»   » ಗರ್ಭಿಣಿಯಾಗಲು ಹೊರಟಿದ್ದಾರೆ ರಾಗಿಣಿ ದ್ವಿವೇದಿ

ಗರ್ಭಿಣಿಯಾಗಲು ಹೊರಟಿದ್ದಾರೆ ರಾಗಿಣಿ ದ್ವಿವೇದಿ

Posted By:
Subscribe to Filmibeat Kannada

ಈ ರೀತಿಯ ಸುದ್ದಿಯೊಂದು ಗಾಂಧಿನಗರದಿಂದ ಶಿವಾಜಿನಗರತನಕ ಹಬ್ಬಿದೆ. ಸದ್ಯಕ್ಕೆ ರಾಗಿಣಿ ಐಪಿಎಸ್ ಚಿತ್ರದಲ್ಲಿ ನಟಿಸುತ್ತಿರುವ ರಾಗಿಣಿ ಗರ್ಭಿಣಿಯಾಗಲಿದ್ದಾರಂತೆ ಎಂಬುದೇ ಆ ಸುದ್ದಿ. ವಿದ್ಯಾ ಬಾಲನ್ ಪೋಷಿಸಿದ್ದ ಕಹಾನಿ ಚಿತ್ರ ಕನ್ನಡಕ್ಕೆ ರೀಮೇಕ್ ಆಗಲಿದೆ ಎನ್ನುತ್ತವೆ ಮೂಲಗಳು.

ಕಹಾನಿ ಕನ್ನಡ ರೀಮೇಕ್‌ಗೆ ಆಫರ್ ಬಂದಿರುವುದೇನೋ ನಿಜ. ಆದರೆ ಮೊದಲು ನನಗೆ ನಂಬಲಿಕ್ಕೇ ಆಗಲಿಲ್ಲ. ಬಳಿಕ ರೀಮೇಕ್ ರೈಟ್ಸ್ ಬಗ್ಗೆ ಭರವಸೆ ನೀಡಿದ್ದಾರೆ. ಬಹುಶಃ ನಾನು ಈ ಚಿತ್ರದಲ್ಲಿ ಅಭಿನಯಿಸಬಹುದು ಎಂದು ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ ರಾಗಿಣಿ.

ಕಹಾನಿ ಚಿತ್ರದ ಕಥಾವಸ್ತು ಹೀಗಿದೆ. ಉದ್ಯೋಗ ನಿಮಿತ್ತ ನಗರ ಪ್ರದೇಶಕ್ಕೆ ಹೋದ ತನ್ನ ಗಂಡ ಹಿಂತಿರುಗುವುದಿಲ್ಲ. ಆತನನ್ನು ಹುಡುಕಿಕೊಂಡು ಗರ್ಭಿಣಿಯಾದ ಚಿತ್ರದ ನಾಯಕಿ ಹೊರಡುತ್ತಾಳೆ. ಅಲ್ಲಿ ಆಕೆಗೆ ಎದುರಗುವ ಪರಿಸ್ಥಿತಿಗಳ ಕಥಾ ಹಂದರವೇ ಈ ಚಿತ್ರ. ಕನ್ನಡದ ಕಹಾನಿ ಬಗೆಗಿನ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. (ಏಜೆನ್ಸೀಸ್)

English summary
The buzz is that Kannada actress Ragini Dwivedi has been approached for the Kannada remake of Vidya Balan's hit flick, Kahaani. Vidya Balan has shut the mouths of critics with her stunning performance as a pregnant lady in the recent blockbuster ‘Kahaani’.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada