For Quick Alerts
  ALLOW NOTIFICATIONS  
  For Daily Alerts

  ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ನಮಿತಾ!

  |

  ಬಹುಭಾಷಾ ನಟಿ ನಮಿತಾ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ದಿನದಂದು ಶುಭ ಸಮಾರ ಕೊಟ್ಟಿದ್ದಾರೆ. ಈ ಹಿಂದೆ ನಮಿತಾ ತಾನು ತಾಯಿಯಾಗುತ್ತಿರುವ ಬಗ್ಗೆ ವಿಚಾರವನ್ನು ಹಂಚಿಕೊಂಡಿದ್ದರು. ಹಲವು ವರ್ಷಗಳ ಹಿಂದೆ ವಿವಾದದ ಮೂಲಕ ಸದ್ದು ಮಾಡುತ್ತಿದ್ದ ನಮಿತಾ ಈಗ ಸಿಹಿ ಸುದ್ದಿ ಮೂಲಕ ಸದ್ದು ಮಾಡುತ್ತಿದ್ದಾರೆ.

  ನಮಿತಾ ಮದುವೆ ಬಳಿಕ ಸುಖ ಸಂಸಾರ ನಡೆಸುತ್ತಿದ್ದಾರೆ. ವೀರೇಂದ್ರ ಚೌಧರಿಯನ್ನು ಮದುವೆಯಾದ ಬಳಿಕ, ನಮಿತಾ ತಮ್ಮ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು, ಸಿಹಿ ಸುದ್ದಿಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಮದುವೆ ಬಳಿಕ ತಾಯಿಯಾಗುವ ಬಗ್ಗೆ ಸುದ್ದಿ ಹಂಚಿಕೊಂಡಿದ್ದರು.

  'ನೀಲಕಂಠ', 'ಹೂ' ಸಿನಿಮಾದ ನಟಿ ನಮಿತಾ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೊಶೂಟ್ ವೈರಲ್!'ನೀಲಕಂಠ', 'ಹೂ' ಸಿನಿಮಾದ ನಟಿ ನಮಿತಾ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೊಶೂಟ್ ವೈರಲ್!

  ಈಗ ನಮಿತಾ ಮುದ್ದು ಮಕ್ಕಳಿಗೆ ತಾಯಿಯಾಗಿದ್ದಾರೆ. ಈ ವಿಚಾರವನ್ನೂ ಕೂಡ ಅವರು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿವೆ.

  ನಮಿತಾಗೆ ಅವಳಿ ಗಂಡು ಮಕ್ಕಳು!

  ನಮಿತಾಗೆ ಅವಳಿ ಗಂಡು ಮಕ್ಕಳು!

  ಬಹುಭಾಷಾ ನಟಿ ನಮಿತಾ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ಕೊಟ್ಟಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ನಟಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಟಿ ಶುಕ್ರವಾರ ಆಗಸ್ಟ್ 19 ರಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಜೊತೆ ಪತಿ, ಪತ್ನಿ ಇಬ್ಬರೂ ಕೂಡ ಮಕ್ಕಳನ್ನೂ ಹಿಡಿದುಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ನಮಿತಾ ವಿಶೇಷ ಪೋಸ್ಟ್!

  ನಮಿತಾ ವಿಶೇಷ ಪೋಸ್ಟ್!

  ಮಕ್ಕಳ ಜೊತೆಗಿನ ಫೋಟೊ ಹಂಚಿಕೊಂಡ ನಟಿ ನಮಿತಾ, "ಹರೇ ಕೃಷ್ಣ... ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ನಾವು ಅವಳಿ ಗಂಡುಮಕ್ಕಳನ್ನು ಸ್ವಾಗತಿಸಿದ್ದೇವೆ. ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಯಾವಾಗಲೂ ಅವರೊಂದಿಗೆ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ನಿಜವಾಗಿಯೂ ರೇಲಾ ಆಸ್ಪತ್ರೆ ಅವರಿಗೆ ಕೃತಜ್ಞರಾಗಿರುತ್ತೇವೆ. ಅವರ ಅತ್ಯುತ್ತಮ ಆರೋಗ್ಯ ರಕ್ಷಣೆ ಮತ್ತು ಸೇವೆಗಳಿಗಾಗಿ ಧನ್ಯವಾದಗಳು. ನನ್ನ ಗರ್ಭಾವಸ್ಥೆಯ ಪ್ರಯಾಣ ಮತ್ತು ನನ್ನ ಮಕ್ಕಳನ್ನು ಈ ಜಗತ್ತಿಗೆ ಕರೆತರಲು ಮಾರ್ಗದರ್ಶನ ನೀಡಿದ ಡಾ. ಭುವನೇಶ್ವರಿ ಮತ್ತು ಅವರ ತಂಡಕ್ಕೆ ನಾನು ನಿಜವಾಗಿಯೂ ಋಣಿಯಾಗಿದ್ದೇನೆ ಎಂದಿದ್ದಾರೆ." ಎಂದು ನಮಿತಾ ಬರೆದುಕೊಂಡಿದ್ದಾರೆ.

  ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ನಮಿತಾ!

  ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ನಮಿತಾ!

  ನಮಿತಾ ಈ ಹಿಂದೆ ಎರಡು ಬಾರಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕಪ್ಪು ಸೀರೆಯುಟ್ಟು ನಮಿತಾ ಫೋಟೋಶೂಟ್ ಮಾಡಿಸಿದ್ದರು. ಜೊತೆಗೆ ನಮಿತಾಗೆ ಅದ್ದೂರಿಯಾದ ಸೀಮಂತದ ಶಾಸ್ತ್ರ ಕೂಡ ನೆರವೇರಿತ್ತು. ಕುಟುಂಬಸ್ಥರು ಹಾಗೂ ಆಪ್ತರು ಹಾಗೂ ಚಿತ್ರರಂಗದ ಗಣ್ಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆ ಫೋಟೊಗಳನ್ನು ನಮಿತಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದರು.

  2017ರಲ್ಲಿ ಮದುವೆ ಆದ ನಮಿತಾ, ವೀರೇಂದ್ರ!

  2017ರಲ್ಲಿ ಮದುವೆ ಆದ ನಮಿತಾ, ವೀರೇಂದ್ರ!

  2017ರಲ್ಲಿ ನಟ-ಉದ್ಯಮಿ ವೀರೇಂದ್ರ ಚೌಧರಿ ಅವ್ರನ್ನು ನಮಿತಾ ವಿವಾಹವಾದರು. ಈ ಜೋಡಿಯು ತಿರುಪತಿಯಲ್ಲಿರುವ ಇಸ್ಕಾನ್ ಲೋಟಸ್ ಟೆಂಪಲ್‌ನಲ್ಲಿ ತಮ್ಮ ಕುಟುಂಬ, ಸ್ನೇಹಿತರು ಮತ್ತು ಚಲನಚಿತ್ರ ಉದ್ಯಮದ ಗಣ್ಯರ ಸಮ್ಮುಖದಲ್ಲಿ ವಿವಾಹವಾದರು. ನಮಿತಾ ತಮ್ಮ ಹುಟ್ಟುಹಬ್ಬದಂದು ನಮಿತಾ ತಾವು ಗರ್ಭಿಣಿಯಾಗಿರುವುದನ್ನು ಘೋಷಿಸಿದರು.

  Recommended Video

  Vijay Deverakonda | ಕ್ರೇಜ್ ನೋಡಿ ವಿಜಯ್ ಅನನ್ಯ ಫಿಧಾ | Ananya Panday *Press Meet
  English summary
  Actress Namitha Blessed With Twin Baby Boys, Photos Viral, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X