For Quick Alerts
  ALLOW NOTIFICATIONS  
  For Daily Alerts

  ಚಿತ್ರ ನಿರ್ಮಾಪಕರಿಗೆ ಭಾರವಾದ ರಾಗಿಣಿ ದ್ವಿವೇದಿ

  By Rajendra
  |

  ತಮ್ಮ ಸಂಭಾವನೆಯಲ್ಲಿ ರಮ್ಯಾರನ್ನೂ ಹಿಂದಿಕ್ಕಿದ್ದ ನಟಿ ರಾಗಿಣಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚಿತ್ರವೊಂದಕ್ಕೆ ಗೋಲ್ಡನ್ ಗರ್ಲ್ ರಮ್ಯಾ ಸರಿಸುಮಾರು ರು.30 ಲಕ್ಷ ಪಡೆಯುತ್ತಾರೆ (ಈ ಗುಟ್ಟು ನಮ್ಮ ನಿಮ್ಮಲ್ಲೇ ಇರಲಿ) ಎಂಬ ಮಾತು ಚಾಲ್ತಿಯಲ್ಲಿದೆ.

  ಸ್ಯಾಂಡಲ್‌ವುಡ್‌ನಲ್ಲಿ ರಮ್ಯಾ ಸಂಭಾವನೆಯೇ ಅತಿ ಹೆಚ್ಚು ಎನ್ನಲಾಗಿತ್ತು. ಆದರೆ "ತುಪ್ಪಾ ಬೇಕಾ ತುಪ್ಪಾ" ಎಂದು ತಮ್ಮ ಸೊಂಟವನ್ನು ಬಳುಕಿಸಿದ ರಾಗಿಣಿ ಸಂಭಾವನೆ ರು.30 ಲಕ್ಷದ ಬೌಂಡರಿ ಲೈನ್ ದಾಟಿತ್ತು. ಆದರೂ ಆಕೆಗೆ ಸಮಾಧಾನ ಇದ್ದಂತೆ ಇಲ್ಲ.

  ಸದ್ಯಕ್ಕೆ 'ರಾಗಿಣಿ ಐಪಿಎಸ್' ಚಿತ್ರದಲ್ಲಿ ಅಭಿನಯಿಸುತ್ತಿರುವ ಈಕೆಗೆ ಸಾಲುಸಾಲು ಚಿತ್ರಗಳ ಆಫರ್ ಬರುತ್ತಿದೆ. ಆದರೆ ಯಾವ ಚಿತ್ರಕ್ಕೂ ಸಹಿ ಹಾಕುತ್ತಿಲ್ಲ. ಕಾರಣ ಏನಿರಬಹುದು ಎಂದು ಗಾಂಧಿನಗರದ ಕಡೆ ಕಿವಿಗೊಟ್ಟರೆ, ರು.33 ಲಕ್ಷ ಸಂಭಾವನೆಯಲ್ಲಿ ಯಾರಿಗೂ ಡಿಸ್ಕೌಂಟ್ ಕೊಡುತ್ತಿಲ್ಲವಂತೆ ಎಂಬ ಸುದ್ದಿಗೆ ಕೇಳಿಸುತ್ತದೆ.

  ಅಷ್ಟೊಂದು ದುಡ್ಡು ಬಿಚ್ಚಲು ಆಗದೆ ನಿರ್ಮಾಪಕರು ಸೂಟ್‌ಕೇಸ್ ಸಮೇತ ಜಾಗ ಖಾಲಿ ಮಾಡುತ್ತಿದ್ದಾರಂತೆ. ಆದಿತ್ಯ ಜೊತೆ ರಾಗಿಣಿ ಅಭಿನಯದ 'ವಿಲನ್' ಚಿತ್ರ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಶಿರಾಜ್ ಕುಮಾರ್ ಜೊತೆಗಿನ 'ಶಿವ' ಚಿತ್ರ ಜೂನ್‌ಗೆ ಬಿಡುಗಡೆಯಾಗಲಿದೆ. ಸದ್ಯಕ್ಕೆ 'ರಾಗಿಣಿ ಐಪಿಎಸ್' ಬಿಟ್ಟರೆ ಇನ್ಯಾವ ಚಿತ್ರಕ್ಕೂ ರಾಗಿಣಿ ಕೈಯಲ್ಲಿಲ್ಲ. (ಏಜೆನ್ಸೀಸ್)

  English summary
  Actress Ragini Dwivedi becomes more expensive for Kannada filmmakers. Sources says that, she has demands more than Rs. 30 lakhs for a film these days, and she turns down the offer, if the producer is not ready to pay the amount.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X