Don't Miss!
- Sports
BGT 2023: ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್ನೆಸ್ ಪರೀಕ್ಷೆ: ಪಾಸಾದರೆ ಮಾತ್ರ ಟೆಸ್ಟ್ ತಂಡದಲ್ಲಿ ಸ್ಥಾನ
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿವಿನ್ ಪೌಲಿ ಅಭಿನಯದ ಚಿತ್ರದಲ್ಲಿ ಡಿ ಗ್ಲಾಮ್ ಲುಕ್‌ನಲ್ಲಿ ಶಾನ್ವಿ ಶ್ರೀವಾಸ್ತವ?
ನಟಿ ಶಾನ್ವಿ ಶ್ರೀವಾಸ್ತವ. ಕನ್ನಡದವರೂ ಆಗಿರದೇ ಇದ್ದರೂ ಕನ್ನಡವನ್ನು ಕಲಿತು ಕನ್ನಡ ಚಿತ್ರರಂಗದಲ್ಲೆ ಹೆಚ್ಚೆಚ್ಚು ಗುರುತಿಸಿಕೊಂಡಿರುವ ನಟಿ. 2012 ರಲ್ಲಿ ಪದವಿ ಪಡೆಯುವಾಗ ತೆಲುಗಿನ ಲವ್ಲಿ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದರು. ಈ ಚಿತ್ರದ ನಟನೆಗಾಗಿ ಮೆಚ್ಚುಗೆ ಪಡೆದ ಶಾನ್ವಿ ನಂತರ ಅಡ್ಡಾ' ,ರೌಡಿ' ಚಿತ್ರಗಳಲ್ಲಿ ನಟಿಸಿದರು.ತದನಂತರದಲ್ಲಿ ಕನ್ನಡದಲ್ಲಿ 2014 ರಲ್ಲಿ ತೆರೆಕಂಡ 'ಚಂದ್ರಲೇಖಾ' ಚಿತ್ರದಿಂದ ಪದಾರ್ಪಣೆ ಮಾಡಿದ ಶಾನ್ವಿ ನಂತರ 'ಮಾಸ್ಟರ್ ಪೀಸ್','ಭಲೇ ಜೋಡಿ', 'ಸುಂದರಾಂಗ ಜಾಣ','ಸಾಹೇಬ','ತಾರಕ್', 'ಮಫ್ತಿ' ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದಾರೆ. ಸದ್ಯ ಈಗ ಬ್ಯಾಂಗ್ ಅನ್ನುವ ಕನ್ನಡ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಮಲಯಾಳಂನ 'ಮಹಾವೀರ್ಯರ್' ಸಿನಿಮಾದಲ್ಲಿ ಶಾನ್ವಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಈ ಮೂಲಕ ಮೊದಲ ಬಾರಿಗೆ ಶಾನ್ವಿ ಮಾಲಿವುಡ್ ಇಂಡಸ್ಟ್ರಿ ಕಡೆ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಶಾನ್ವಿ ಅವರ ಮೊದಲ ಮಲಯಾಳಂ ಸಿನಿಮಾ ಸ್ಟಾರ್ ನಟನ ಚಿತ್ರವೂ ಹೌದು. ತನ್ನ ನಟನೆ, ಮ್ಯಾನರಿಸಂ, ಮೂಲಕವೇ ಹೆಚ್ಚು ಅಭಿಮಾನಿ ವರ್ಗವನ್ನು ಸಂಪಾದಿಸಿರುವ ನಿವಿನ್ ಪೌಲಿ ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಬಿಡುಗಡೆಗೆ
ರೆಡಿಯಾಯ್ತು
ಶಾನ್ವಿ
ಶ್ರೀವತ್ಸವ್
'ಕಸ್ತೂರಿ
ಮಹಲ್':
ರಿಲೀಸ್
ಯಾವಾಗ?
ಜನಪ್ರಿಯ ಮಲಯಾಳಂ ನಟ ನಿವಿನ್ ಪೌಲಿ ನಾಯಕನಾಗಿ ನಟಿಸಲಿರುವ ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಮಲಯಾಳಂ ಸಿನಿಮಾ 'ಮಹಾವೀರ್ಯರ್'ಗೆ ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಫರ್ಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ನಿವಿನ್ ಪೌಲಿ ಜತೆಗೆ ಆಸಿಫ್ ಅಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಮಹಾವೀರ್ಯರ್' ಸಿನಿಮಾ ಸಂಪೂರ್ಣ ಫ್ಯಾಂಟಸಿ ಕಥೆಯನ್ನು ಹೊಂದಿದೆ. ಶಾನ್ವಿ ಈ ಸಿನಿಮಾದಲ್ಲಿ ನಿವಿನ್ ಪೌಲಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ಬೇಕಿರುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.
