»   » ನಟಿ ಸೋನು ಗೌಡ ದಾಂಪತ್ಯದಲ್ಲಿ ಬಿರುಕು?

ನಟಿ ಸೋನು ಗೌಡ ದಾಂಪತ್ಯದಲ್ಲಿ ಬಿರುಕು?

By: ಉದಯರವಿ
Subscribe to Filmibeat Kannada
Actress Sonu Gowda
ದುನಿಯಾ ಸೂರಿ ನಿರ್ದೇಶನದ 'ಇಂತಿ ನಿನ್ನ ಪ್ರೀತಿಯ' ಚಿತ್ರದ ಮೂಲಕ ಬೆಳ್ಳಿಪರದೆಗೆ ಪರಿಚಯವಾದ ತಾರೆ ಸೋನು ಗೌಡ. ಈಗ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. 2010ರಲ್ಲಿ ಅವರ ಮನೋಜ್ ಕುಮಾರ್ ಕೈಹಿಡಿದರು ಸೋನು.

'ಇಂತಿ ನಿನ್ನ ಪ್ರೀತಿಯ' ಚಿತ್ರದ ಬಳಿಕ ಅವರ ಮದುವೆ ತರಾತುರಿಯಲ್ಲಿ ನಡೆದುಹೋಗಿತ್ತು. ಅವರ ಮದುವೆಗೆ ಕೇವಲ ಬಂಧು ಮಿತ್ರರು ಹಾಗೂ ಆಪ್ತಮಿತ್ರರಷ್ಟೇ ಸಾಕ್ಷಿಯಾಗಿದ್ದರು. ತಮಗೆ ಮದುವೆಯಾಗಿದೆ ಎಂದು ಗೊತ್ತಾದರೆ ಸಿನಿಮಾ ವೃತ್ತಿ ಬದುಕಿನಲ್ಲಿ ಅವಕಾಶಗಳು ಬರಲ್ಲ ಎಂದು ಅವರು ಭಾವಿಸಿದಂತಿತ್ತು.

ಹಾಗಾಗಿ ಸೋನು ಗೌಡ ಅವರ ಮದುವೆ ಸದ್ದಿಲ್ಲದಂತೆ ನಡೆಯಿತು ಎಂಬ ಮಾತುಗಳು ಆಗ ಕೇಳಿಬಂದಿದ್ದವು. ಒಂದು ವರ್ಷ ಕಳೆದ ಬಳಿಕ ಮದುವೆಗೂ ವೃತ್ತಿಬದುಕಿಗೂ ಸಂಬಂಧವಿಲ್ಲ ಎಂಬ ಸತ್ಯ ಆಕೆಗೂ ಹೊಳೆದಿತ್ತು. ಆದರೆ ಅಷ್ಟರಲ್ಲಾಗಲೇ ವೃತ್ತಿಜೀವನದ ಗ್ರಾಫು ತಲೆಕೆಳಗಾಗಿತ್ತು.

ಈಗ ಅವರ ದಾಂಪತ್ಯದಲ್ಲಿ ಬಿರುಕು ಮಾಡಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಸೋನು ಗೌಡ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಲು ಇಷ್ಟ ಇಲ್ಲ ಎಂದಿದ್ದಾರೆ.

ನನ್ನ ವೃತ್ತಿಜೀವನ ನನಗೆ ಸಂತೃಪ್ತಿ ನೀಡಿದೆ. ಈಗ ಒಳ್ಳೋಳ್ಳೆ ಆಫರ್ಸ್ ಬರುತ್ತಿದೆ. ಇದೇ ವರ್ಷ ಒಳ್ಳೆಯ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ನನ್ನ ವೈವಾಹಿಕ ಬದುಕಿನ ಬಗ್ಗೆ ಮಾತನಾಡಲು ನನಗಿಷ್ಟವಿಲ್ಲ ಎಂದು ಅವರು 'ಟೈಂಸ್ ಆಫ್ ಇಂಡಿಯಾ' ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

English summary
Times of India reports that, actress Sonu Gowda is in no mood to deny or confirm the rumours of an impending divorce that have been dogging her for some time now. She'd rather talk about her film projects that she is busy with after being away from Sandalwood for almost two years.
Please Wait while comments are loading...