»   » ಕಾಜಲ್ ಅಗರವಾಲ್ ಕಾಂಡೋಮ್ ಜಾಹೀರಾತು ಕಹಾನಿ

ಕಾಜಲ್ ಅಗರವಾಲ್ ಕಾಂಡೋಮ್ ಜಾಹೀರಾತು ಕಹಾನಿ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ದಕ್ಷಿಣ ಭಾರತದ ಬಲು ಬೇಡಿಕೆಯುಳ್ಳ ತಾರೆಯರಲ್ಲಿ ಕಾಜಲ್ ಅಗರವಾಲ್ ಸಹ ಒಬ್ಬರು. ಒಂದು ಕಡೆ ಸಾಲುಸಾಲು ಚಿತ್ರಗಳಲ್ಲಿ ಬಿಜಿಯಾಗಿದ್ದರೆ ಇನ್ನೊಂದು ಕಡೆ ಜಾಹೀರಾತುಗಳಲ್ಲೂ ಮಿಂಚುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕೈತುಂಬ ಸಂಪಾದಿಸುತ್ತಿರುವ ತಾರೆ ಎನ್ನಬಹುದು.

ಇತ್ತೀಚೆಗೆ ಇನ್ನೊಂದು ಸದಾವಕಾಶವೂ ಕಾಜಲ್ ಅವರನ್ನು ಹುಡುಕಿಕೊಂಡು ಬಂದಿದೆ. ಪ್ರಸಿದ್ಧ ಕಾಂಡೋಮ್ ಕಂಪನಿಯೊಂದು ತಮ್ಮ ಉತ್ಪನ್ನಕ್ಕೆ ರಾಯಭಾರಿಯಾಗುವಂತೆ ವಿನಂತಿಕೊಂಡಿದ್ದಾರೆ. ಕಾಂಡೋಮ್ ಜಾಹೀರಾತಿನಲ್ಲಿ ನಟಿಸಲು ತಮ್ಮದೇನು ಅಭ್ಯಂತರವಿಲ್ಲ...ಆದರೆ ಸಂಭಾವನೆ ಎಂದು ರಾಗ ಎಳೆದಿದ್ದಾರೆ. [ಬಾಯ್ ಫ್ರೆಂಡ್ ಜತೆ ಕಾಜಲ್ ವಿಹಾರ ಚಿತ್ರ ಸೋರಿಕೆ]

Kajal Aggarwal

ತಮ್ಮ ಕಾಂಡೋಮ್ ಜಾಹೀರಾತಿನಲ್ಲಿ ನಟಿಸಲು ತನಗೆ ಕೇವಲ ರು.2 ಕೋಟಿ ಕೊಡಿ ಸಾಕು ಎಂದರಂತೆ. ಇದನ್ನು ಕೇಳಿದ ಕಂಪನಿಯವರಿಗೆ ತಲೆ ಗಿರ್‍ರನೆ ತಿರುಗಿತಂತೆ. ಸುಧಾರಿಸಿಕೊಂಡ ಬಳಿಕ ಅಷ್ಟೆಲ್ಲಾ ತಮ್ಮ ಕೈಲಿ ಆಗಲ್ಲ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದರಂತೆ.

ಸದ್ಯಕ್ಕೆ ಈ ಸಂಗತಿ ಟಾಲಿವುಡ್ ವಲಯದಲ್ಲಿ ಭಾರಿ ಕೋಹಾಹಲವನ್ನೇ ಉಂಟು ಮಾಡಿದೆ. ಚಿತ್ರವೊಂದಕ್ಕೇ ಕಾಜಲ್ ಅಗರವಾಲ್ ಸಂಭಾವನೆ ಅಷ್ಟಿಲ್ಲ. ಜಾಹೀರಾತಿಗೆ ಈ ಪಾಟಿ ಕೇಳುವುದಾ ಎಂದು ಮೂಗು ಮುರಿಯುತ್ತಿದ್ದಾರೆ. ಆದರೆ ಇದು ಕಾಂಡೋಮ್ ಜಾಹೀರಾತು ಆದಕಾರಣ ಕಾಜಲ್ ಕೇಳಿದ್ದರಲ್ಲಿ ತಪ್ಪೇನು ಎನ್ನುವವರೂ ಇದ್ದಾರೆ.

Kajal Aggarwal

ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಕಾಜಲ್ ಅಗರವಾಲ್ ಸದ್ಯಕ್ಕೆ ಬಿಜಿಯಾಗಿದ್ದಾರೆ. ಒಂದು ಕಾಲದಲ್ಲಿ ಅಂದರೆ ಕಾಜಲ್ ಅವರ ವೃತ್ತಿ ಬದುಕು ಉಚ್ಛ್ರಾಯಸ್ಥಿತಿಯಲ್ಲಿದ್ದಾಗ ಅಯ್ಯೋ ತುಟಿಗೆ ತುಟಿ ಬೆರೆಸುವುದಾ? ಬಿಕಿನಿನಾ ಹಂಗಂದ್ರೆ ಏನು? ಎಂದು ಕೇಳುತ್ತಿದ್ದರು. ಈಗ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾರೆ. ದುಡ್ಡು ಕೊಟ್ರೆ ಎಂತಹಾ ಪಾತ್ರ ಜಾಹೀರಾತುಗೂ ಜೈ ಅನ್ನುತ್ತಿದ್ದಾರೆ ಈ ಮಾಜಿ ಲಕ್ಸ್ ಸುಂದರಿ.
English summary
According to latest reports, one of the top heroines of Tollywood Kajal Aggarwal has now been approached to endorse a popular Condom brand. But the actress demands Rs. 2 crores says the sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada