»   » ನಟಿ ಸೋನು ಛಾಭ್ರಿಯಾ, ಏನು ಗಾಬ್ರಿಯಾ?

ನಟಿ ಸೋನು ಛಾಭ್ರಿಯಾ, ಏನು ಗಾಬ್ರಿಯಾ?

By: ಜೀವನರಸಿಕ
Subscribe to Filmibeat Kannada

ನಟಿ ಸೋನು ಛಾಬ್ರಿಯಾ ಗಾಬರಿಯಾಗಿ ಬಾಂಬೆಗೆ ವಾಪಾಸಾಗಿದ್ದಾರೆ. ಅಂದಹಾಗೆ ದುನಿಯಾ ವಿಜಯ್ ಅಭಿನಯದ ಕೋಬ್ರಾ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದ ಈ ಬ್ಯೂಟಿ ಭರ್ಜರಿ ಫೋಟೋಶೂಟ್ ಕೂಡ ಮಾಡಿದ್ರು. ಎಚ್ ವಾಸು ನಿರ್ದೇಶನದ 'ಕೋಬ್ರಾ' ಸಿನಿಮಾದಿಂದ ಸೋನು ಛಾಬ್ರಿಯಾ ಔಟ್ ಆಗಿದ್ದಾರೆ.

ಯಾಕಮ್ಮಾ ರನೌಟ್ ಆಗಿದ್ದು ಅಂದ್ರೆ, ಅದನ್ನೆಲ್ಲಾ ಹೇಳೋಕಾಗಲ್ಲ ಅಂದಿದ್ದಾರೆ. ಆದ್ರೆ ಚಿತ್ರತಂಡದವ್ರನ್ನ ಕೇಳಿದ್ರೆ ಅದು ರನ್ಔಟ್ ಅಲ್ಲ ಅವ್ರು ಈಗಾಗ್ಲೇ ಕಳಪೆ ತಂಡದಲ್ಲಿ ಆಡಿದ್ದು ನಮ್ಮ ತಂಡದ ಸ್ಟ್ಯಾಂಡರ್ಡ್ ಗೆ ತಕ್ಕ ಪ್ಲೇಯರ್ ಅಲ್ಲ ಅಂತ ಹೇಳಿದೆ ಚಿತ್ರತಂಡ. [ನಟ ದುನಿಯಾ ವಿಜಯ್ ಉಚಿತ ಕಾಲ್ ಶೀಟ್]

Actress Sonu Chabria

ಹೌದು. ಸಿನಿಮಾನೂ ಒಂಥರಾ ಕ್ರಿಕೆಟ್ ಇದ್ದ ಹಾಗೆ. ಇಲ್ಲಿ ಯಾರು ಯಾವಾಗ ಔಟಾಗ್ತೋರೋ ಹೇಳೋಕೆ ಬರಲ್ಲ. ನಿರ್ಮಾಪಕ ಅನ್ನೋ ಅಂಪೈರ್ ಒಬ್ಬರನ್ನ ಬಿಟ್ಟು. ಇಲ್ಲಿ ಹೀರೋ ಅನ್ನೋ ಕ್ಯಾಪ್ಟನ್ ಓಕೆ ಮಾಡದಿದ್ರೆ ಒಳ್ಳೆಯ ಪ್ಲೇಯರ್ ಆಗಿರೋ ನಟಿ ಕೂಡ ಕ್ಯಾಮೆರಾ ಅನ್ನೋ ಪಿಚ್ ನಲ್ಲಿ ಕಾಣಿಸಿಕೊಳ್ಳೋಕೆ ಸಾಧ್ಯ ಆಗೋದಿಲ್ಲ.

ನಿರ್ದೇಶಕ ಅನ್ನೋ ಲೆಗ್ ಅಂಪೈರ್ ಕೈ ಎತ್ತಿದ್ರೆ ಯಾವ ಬಾಲ್ ಬೇಕಾದ್ರೂ ನೋ ಬಾಲ್ ಆಗುತ್ತೆ. ಈ ಸಿನಿಮಾ ಅನ್ನೋ ಕ್ರಿಕೇಟ್ ನಲ್ಲಿ ಥರ್ಡ್ ಅಂಪೈರ್ ನೀವೇ. ನೀವು ಅಂದುಕೊಂಡಿದ್ದೇ ಇಲ್ಲಿ ಅಂತಿಮ ಸತ್ಯ.

ಇಷ್ಟೆಲ್ಲಾ ಹೇಳಿದ್ದು ಅರ್ಥವಾಗದ ಸಿನಿಮಾ ಅನ್ನೋ ಗ್ಯಾಂಬ್ಲಿಂಗ್ ನ ಬಗ್ಗೆ, ಸಿನಿಮಾ ಅನ್ನೋದು ಗ್ಯಾಂಬ್ಲಿಂಗ್ ಅಂತ ನಾವ್ ಹೇಳ್ತಿಲ್ಲ. ಇದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಉಪ್ಪಿಕೊಂಡಿರೋ ಮಾತು.

ಅದೆಲ್ಲಾ ಓಕೆ ವಿಷ್ಯಕ್ಕೆ ಬರೋಣ. ಸೋನು ಛಾಬ್ರಿಯಾ ಅನ್ನೋ ಬೆಣ್ಣೆ ಬೆಡಗಿ ಹೊರನಡೆದಿದ್ದು ಯಾಕೆ ಅಂದ್ರೆ ಚಿತ್ರತಂಡ ಹೇಳೋದು, ಆ ನಟಿ ಹಿಂದೆ ಬಾರ್ ಡಾನ್ಸರ್ ಆಗಿದ್ರು ಅದಕ್ಕೇ ಬೇಡ ಅಂತ. ಆಯ್ಕೆ ಮಾಡಿಕೊಳ್ಳೋವಾಗ ಇದೆಲ್ಲ ಗೊತ್ತಿರ್ಲಿಲ್ವಾ.

English summary
Actress Sonu Chabria was thrown out of the Kannada film Cobra, in which she was to star alongside Duniya Vijay. The reason? "The producer was not aware that she used to be a bar dancer before she took up acting".
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada