»   » ಹಾಟ್ ನಮಿತಾಳ ಹಾಟ್ ಫೋಟೋ ರಿಲೀಸ್ಡ್

ಹಾಟ್ ನಮಿತಾಳ ಹಾಟ್ ಫೋಟೋ ರಿಲೀಸ್ಡ್

Posted By:
Subscribe to Filmibeat Kannada

ಸೌತ್ ಇಂಡಿಯನ್ ಹಾಟ್ ನಟಿ ನಮಿತಾ, ಮತ್ತೆ ಸುದ್ದಿಯಲ್ಲಿದ್ದಾರೆ. ಅವರೇನೂ ಹೊಸ ಚಿತ್ರದಲ್ಲಿ ನಟಿಸುತ್ತಿಲ್ಲ. ಬದಲಿಗೆ ಇಂಟರ್ ನೆಟ್ ಮೂಲಕ ಲೈಮ್ ಲೈಟ್ ಗೆ ಬಂದಿದ್ದಾರೆ. ಅಂದರೆ, ನಮಿತಾ ಹೊಸ 'ಫೋಟೋ ಶೂಟ್' ಮಾಡಿ ತಮ್ಮ ಹಾಟ್ ಫೋಟೋಗಳನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರೆ. ಅದು ಬಿಸಿಕೇಕ್ ಖಾಲಿಯಾದಂತೆ ಸುದ್ದಿ, ಸದ್ದು ಮಾಡುತ್ತಿದೆ. ನಮಿತಾಗೆ ಇತ್ತೀಚಿಗೆ ಸಿನಿಮಾಗಳ ಆಫರ್ ಗಳು ಕಡಿಮೆಯಾದರೂ ಅವರ ಫ್ಯಾನ್ ಗಳ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ.

ಇತ್ತೀಚಿಗೆ ತಮಿಳು ಚಿತ್ರಗಳಲ್ಲಿ ನಮಿತಾಗೆ ಅವಕಾಶಗಳು ವಿರಳವಾಗುತ್ತಿವೆ. ಆದರೆ ಅದಕ್ಕೆ ಬೇಸರಿಸಿಕೊಂಡು ಮನೆಯಲ್ಲಿ ಕುಳಿತಿಲ್ಲ ನಮಿತಾ. ಬದಲಿಗೆ ಸೌತ್ ಇಂಡಿಯಾದ ಉಳಿದ ಭಾಷೆಗಳಲ್ಲಿ ಬಿಜಿಯಾಗಿದ್ದಾರೆ. ಕೈಯಲ್ಲಿ ಯಾವುದೇ ಭಾಷೆಯ ಸಿನಿಮಾಗಳು ಇರದಿದ್ದರೂ ಸದಾ ಸುದ್ದಿಯಲ್ಲಿರುವುದು ಹೇಗೆಂಬುದು ಈ ನಮಿತಾಗೆ ಚೆನ್ನಾಗಿ ಗೊತ್ತು. ಅದಕ್ಕೆ ಈಗ ಇಂಟರ್ನೆಟ್ ಮೊರೆ ಹೋಗಿ ಸುದ್ದಿಯಾಗಿದ್ದಾರೆ ಹಾಟ್ ಬೆಡಗಿ ನಮಿತಾ.

ಅಚ್ಚರಿಯೆಂದರೆ, ನಮಿತಾ ಸಿನಿಮಾಗಳಿಗಿಂತ ಅವರ ಫೋಟೋಗಳಿಗೇ ಹೆಚ್ಚು ಬೇಡಿಕೆಯಿದೆ. ಅವರ ಸಿನಿಮಾಗಳನ್ನು ಜನರು ನೋಡುವುದಕ್ಕಿಂತ ಹೆಚ್ಚು ಅವರ ಚಿತ್ರಗಳನ್ನು ಅಂರ್ತಜಾಲ ಹಾಗೂ ಸಾಮಾಜಿಕ ತಾಣಗಳಲ್ಲಿ ಹುಡುಕುವವರೇ ಹೆಚ್ಚು. ಈ ವಿಷಯ ಸ್ವತಃ ನಮಿತಾರ ಗಮನಕ್ಕೂ ಬಂದಿದೆ. ಹೀಗಾಗಿಯೇ ಅವರು ತಮ್ಮ ಫೋಟೋಗಳನ್ನು ಅಂತರ್ಜಾಲದಲ್ಲಿ ಬಿಟ್ಟು ತಮ್ಮ ಫ್ಯಾನ್ ಗಳಿಗೆ ನಿರಾಸೆಯಾಗದಂತೆ ನೋಡಿಕೊಂಡಿದ್ದಾರೆ. ಈಗ ನಮಿತಾ ಫ್ಯಾನ್ ಗಳು ಭಾರಿ ಖುಷಿಯಾಗಿದ್ದಾರಂತೆ.

ಸೌತ್ ಇಂಡಿಯಾದ ನಟಿ ನಮಿತಾ ಅವರನ್ನು ಗೂಗಲ್ ಸರ್ಜ್ ನಲ್ಲಿ ಹುಡುಕುವವರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದೆ ಎಂಬುದು ಗಮನದಲ್ಲಿರಲಿ. ಅವರ ಸಿನಿಮಾಗಳು ಇರಲಿ, ಇಲ್ಲದಿರಲಿ ನಿತ್ಯವೂ ನಮಿತಾರ ಫೋಟೋಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಲೇ ಇರುತ್ತಾರಂತೆ ಜನರು. ಹೀಗಿರುವಾಗ ಹಾಟ್ ಚಿತ್ರಗಳನ್ನು ಸ್ವತಃ ನಮಿತಾರೇ ಬಿಟ್ಟಮೇಲೆ ಕೇಳಬೇಕೆ? ಈಗ ನಮಿತಾ ಚಿತ್ರಗಳ ಇಂಟರ್ನೆಟ್ ವ್ಯವಹಾರ ಭಾರಿ ಜೋರಾಗಿದೆಯಂತೆ. (ಏಜೆನ್ಸೀಸ್)

English summary
Famous South Indian Actress Namitha is back with a photo-shoot. We can see her latest pictures of photo-shoot in the Internet. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada