»   » ಪ್ರಿಯಾಮಣಿಯ ಪ್ರಿಯತಮ ಇವನೇನಾ, ಇವತ್ತಿನ ಗಾಸಿಪ್

ಪ್ರಿಯಾಮಣಿಯ ಪ್ರಿಯತಮ ಇವನೇನಾ, ಇವತ್ತಿನ ಗಾಸಿಪ್

By: ಉದಯರವಿ
Subscribe to Filmibeat Kannada

ಗಾಸಿಪ್ ಸುದ್ದಿಗಳಿಂದ ಗಾವುದ ದೂರ ಉಳಿದಿರುವ ತಾರೆ ಎಂದರೆ ಪ್ರಿಯಾಮಣಿ. ರಾಷ್ಟ್ರಪ್ರಶಸ್ತಿ ಪುರಸ್ಕೃತ ತಾರೆ ಇದೀಗ ಮದುವೆಗೆ ಸಿದ್ಧವಾಗುತ್ತಿದ್ದಾರೆ. ಇದು ಗಾಸಿಪ್ ಅಲ್ಲ ನಿಜ. ಸ್ವತಃ ಅವರೇ ತಮ್ಮ ಮದುವೆ ಸುದ್ದಿಯನ್ನು ತಿಳಿಸಿದ್ದು ಮುಂದಿನ ವರ್ಷ ಸಪ್ತಪದಿ ಎಂದಿದ್ದಾರೆ.

ಅಂದಹಾಗೆ ಇದು ಲವ್ ಕಮ್ ಅರೇಂಜ್ಡ್ ಮದುವೆ. ಪ್ರಿಯಾಮಣಿಯನ್ನು ಕೈಹಿಡಿಯುತ್ತಿರುವ ಆ ಲಕ್ಕಿ ಬಾಯ್ ಯಾರು ಎಂಬುದನ್ನು ಮಾತ್ರ ಪ್ರಿಯಾಮಣಿ ತಿಳಿಸಿಲ್ಲ. ಸಮಯ ಬಂದಾಗ ಅವರನ್ನು ಎಲ್ಲರಿಗೂ ಪರಿಚಯಿಸುತ್ತೇನೆ ಎಂದಿದ್ದಾರೆ. [ಯಾರ ಜೊತೆಗೆ ನಟಿ ಪ್ರಿಯಾಮಣಿ ಕಣ್ಣಾಮುಚ್ಚಾಲೆ?]


ತಾನು ಕೈಹಿಡಿಯಲಿರುವ ಹುಡುಗ ಬಣ್ಣದ ಜಗತ್ತಿಗೆ ಸಂಬಂಧಿಸಿದವನಲ್ಲ ಎಂದಿದ್ದು, ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ. ಈ ಜೋಡಿ ಕೆಲವು ದಿನಗಳಿಂದ ಸಾಕಷ್ಟು ಹತ್ತಿರವಾಗಿದ್ದು, ಇಬ್ಬರೂ ಮದುವೆಗೆ ತಯಾರಿ ನಡೆಸಿದ್ದಾರೆ. ಇಷ್ಟಕ್ಕೂ ಯಾರು ಆ ಹುಡುಗ?


ಎಲ್ಲರ ಕಣ್ಣು ಪಕ್ಕದಲ್ಲಿದ್ದ ಹುಡುಗನ ಮೇಲೆ

ಇತ್ತೀಚೆಗೆ ಪ್ರಿಯಾಮಣಿ ತಮ್ಮ ಒಂದಷ್ಟು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದರು. ಎಲ್ಲರ ಕಣ್ಣು ಬಿದ್ದದ್ದು ಮಾತ್ರ ಪ್ರಿಯಾಮಣಿ ಪಕ್ಕದಲ್ಲಿದ್ದ ಹುಡುಗನ ಮೇಲೆ. ಯಾರಿವನು ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ.


ಇವ ಅವನಲ್ಲ ಎಂದ ಪ್ರಿಯಾಮಣಿ

ಆದರೆ ಅವನಲ್ಲ ಅವನಲ್ಲ ಎನ್ನುತ್ತಿದ್ದಾರೆ ಪ್ರಿಯಾಮಣಿ. ಇನ್ಯಾರು ಎಂದರೆ ಸಮಯ ಬರಲಿ ಆಗ ಹೇಳುತ್ತೇನೆ ಎನ್ನುತ್ತಾರೆ. ತನ್ನ ಪ್ರಿಯಕರನ ಬಗ್ಗೆ ಪ್ರಿಯಾಮಣಿ ಬಾಯ್ಬಿಡದಿದ್ದರೂ ಅವರ ಆತ್ಮೀಯರಂತೂ ಸ್ವಲ್ಪ ಸುಳಿವು ನೀಡಿದ್ದಾರೆ.


ಮುಸ್ತಾಫಾ ರಾಜ್ ಕೈಹಿಡಿಯಲಿದ್ದಾರಾ ಪ್ರಿಯಾ?

ಪ್ರಿಯಾಮಣಿ ಡೇಟಿಂಗ್ ನಡೆಸುತ್ತಿರುವ ಹುಡುಗನ ಹೆಸರು ಮುಸ್ತಾಫಾ ರಾಜ್ ಎನ್ನಲಾಗಿದೆ. ಉದ್ಯಮಿಯಾಗಿರುವ ಈತನನ್ನು ಶೀಘ್ರದಲ್ಲೇ ವರಿಸಲಿದ್ದಾರಂತೆ ಪ್ರಿಯಾಮಣಿ.


ಮದುವೆಗೆ ಸಿದ್ಧವಾಗುತ್ತಿರುವ ಜೋಡಿ

ಮೂಲಗಳ ಪ್ರಕಾರ ಇವರಿಬ್ಬರೂ ಬಹಳ ಸಮಯದಿಂದ ಲವ್ ಮಾಡುತ್ತಿದ್ದಾರಂತೆ. ಲವ್ ಎಂಬ ಎರಡಕ್ಷರದ ಸಂಬಂಧ ಇದೀಗ ಮದುವೆ ಎಂಬ ಮೂರಕ್ಷರದ ಬಂಧನವಾಗಲಿದೆ.


ಎರಡೂ ಕಡೆಯಿಂದ ಗ್ರೀನ್ ಸಿಗ್ನಲ್

ಇನ್ನು ಇವರಿಬ್ಬರ ಪ್ರೇಮಾಯಣ ಮನೆಯವರಿಗೆ ಗೊತ್ತಿದ್ದು ಎರಡೂ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷವೇ ಗಟ್ಟಿಮೇಳ.


ಮುಸ್ತಾಫಾ ಅವರು ಬಿಜಿನೆಸ್ ಮ್ಯಾನ್

ಮುಸ್ತಾಫಾ ಅವರು ಬಿಜಿನೆಸ್ ಮ್ಯಾನ್. ಚಿತ್ರರಂಗಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲವಂತೆ. ಸಾಕಷ್ಟು ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.


ಗಾಸಿಪ್ ತಳ್ಳಿಹಾಕಿದ್ದ ಪ್ರಿಯಾಮಣಿ

ಮಲಯಾಳಂನ ರಿಯಾಲಿಟಿ ಶೋ ನಿರೂಪಕ ಗೋವಿಂದ್ ಪದ್ಮಸೂರ್ಯ ಎಂಬುವವರೊಂದಿಗೆ ಪ್ರಿಯಾಮಣಿ ಜೂಟಾಟಾ ಆಡುತ್ತಿದ್ದಾರೆ ಎಂಬ ಗಾಸಿಪ್ ಹರಿದಾಗ ಅದನ್ನು ನಿರಾಕರಿಸಿದ್ದರು.


ಸಂಥಿಂಗ್ ಸಂಥಿಂಗ್ ಸ್ಟೋರಿ

ಇವರಿಬ್ಬರೂ ಎಲ್ಲೆಂದರಲ್ಲಿ ಜೊತೆಯಾಗಿ ಕಾಣಿಸುವುದು, ತಿರುಗಾಡುವುದನ್ನು ನೋಡಿದವರು ಸಂಥಿಂಗ್ ಸಂಥಿಂಗ್ ಎಂದು ಹಾಡಿಕೊಳ್ಳುತ್ತಿದ್ದರಂತೆ. ಈ ಹಾಡು ಪ್ರಿಯಾಮಣಿ ಅವರ ಕಿವಿಗೂ ಬಿದ್ದು ಕೂಡಲೇ ನಥಿಂಗ್ ನಥಿಂಗ್ ಎಂದು ಹಾಡಿದ್ದಾರೆ.


ನನ್ನ ಬೆಸ್ಟ್ ಫ್ರೆಂಡ್ ಅಷ್ಟೇ

ಈ ರಿಯಾಲಿಟಿ ಶೋನಲ್ಲಿ ನಾನೂ ಭಾಗಿಯಾದ ಕಾರಣ ಅವರೊಂದಿಗೆ ಓಡಾಡಿದ್ದೇನೆ ಅಷ್ಟೇ. ನನ್ನ ಬೆಸ್ಟ್ ಫ್ರೆಂಡ್. ಉಳಿದಂತೆ ನೀವು ತಿಳಿದಂತೆ ನಮ್ಮಿಬ್ಬರ ನಡುವೆ ಆ ರೀತಿಯ ಯಾವುದೇ ಕಥೆ ನಡೆದಿಲ್ಲ ಎಂದಿದ್ದರು.


English summary
Actress Priyamani close friend of hers revealed that the actress has been dating Mustafa Raj, a business magnet, for quite some time and she is going to get married to him soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada