»   » ಲವ್ ಮಾಡ್ತಿದ್ದೀನಿ ಎಂದು ಮೋಸ ಮಾಡ್ದ; ಇಲಿಯಾನಾ

ಲವ್ ಮಾಡ್ತಿದ್ದೀನಿ ಎಂದು ಮೋಸ ಮಾಡ್ದ; ಇಲಿಯಾನಾ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಪ್ರೀತಿ ಪ್ರೇಮ ಪ್ರಣಯದ ವಿಚಾರದಲ್ಲಿ ಮೋಸ ಹೋಗುವುದು ಕೇವಲ ಪ್ರೇಮಿಗಳಷ್ಟೇ ಅಲ್ಲ ತಾರೆಗಳೂ ಒಮ್ಮೊಮ್ಮೆ ಮೋಸ ಹೋಗುತ್ತಾರೆ ಎಂಬುದಕ್ಕೆ ಇಲ್ಲಿದೆ ನಿದರ್ಶನ. ಕನ್ನಡದಲ್ಲಿ ಸೊಂಟ ಬಳುಕಿಸಿದ್ದ ಇಲಿಯಾನಾ ತಮ್ಮ ಲವ್ ಫೆಯಿಲೂರ್ ಬಗ್ಗೆ ಹೇಳಿಕೊಂಡಿದ್ದಾರೆ.

ನಾನು ಒಬ್ಬ ಟಾಲಿವುಡ್ ಹೀರೋನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಆದರೆ ಆತ ನನಗೆ ಮೋಸ ಮಾಡಿದ ಎಂದು ಹೀರೋ ಹೆಸರು ಪ್ರಸ್ತಾಪಿಸದೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಈ ಹಿಂದೆಯೂ ಇಲಿಯಾನಾ ಹೇಳಿಕೊಂಡಿದ್ದರು.


ಆದರೆ ಯಾರೂ ಅದನ್ನು ಸೀರಿಯಸ್ಸಾಗಿ ನಂಬಿರಲಿಲ್ಲ. ಇದು ಕೇವಲ ಪುಕಾರು ಎಂದುಕೊಂಡಿದ್ದರು. ಅಯ್ಯೋ ಇರಲೂ ಬಹುದು ಎಂದು ಕೆಲವರು ಅಂದುಕೊಂಡಿದ್ದರು. ಇತ್ತೀಚೆಗೆ ಹಿಂದಿ ಸಿನಿಮಾ ಪ್ರೊಮೋಷನ್ಸ್ ನಲ್ಲಿ ಈ ಬಗ್ಗೆ ಸಾಕಷ್ಟು ಹೇಳಿಕೊಂಡಿದ್ದಾರೆ.

ಫಾರಿನ್ ಫೋಟೋಗ್ರಫರ್ ಜೊತೆ ನೀವು ಕಣ್ಣಾಮುಚ್ಚಾಲೆ ಆಡುತ್ತಿದ್ದೀರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಇಲಿ, "ನಾನು ಯಾರನ್ನೂ ಅಷ್ಟು ಬೇಗ ನನ್ನ ಹೃದಯದಲ್ಲಿ ಬಿಟ್ಟುಕೊಳ್ಳಲ್ಲ. ಒಮ್ಮೆ ಮೋಸ ಹೋಗಿದ್ದೇನೆ. ಈ ಬಾರಿ ಹೇಗೆ ಇರಬೇಕು ಎಂಬುದು ನನಗೆ ಗೊತ್ತು" ಎಂದಿದ್ದಾರೆ.

ತೆಲುಗು ಚಿತ್ರಗಳಲ್ಲಿ ಅಭಿನಯಿಸಬೇಕಾದರೆ ಒಬ್ಬ ಹೀರೋಗೆ ನನ್ನ ಮನಸ್ಸನು ಕೊಟ್ಟೆ. ಅವನೇ ನನ್ನ ಸರ್ವಸ್ವ ಎಂದು ಭಾವಿಸಿದೆ. ಆದರೆ ಆತ ನನ್ನ ನಂಬಿಕೆಯನ್ನು ಹುಸಿ ಮಾಡಿದ. ನನಗೆ ಮೋಸ ಮಾಡಿದ" ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

English summary
The need of the hour is to be brave, sensible and alert. I like to believe that I am street smart. But I am incredibly wary now. I have bolts on the door with solid locking system. I am careful where I go and I don't step out too much in the night," Ileana says.
Please Wait while comments are loading...