»   » 'ದಿ ವಿಲನ್' ಜೊತೆ ಶೃತಿ ಹರಿಹರನ್‌ ಗೆ ಏನು ಕೆಲಸ?

'ದಿ ವಿಲನ್' ಜೊತೆ ಶೃತಿ ಹರಿಹರನ್‌ ಗೆ ಏನು ಕೆಲಸ?

Posted By:
Subscribe to Filmibeat Kannada

'ಜೋಗಿ' ನಿರ್ದೇಶಕ ಪ್ರೇಮ್ ತಮ್ಮ 'ದಿ ವಿಲನ್' ಚಿತ್ರದ ಸುತ್ತಾ ಇರುವ ಕುತೂಹಲಗಳನ್ನು ಹೆಚ್ಚು ಮಾಡುತ್ತಿದ್ದಾರೆ ವಿನಃ, ಇನ್ನೂ ಸಹ ಯಾರು, ಯಾವ್ಯಾವ ಪಾತ್ರದಲ್ಲಿ ನಟಿಸಲಿದ್ದಾರೆ, ನಾಯಕಿಯರು ಯಾರು ಎಂಬ ಯಾವುದೇ ಕ್ಲಾರಿಟಿ ಮಾತ್ರ ಕೊಡುತ್ತಿಲ್ಲಾ.. ಆದ್ರೆ ಚಿತ್ರಕ್ಕೆ ಸ್ಯಾಂಡಲ್ ವುಡ್ ನ ನಟಿ ಶೃತಿ ಹರಿಹರನ್ ಸೇರ್ಪಡೆ ಆಗಿರುವುದು ಖಚಿತವಾಗಿದೆ.[ಸುದೀಪ್-ಶಿವಣ್ಣನ 'ದಿ ವಿಲನ್'ಗೆ ಬ್ರಿಟಿಷ್ ದೇಶದ ನಾಯಕಿ!]

ಹೌದು, 'ಬ್ಯೂಟಿಫುಲ್ ಮನಸ್ಸುಗಳು' ಸಿನಿಮಾ ಗೆ ಬಂದ ಉತ್ತಮ ಪ್ರಶಂಸೆಗಳನ್ನು ಫೀಲ್‌ ಮಾಡುತ್ತ ಖುಷಿಯಲ್ಲಿದ್ದ, ಶೃತಿ ಹರಿಹರನ್‌ ಗೆ ಈಗ ಇನ್ನೊಂದು ಸಂತೋಷದ ವಿಷಯ 'ದಿ ವಿಲನ್' ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿರುವುದು. ಈ ಬಿಗ್ ಬಜೆಟ್ ಸಿನಿಮಾ ದಲ್ಲಿ ನಟಿ ಶೃತಿ ಹರಿಹರನ್‌ ಗೆ ಏನು ಕೆಲಸ ಇಲ್ಲಿದೆ ನೋಡಿ.

'ದಿ ವಿಲನ್' ನಲ್ಲಿ ನಟಿ ಶೃತಿ ಹರಿಹರನ್

ಪ್ರೇಮ್ ಆಕ್ಷನ್ ಕಟ್ ನಲ್ಲಿ ಮೂಡಿ ಬರಲಿರುವ 'ದಿ ವಿಲನ್' ಚಿತ್ರಕ್ಕೆ ಈಗ ಹೊಸದಾಗಿ ನಟಿ ಶೃತಿ ಹರಿಹರನ್ ಸೇರ್ಪಡೆಗೊಂಡಿದ್ದಾರೆ. ಚಿತ್ರದಲ್ಲಿ ಪಾತ್ರ ಏನು ಗೊತ್ತಾ? ತಿಳಿಯಲು ಮುಂದೆ ಓದಿ..

'ದಿ ವಿಲನ್' ಚಿತ್ರದಲ್ಲಿ ನಾಯಕಿ ಆಗುತ್ತಾರಾ ಶೃತಿ ಹರಿಹರನ್

ಖಂಡಿತಾ ಇಲ್ಲ. ಅಂದಹಾಗೆ ಶೃತಿ ಹರಿಹರನ್ 'ದಿ ವಿಲನ್' ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಕಾರಣ..

ಈಗಾಗಲೇ 'ದಿ ವಿಲನ್' ಚಿತ್ರಕ್ಕೆ ಬ್ರಿಟಿಷ್ ನಟಿ ಆಮಿ ಜಾಕ್ಸನ್, ಅನುಷ್ಕಾ ಶೆಟ್ಟಿ ಮತ್ತು ತಮ್ಮನ್ನಾ ಭಾಟಿಯಾ ಆಯ್ಕೆ ಆಗಿದ್ದಾರೆ. ಆದರೆ ಇವರಲ್ಲಿ ಫೈನಲ್ ಆಗಿ ನಾಯಕಿಯರ ಪಾತ್ರದಲ್ಲಿ ಯಾರ್ಯಾರು ಅಭಿನಯಿಸುತ್ತಾರೆ ಅನ್ನೋದೆ ಇನ್ನು ಸಂಶಯವಾಗಿ ಕಾಡುತ್ತಿರುವ ಪ್ರಶ್ನೆ.

ಹಾಗಿದ್ರೆ ಶೃತಿ ಹರಿಹರನ್ ಪಾತ್ರ ಏನು?

ಶೃತಿ ಹರಿಹರನ್ 'ದಿ ವಿಲನ್' ಚಿತ್ರದಲ್ಲಿ ಶಿವಣ್ಣನ ಜೊತೆ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಶೃತಿ ಹರಿಹರನ್ 'ತಾವು ಶಿವಣ್ಣನ ಜೊತೆ ನಟಿಸುತ್ತಿರುವುದೇ ಒಂದು ದೊಡ್ಡ ಖುಷಿ' ಎಂದು ಹೇಳಿದ್ದಾರೆ.

ಶಿವಣ್ಣ ಮತ್ತು ಶೃತಿ ಹರಿಹರನ್ ಫೋಟೋ ಶೂಟ್

ಅಂದಹಾಗೆ ಈಗಾಗಲೇ ಶಿವಣ್ಣ ಜೊತೆ ಶೃತಿ ಹರಿಹರನ್ ಇರುವ ಫೋಟೋ ಶೂಟ್ ಮಾಡಿದ್ದು, ಚಿತ್ರತಂಡ ಸದ್ಯದಲ್ಲೇ ಈ ಫೋಟೋಗಳನ್ನು ಬಿಡುಗಡೆ ಮಾಡಲಿದೆಯಂತೆ.

ಟೀಸರ್ ಚಿತ್ರಿಕರಣ ಶುರುವಾಗಿದೆ..

'ದಿ ವಿಲನ್' ಚಿತ್ರತಂಡ ಶಿವರಾಜ್ ಕುಮಾರ್ ಅವರ ಟೀಸರ್ ಚಿತ್ರೀಕರಣ ಮಾಡಿದ್ದು, ಮುಂದಿನ ವಾರ ಸುದೀಪ್ ಅವರ ಟೀಸರ್ ಚಿತ್ರೀಕರಣ ಮಾಡಲಿದೆಯಂತೆ.[ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

'ದಿ ವಿಲನ್' ಗೆ ಅತ್ಯಾಧುನಿಕ ಗ್ರಾಫಿಕ್ ತಂತ್ರಜ್ಞಾನ ಇರಲಿದೆ

ದಿನದಿಂದ ದಿನಕ್ಕೆ ಕುತೂಹಲಗಳನ್ನು ಹೆಚ್ಚಿಸುತ್ತಿರುವ 'ದಿ ವಿಲನ್' ಚಿತ್ರದ ನಿರ್ದೇಶಕ ಪ್ರೇಮ್ ಅವರು, ಈ ಚಿತ್ರಕ್ಕೆ ಅತ್ಯಾಧುನಿಕ ಗ್ರಾಫಿಕ್ ತಂತ್ರಜ್ಞಾನ ಅಳವಡಿಸಲಿದ್ದಾರಂತೆ. ರಜನಿಕಾಂತ್ ಅವರ '2.0' ಚಿತ್ರಕ್ಕೆ ಕೆಲಸ ಮಾಡುತ್ತಿರುವ ಟೆಕ್ನಿಕಲ್ ಟೀಮ್ 'ದಿ ವಿಲನ್'ಗೆ ಕೆಲಸ ಮಾಡಲಿದ್ದಾರಂತೆ.

English summary
Actress Sruthi Hariharan is part of Kannada Movie ''THE VILLAIN''. Shivarajkumar and Sudeep-starrer 'The Villain' getting close to its shooting schedule of February 1st. the film Directed by jogi Prem

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X