»   » ಎಲ್ಲಾ ಓಕೆ 'ಜಾಗ್ವಾರ್' ನಲ್ಲಿ ಶ್ರುತಿ ಹಾಸನ್ ಯಾಕೆ.?

ಎಲ್ಲಾ ಓಕೆ 'ಜಾಗ್ವಾರ್' ನಲ್ಲಿ ಶ್ರುತಿ ಹಾಸನ್ ಯಾಕೆ.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಹಾಲಿವುಡ್ ರೇಂಜ್ ಗೆ ತಯಾರಾಗುತ್ತಿರುವ 'ಜಾಗ್ವಾರ್' ಚಿತ್ರ ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ಕೊಡುತ್ತ ಭಾರಿ ಸುದ್ದಿಯಲ್ಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿರುವ 'ಜಾಗ್ವಾರ್' ಚಿತ್ರದಲ್ಲಿ ಕುಮಾರಸ್ವಾಮಿ ಅವರ ಸುಪುತ್ರ ನಿಖಿಲ್ ಕುಮಾರ್ ಅವರು ನಾಯಕನಾಗಿ ಮಿಂಚಿದ್ದಾರೆ.

ಚೆನ್ನಾಂಬಿಕಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ, ಅನಿತಾ ಕುಮಾರಸ್ವಾಮಿ ಬಂಡವಾಳ ಹೂಡಿರುವ, 'ಜಾಗ್ವಾರ್' ಚಿತ್ರದಿಂದ ನಿನ್ನೆ ತಾನೆ ಒಂದು ಖಾಸ್ ಖಬರ್ ಹೊರಬಿದ್ದಿತ್ತು.['ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!]


ಈ ಚಿತ್ರದ ಆಡಿಯೋ ಹಕ್ಕು, ಕಡಿಮೆ ಮೊತ್ತಕ್ಕಲ್ಲ, ಬರೋಬ್ಬರಿ 1.08 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಸೇಲ್ ಆಗಿ, ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.


ಕನ್ನಡ ಚಿತ್ರರಂಗ ಮತ್ತು ಟಾಲಿವುಡ್ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಘಟಾನುಘಟಿಗಳು 'ಜಾಗ್ವಾರ್' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ಚಿತ್ರದ ಮತ್ತೊಂದು ವಿಶೇಷ. ಜೊತೆಗೆ ಇತ್ತೀಚೆಗಷ್ಟೇ ನಟಿ ರಮ್ಯಕೃಷ್ಣ ಅವರು ಕೂಡ 'ಜಾಗ್ವಾರ್' ತಂಡವನ್ನು ಸೇರಿಕೊಂಡಿದ್ದಾರೆ.


ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟೀಸರ್ ಕೂಡ ಬಹಳ ಗಮನ ಸೆಳೆಯುತ್ತಿದೆ. ಇದೀಗ 'ಜಾಗ್ವಾರ್' ಚಿತ್ರದಿಂದ ಮತ್ತೊಂದು ಬ್ಲಾಸ್ಟಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನೆಂಬುದನ್ನು ತಿಳಿಯಲು, ಮುಂದೆ ಓದಿ....


ಏನದು ಬ್ಲಾಸ್ಟಿಂಗ್ ಸುದ್ದಿ..

'ಜಾಗ್ವಾರ್' ಚಿತ್ರದಲ್ಲಿನ ಐಟಂ ಸಾಂಗ್ ಗೆ ಸೊಂಟ ಬಳುಕಿಸಲು, ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಬರುತ್ತಿದ್ದಾರೆ ಎಂದು ಭಾರಿ ಗುಲ್ಲೆದ್ದಿದೆ. ಯಾರು ಆ ಫೇಮಸ್ ನಟಿ, ನೋಡಿ ಮುಂದಿನ ಸ್ಲೈಡ್ ನಲ್ಲಿ.....['ಜಾಗ್ವಾರ್' ಅಡ್ಡದಿಂದ ಬಂದಿರುವ ತಾಜಾ ಫೋಟೋ ಇದು.!]


ನಟಿ ಶ್ರುತಿ ಹಾಸನ್.?

ತಮಿಳು-ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಶ್ರುತಿ ಹಾಸನ್ ಅವರು, 'ಜಾಗ್ವಾರ್' ಚಿತ್ರದಲ್ಲಿನ ಐಟಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಶ್ರುತಿ ಹಾಸನ್ ಅವರನ್ನು ಚಿತ್ರತಂಡ ಸಂಪರ್ಕ ಮಾಡಿದ್ದು, ಅವರ ಕಡೆಯಿಂದ ಬರಬೇಕಾದ ಗ್ರೀನ್ ಸಿಗ್ನಲ್ ಗೆ ನಿರ್ಮಾಪಕರು ಕಾಯುತ್ತಿದ್ದಾರೆ.


ಕತ್ರಿನಾ ಬರಲ್ವಾ.?

ಬಾಲಿವುಡ್ ನ ಬಾರ್ಬಿಡಾಲ್ ಕತ್ರಿನಾ ಕೈಫ್ ಅವರು ಐಟಂ ಸಾಂಗ್ ಗೆ ಹೆಜ್ಜೆ ಹಾಕ್ತಾರೆ ಅಂತ ಈ ಮೊದಲು ಸುದ್ದಿಯಾಗಿತ್ತು. ಆದರೆ ಇದೀಗ ಅವರ ಜಾಗಕ್ಕೆ ನಟಿ ಶ್ರುತಿ ಹಾಸನ್ ಅವರು ಸಾಧ್ಯತೆ ಇದೆ ಎಂದು 'ಜಾಗ್ವಾರ್' ಚಿತ್ರದ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ.


ತೆಲುಗಿನಲ್ಲಿ ಐಟಂ ಸಾಂಗ್ ಗೆ ಕುಣಿದಿದ್ದರು

ಅಂದಹಾಗೆ ನಟಿ ಶ್ರುತಿ ಹಾಸನ್ ಅವರು ಐಟಂ ಸಾಂಗ್ ನಲ್ಲಿ ಕುಣಿಯುತ್ತಿರೋದು ಇದೇ ಮೊದಲೇನಲ್ಲಾ. ಈ ಮೊದಲು ಮಹೇಶ್ ಬಾಬು ಅವರ 'ಆಗಡು', ರಾಮ್ ಚರಣ್ ತೇಜಾ ಅವರ 'ಎವಡು', ಹಿಂದಿ ಚಿತ್ರ 'ತಿವಾರ್' ನಲ್ಲಿ ಅರ್ಜುನ್ ಕಪೂರ್ ಮತ್ತಿತ್ತರರ ಜೊತೆ ನಟಿ ಶ್ರುತಿ ಹಾಸನ್ ಅವರು ಸಖತ್ ಆಗಿ ಸೊಂಟ ಬಳುಕಿಸಿದ್ದರು.


ಬಂದರೂ ಬರಬಹುದು

ಇನ್ನು ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಮೂಡಿಬರುತ್ತಿರೋದ್ರಿಂದ, ಶ್ರುತಿ ಹಾಸನ್ ಅವರು ಈ ಚಿತ್ರಕ್ಕೆ ಸೊಂಟ ಕುಣಿಸಿದರೂ ಅಚ್ಚರಿ ಇಲ್ಲ. ಮಾತ್ರವಲ್ಲದೇ ಈ ಚಿತ್ರದಲ್ಲಿ ಬಹುತೇಕ ಎಲ್ಲರೂ ಟಾಲಿವುಡ್ ನಟ-ನಟಿಯರು ಜೊತೆಗೆ ತಂತ್ರಜ್ಞರು ಕೆಲಸ ಮಾಡಿದ್ದಾರೆ.


ನಟಿ ರಮ್ಯಕೃಷ್ಣ

'ಬಾಹುಬಲಿ'ಯಲ್ಲಿ ಕಮಾಲ್ ಮಾಡಿದ್ದ ನಟಿ ರಮ್ಯಕೃಷ್ಣ ಅವರು ಕೂಡ ಈ ಚಿತ್ರದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ. ಈಗಾಗಲೇ ರಮ್ಯಕೃಷ್ಣ ಅವರ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಖಡಕ್ ಪಾತ್ರದಲ್ಲಿ ಮಿಂಚಿದ್ದಾರೆ.[ಖಳನಟಿಯಾಗಿ 'ಜಾಗ್ವಾರ್' ಏರಿದ ನಟಿ ರಮ್ಯಕೃಷ್ಣ.?]


ಮುಂದಿನ ತಿಂಗಳು ಆಡಿಯೋ

ಸೆಪ್ಟೆಂಬರ್ 2 ರಂದು 'ಜಾಗ್ವಾರ್' ಚಿತ್ರದ ಆಡಿಯೋ ರಿಲೀಸ್ ಆಗುತ್ತಿದೆ. ಮಂಡ್ಯದಲ್ಲಿ ಆಡಿಯೋ ಬಿಡುಗಡೆ ಮಾಡಲು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ಲ್ಯಾನ್ ಮಾಡಿದ್ದಾರೆ.[ಸೆಪ್ಟೆಂಬರ್ ನಲ್ಲಿ ಶುರುವಾಗಲಿದೆ 'ಜಾಗ್ವಾರ್' ಹಾಡುಗಳ ಹಬ್ಬ]


ತಾರಾಗಣ

ಚಿತ್ರದಲ್ಲಿ ನಟ ನಿಖಿಲ್ ಕುಮಾರ್ ಅವರಿಗೆ ಮಲ್ಲುಕುಟ್ಟಿ ದೀಪ್ತಿ ಸತಿ ಅವರು ಸಾಥ್ ನೀಡಿದ್ದು, ಟಾಲಿವುಡ್ ಕಾಮಿಡಿ ಕಿಂಗ್ ಬ್ರಹ್ಮಾನಂದಂ, ನಟ ಜಗಪತಿ ಬಾಬು, ಸೌರವ್ ಲೋಕೇಶ್, ಸಂಪತ್ ರಾಜ್, ಸಾಧು ಕೋಕಿಲಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


English summary
The south Indian film Actress Shruti Hassan has been approached for the upcoming kannada movie 'Jaguar' for a Item number. After Mahesh Babu starrer 'Aagadu', Shruti Hassan Again Shaking legs for Kannada Movie 'Jaguar'. Kannada Actor Nikhil Kumar, Actress Deepthi Sati in the lead role. The movie is directed by A.Mahadev.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada