»   » ನೀರ್ ದೋಸೆ ಹಾಕೋಕೆ ರಮ್ಯಾ ಬರೋದು ಡೌಟು

ನೀರ್ ದೋಸೆ ಹಾಕೋಕೆ ರಮ್ಯಾ ಬರೋದು ಡೌಟು

By: ಜೀವನರಸಿಕ
Subscribe to Filmibeat Kannada

ನಿಮಗೆ ಗೊತ್ತಿದೆಯೋ ಇಲ್ವೋ ನಮಗೆ ಗೊತ್ತಿಲ್ಲ. 2013ರಲ್ಲಿ ಅತ್ಯಂತ ಹೆಚ್ಚು ಬಾರಿ ಕಾಂಟ್ರರ್ಸಿಗಳಿಗೆ ಸುದ್ದಿಯಾದ ಚಿತ್ರ ಅಂದ್ರೆ ಅದು 'ನೀರ್ ದೋಸೆ'. ವಿವಾದಗಳನ್ನೇ ಹೊದ್ದು ಮಲಗಿದ ಚಿತ್ರ ಅದು. ಆದರೆ ಯಾಕೋ ಚಿತ್ರ ವಿವಾದಗಳನ್ನ ಮಾತ್ರ ಅಲ್ಲ. ನಿಜವಾಗಿಯೂ ಕಂಬಳಿಯನ್ನ ಹೊದ್ದು ಮಲಗುತ್ತೆ ಅನ್ನಿಸ್ತಾ ಇದೆ.

ಒಂದು ಕಡೆ ರಮ್ಯಾ ಮೇಡಂ ನಾನು ಸಿನಿಮಾದ ಶೂಟಿಂಗ್ ಮುಗಿಸಿಕೊಡ್ತೀನಿ ಅಂದಿದ್ದಾರೆ. ಆದರೆ ನಿರ್ದೇಶಕ ವಿಜಯ ಪ್ರಕಾಶ್ ಮಾತ್ರ ವಾಣಿಜ್ಯ ಮಂಡಳಿಯನ್ನ ನಾಲ್ಕು ಬಾರಿ ಅಲೆದು ಚಪ್ಪಲಿ ಸವೆಸಿಕೊಂಡಿದ್ದಾರೆ. ವಿವಾದ ಬಗೆಹರಿಸಿಕೊಳ್ಳೋಕೆ ವಾಣಿಜ್ಯ ಮಂಡಳಿಗೇನೇ ಮೆನೇಜರ್ ಕಳಿಸಿದ್ದ ರಮ್ಯಾ ಮೇಡಂ ಇನ್ನು ಶೂಟಿಂಗ್ ಗೆ ಬರ್ತಾರಾ ಅಂತ ನಿರ್ದೇಶಕರು ಸುಮ್ಮನಾಗಿದ್ದಾರೆ ಅಂದುಕೊಂಡ್ರೆ ನಿಮ್ಮ ತಪ್ಪು. [ಲಕ್ಕಿ ಸ್ಟಾರ್ ರಮ್ಯಾ ಕೊನೆಯ ಸಿನಿಮಾ ಆರ್ಯನ್?]

Actress Ramya

ಸದ್ಯ ನಿರ್ಮಾಪಕ, ನಿರ್ದೇಶಕರು ರಮ್ಯಾ ಅವಾಜ್ ಗೆ ಹೆದರಿಕೊಂಡು ಸುಮ್ಮನಾಗಿದ್ದಾರೆ. ಇನ್ನೊಂದ್ ಸಾರಿ ಟಿ ವಿ ಚಾನೆಲ್ ಅಥವಾ ಪೇಪರ್ ಗಳ ಮುಂದೆ ಸಮಸ್ಯೇನ ತಗೊಂಡು ಹೋದರೆ ಶೂಟಿಂಗ್ ಮಾಡಿಕೊಡಲ್ಲ. ಆಮೇಲೆ ಚನ್ನಾಗಿರಲ್ಲ ಅಂದಿದ್ದಾರೆ ರಮ್ಯಾ ಎನ್ನುತ್ತಿದೆ ಗಾಂಧಿನಗರ.

ಎಂಪಿ ಮೇಡಂ ಡೈಲಾಗ್ ಗೆ ಡೈಲಾಗ್ ಬರೆಯೋ ನಿರ್ದೇಶಕರು ಹಾಗೂ ಬಂಡವಾಳ ಹೂಡಿರುವ ನಿರ್ಮಾಪಕರು ಗರಬಡಿದಂತಾಗಿದ್ದಾರೆ ಎಂಬುದು ಗಾಂಧಿನಗರದ ಗಲ್ಲಿಗಳ ಗುಲ್ಲು. ಈಗ ಸುಮ್ಮನಾದ್ರೆ ರಮ್ಯಾ ಮೇಡಂ ಇನ್ನೂ ನಾಲ್ಕೈದು ತಿಂಗಳು ಸಿಗೋದು ಡೌಟು ಅಂತಿದೆ ನಮ್ಮ ಗಾಂಧಿನಗರ. ಲೋಕಸಭಾ ಚುನಾವಣೆ ಬಂತು ರಮ್ಯಾ ಮತ್ತೆ ಲೋಕಸಭೆಗೆ ನಿಲ್ಲೋದು ಗ್ಯಾರಂಟಿ. ಎಲ್ಲ ಸರಿ ಆದರೆ ಈ 'ನೀರ್ ದೋಸೆ' ಕಥೆ ಏನು?

English summary
Kannada movie Neer Dose controversy solved or not?, which features Sandalwood queen Ramya and Jaggesh in the lead roles, made a huge buzz in Kannada film industry in its making stage. If sources are to be believed the controversy is still alive.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada