಅನಂತರಾಮು, ಹೈದರಾಬಾದ್
  |

  ಕನ್ನಡದ 'ಹುಡುಗ ಹುಡುಗಿ' ಚಿತ್ರದಲ್ಲಿ ಹೆಜ್ಜೆ ಹಾಕಿದ್ದ ನಟಿ ಇಲಿಯಾನಾ ಡಿಸೋಜಾ ತಮ್ಮ ಆಸ್ತಿಪಾಸ್ತಿಯನ್ನು ಮಾರಾಟಕ್ಕಿಟ್ಟಿದ್ದಾರೆ. ದಕ್ಷಿಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ತಾರೆ ಈಗ ತಮ್ಮ ಚಿತ್ತವನ್ನು ಬಾಲಿವುಡ್ ನೆಡೆಗೆ ನೆಟ್ಟಿರುವುದೇ ಇದಕ್ಕೆ ಕಾರಣ.

  ಸದ್ಯಕ್ಕೆ ಬಾಲಿವುಡ್ ನಲ್ಲಿ ಸಾಕಷ್ಟು ಅವಕಾಶಗಳು ಇಲಿಯಾನಾಗೆ ಬರುತ್ತಿದ್ದು ಹೈದರಾಬಾದ್ ನಲ್ಲಿನ ತನ್ನ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರಂತೆ. ಲ್ಯಾಂಕೋವರ್ ಟವರ್ಸ್ ನ ರು.1.25 ಕೋಟಿ ಬೆಲೆಬಾಳುವ ಫ್ಲಾಟನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎನ್ನುತ್ತವೆ ಮೂಲಗಳು. [ಲವ್ ಮಾಡ್ತಿದ್ದೀನಿ ಎಂದು ಮೋಸ ಮಾಡ್ದ]

  ಮುಂಬೈಗೆ ಸ್ಥಳಾಂತರವಾಗಿ ಅಲ್ಲೇ ಸೆಟ್ಲ್ ಆಗಲು ಇಲಿಯಾನಾ ಬಯಸಿದ್ದಾರಂತೆ. ಚಿತ್ರವೊಂದಕ್ಕೆ ಒಂದು ಕೋಟಿಗೂ ಅಧಿಕ ಸಂಭಾವನೆ ಎಣಿಸುತ್ತಿದ್ದ ಇಲಿಯಾನಾ ದಕ್ಷಿಣದಲ್ಲಿ ಸಾಕಷ್ಟು ಸಂಪಾದಿಸಿದರು. ಈಗ ಅವರ ದೃಷ್ಟಿ ಬಾಲಿವುಡ್ ಮೇಲೆ ಬಿದ್ದಿದೆ.

  'ಬರ್ಫಿ' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಇಲಿಯಾನಾ. ಚೊಚ್ಚಲ ಚಿತ್ರದಲ್ಲೇ ವಿಜಯಲಕ್ಷ್ಮಿ ಕೈಹಿಡಿದಳು. ಅಲ್ಲಿಂದ ಬಾಲಿವುಡ್ ಚಿತ್ರಗಳಲ್ಲಿ ಹೆಚ್ಚಾಗಿ ಅವಕಾಶಗಳು ಹುಡುಕಿಕೊಂಡು ಬಂದವು. ಇನ್ನು ದಕ್ಷಿಣದ ಚಿತ್ರಗಳಿಗೆ ಬಹುತೇಕ ಗುಡ್ ಬೈ ಹೇಳಿ ತಮ್ಮ ಅಡ್ರೆಸ್ ಮುಂಬೈಗೆ ಬದಲಾಯಿಸಿಕೊಂಡರು.

  ಮುಂಬೈಗೆ ಸ್ಥಳಾಂತರವಾದ ಬಳಿಕ ಅಲ್ಲೇ ರು.3.5 ಕೋಟಿ ಬೆಲೆಬಾಳುವ ವಿಲ್ಲಾವನ್ನು ಖರೀದಿಸಿದರು. "ನಾನು ಕ್ರಿಶ್ಚಿಯನ್ ಆಗಿದ್ದರೂ ಆಗಾಗ ಹಿಂದೂ ದೇವಾಲಯಗಳಿಗೆ ಹೋಗುತ್ತಿರುತ್ತೇನೆ. ಮಸೀದಿಗೂ ಭೇಟಿ ನೀಡುತ್ತಿರುತ್ತೇನೆ. ನಮಗಿಂತಲೂ ಮೇಲೆ ಯಾರೋ ಇದ್ದಾರೆಂದೂ, ಆ ಶಕ್ತಿಯೇ ನಮ್ಮನ್ನು ಮುನ್ನಡೆಸುತ್ತಿದೆ ಎಂಬ ನಂಬಿಕೆ ನನ್ನದು" ಎನ್ನುತ್ತಾರೆ ಇಲಿ.

  English summary
  Ileana D'Cruz has bought a flat in Lanco elegant Towers in Manikonda some time, to the tune of Rs . 1.25 cores and now she is looking to either dispose of the property or let it out if she finds a suitable tenant since she has no plans to return to Tollywood in the near future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X