»   » 'ಉಪ್ಪಿ-2' ಚಿತ್ರಕ್ಕೆ ಹಾಟ್ ಸೆನ್ಸೇಷನ್ ಕತ್ರೀನಾ ಕೈಫ್

'ಉಪ್ಪಿ-2' ಚಿತ್ರಕ್ಕೆ ಹಾಟ್ ಸೆನ್ಸೇಷನ್ ಕತ್ರೀನಾ ಕೈಫ್

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಗೆ ಈ ವರ್ಷ ಬಾಲಿವುಡ್ ಟಾಪ್ ಬ್ಯೂಟಿ ಕತ್ರೀನಾ ಕೈಫ್ ಬರೋದು ಖಾತ್ರಿಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ 'ಉಪ್ಪಿ-2' ಬಗ್ಗೆ ಅಭಿಮಾನಿಗಳಲ್ಲಿ ಇನ್ನಿಲ್ಲದ ನಿರೀಕ್ಷೆಗಳಿವೆ. ಕಳೆದ ವರ್ಷ ಸೆಷ್ಟೆಂಬರ್ 18 ಅಂದರೆ ಉಪೇಂದ್ರ ಹುಟ್ಟುಹಬ್ಬಕ್ಕೆ ಚಿತ್ರ ಮುಹೂರ್ತ ಮಾಡಿಕೊಂಡಿತ್ತು.

ಉಪ್ಪಿ ತಮ್ಮ ಬಹುನಿರೀಕ್ಷಿತ 'ಉಪ್ಪಿ 2' ಚಿತ್ರವನ್ನ ತಮ್ಮದೇ ಪ್ರೊಡಕ್ಷನ್ಸ್ ನಲ್ಲಿ ಮಾಡೋದಕ್ಕೆ ಉಪೇಂದ್ರ ಪ್ರೊಡಕ್ಷನ್ ಹೌಸನ್ನ ಕೂಡ ಲಾಂಚ್ ಮಾಡಿದ್ರು. ಕಂಠೀರವ ಸ್ಟುಡಿಯೋದಲ್ಲಿ ಉಪ್ಪಿ ಕನ್ನಡಿಯನ್ನ ಇಟ್ಟು ಅದ್ಧೂರಿ ಮುಹೂರ್ತ ಮಾಡಿ ಸಿನಿಮಾ ಫೆಬ್ರವರಿಯಲ್ಲಿ ಶುರು ಅಂದಿದ್ರು. [ಉಪ್ಪಿ-ಪ್ರಿಯಾಂಕಾ ಆರು ತಿಂಗಳ ಕಾಲ ಡೈವೋರ್ಸ್!]


ಆಗಲೇ ಉಪ್ಪಿ ಸಿನಿಮಾಗೆ ಬಾಲಿವುಡ್ ಡರ್ಟಿ ಬ್ಯೂಟಿ ವಿದ್ಯಾ ಬಾಲನ್ ಹೀರೋಯಿನ್ ಅನ್ನೋ ಸುದ್ದಿಗಳು ಹರಿದಾಡಿತ್ತು. ಆದ್ರೆ ಸದ್ಯ ಕತ್ರೀನಾ ಕೈಫ್ ಕನ್ನಡಕ್ಕೆ ಉಪ್ಪಿ-2 ಸಿನಿಮಾ ಮೂಲಕ ಎಂಟ್ರಿಕೊಡ್ತಿದ್ದಾರೆ. ಕತ್ರೀನಾ ಅನ್ನೋ ದಂತದ ಬೊಂಬೆ ಕನ್ನಡಕ್ಕೆ ಬಂದ್ರೆ ಅವರನ್ನ ಬಾಲಿವುಡ್ ಸಿನಿಮಾದಲ್ಲಿ ನೋಡಿದ್ದ ಚಿತ್ರಪ್ರೇಮಿಗಳು ಹುಚ್ಚೆದ್ದು ಕುಣಿಯೋದು ಗ್ಯಾರಂಟಿ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಇತ್ತೀಚೆಗೆ ಉಪ್ಪಿ-2 ಸಿನಿಮಾದ ಆಡಿಯೋ ರೆಕಾರ್ಡಿಂಗ್ ಕೂಡ ನಡೆದಿದ್ದು ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಚಿಕ್ನಿ ಚಮೇಲಿ ಉಪ್ಪಿ ಜೊತೆ ಹಾಟ್ ಹಾಟ್ ರೋಮ್ಯಾನ್ಸ್ ಮಾಡೋದನ್ನ ನೋಡೋ ಕಾಲ ದೂರವಿಲ್ಲ. ಇಂಟರೆಸ್ಟಿಂಗ್ ಸುದ್ದಿ ಅಂತ ಓದಿದ್ದೀರಾ ನೆನಪಿರಲಿ ಇವತ್ತು ಮೂರ್ಖರ ದಿನ!!!

English summary
Bollywood beauty Katrina Kaif all set to debut Sandalwood. The top actress may act in Real Star Upendra's upcoming film 'Uppi 2', which will be directed and produced by the actor, will be launched amidst much hoopla at the Kanteerava studio. Uppi 2 is a Sequel of 1999 Blockbuster Upendra.
Please Wait while comments are loading...