ಶಾನ್ವಿ ಪಾತ್ರದ ಬಗ್ಗೆ ಈಗ ಸಾಕಷ್ಟು ಮಾತುಗಳು ಕೇಳಿ ಬರುತ್ತಿದ್ದು ಡಿ ಗ್ಲಾಮ್ ಲುಕ್‌ನಲ್ಲಿ ಇದೇ ಮೊದಲ ಬಾರಿಗೆ ಶಾನ್ವಿ ಅಭಿನಯಿಸಿದ್ದಾರೆ ಎಂದು ಕೇಳಿಬರುತ್ತಿದೆ. ಇದೊಂದು ಫ್ಯಾಂಟಸಿ ಕಥೆ ಆಧಾರಿತ ಚಿತ್ರ ಆಗಿರೋದರಿಂದ ಕಥೆಗೆ ತಕ್ಕಂತೆ ಶಾನ್ವಿ ಡಿ ಗ್ಲಾಮ್ ರೋಲ್ ನಿರ್ವಹಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ಶಾನ್ವಿ ಅವರ ಈ ಸಿನಿಮಾವನ್ನು ನೋಡಲು ಕಾತುರರಾಗಿದ್ದಾರೆ.
ಗ್ಯಾಂಗ್
ಲೀಡರ್
ಆದ್ರು
ನಟಿ
ಶಾನ್ವಿ
ಶ್ರೀವಾಸ್ತವ್!
ಟೈಮ್ ಟ್ರಾವೆಲಿಂಗ್ ಸೇರಿ ಕಾನೂನು, ಕಟ್ಟಳೆಗಳ ಬಗ್ಗೆಯೂ ಚಿತ್ರ ಬೆಳಕು ಚೆಲ್ಲಲಿದೆ. ನಾಯಕ ನಟ ನಿವಿನ್ ಪೌಲಿ ಅವರೇ ಸಿನಿಮಾಗೆ ಹಣ ಹೂಡುತ್ತಿರುವುದು ವಿಶೇಷ. ಈ ಹಿಂದೆ ನಿವಿನ್ ಅವರ '1983' ಮತ್ತು 'ಆಕ್ಷನ್ ಹೀರೋ ಬಿಜು' ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಬ್ರಿದ್ ಶೈನ್, 'ಮಹಾವೀರ್ಯರ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಚಿತ್ರೀಕರಣ ಕೂಡ ಈಗಾಗಲೇ ಆರಂಭವಾಗಿದ್ದು, ಇದೇ ವರ್ಷ ಸಿನಿಮಾ ಕೂಡ ತೆರೆಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

'ಮಹಾವೀರ್ಯರ್' ಸಿನಿಮಾ ಹೊರತುಪಡಿಸಿ ನಟಿ ಶಾನ್ವಿ ಶ್ರೀವಾಸ್ತವ ಅವರು 'ಬ್ಯಾಂಗ್' ಟೀಮ್ ಜತೆಗೆ ಸೇರಿ ಅಂಡರ್ ವರ್ಲ್ಡ್ ಆಳಲು ಸಜ್ಜಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮಾಸ್ ಹೀರೋಯಿನ್ ಪಾತ್ರವನ್ನು ಈ ಸಿನಿಮಾದ ಮೂಲಕ ಮಾಡುತ್ತಿದ್ದಾರೆ . ಶ್ರೀಗಣೇಶ್ ಪರಶುರಾಮ್ ನಿರ್ದೇಶನದ 'ಬ್ಯಾಂಗ್' ಸಿನಿಮಾದಲ್ಲಿ ಅವರು ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಗಾಯಕ ರಘು ದೀಕ್ಷಿತ್ ಜೊತೆಗೆ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಇದರ ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿದೆ. ಈ ಸಿನಿಮಾ ಕೂಡ ರಿಲೀಸ್‌ಗೆ ಸಜ್ಜಾಗಿದೆ. ಹೀಗೆ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶಾನ್ವಿ ಈಗ ಮಲಯಾಳಂ ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.