»   » ಸುದೀಪ್-ಶಿವಣ್ಣನ 'ದಿ ವಿಲನ್'ಗೆ ಬ್ರಿಟಿಷ್ ದೇಶದ ನಾಯಕಿ!

ಸುದೀಪ್-ಶಿವಣ್ಣನ 'ದಿ ವಿಲನ್'ಗೆ ಬ್ರಿಟಿಷ್ ದೇಶದ ನಾಯಕಿ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಜೋಡಿಯ 'ದಿ ವಿಲನ್' ಚಿತ್ರಕ್ಕೆ ನಾಯಕಿ ಆಯ್ಕೆ ಅಂತಿಮವಾಗಿದೆಯಂತೆ. ಇಷ್ಟು ದಿನ ದಕ್ಷಿಣದ ಸ್ಟಾರ್ ನಟಿಯರು ಈ ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ ಎನ್ನುತ್ತಿದ್ದ ಚಿತ್ರತಂಡ ಈಗ ಬ್ರಟಿಷ್ ನಾಯಕಿಯನ್ನ ಆಯ್ಕೆ ಮಾಡಿದೆಯಂತೆ.[ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

ಮೂಲಗಳ ಪ್ರಕಾರ 'ದಿ ವಿಲನ್' ಚಿತ್ರಕ್ಕೆ ನಾಯಕಿ ಫೈನಲ್ ಆಗಿದ್ದು, ಇದೇ ತಿಂಗಳಿಂದ ಚಿತ್ರೀಕರಣ ಕೂಡ ಶುರು ಮಾಡಲಿದ್ದಾರಂತೆ. ಅಂದ್ಹಾಗೆ, 'ದಿ ವಿಲನ್' ಚಿತ್ರಕ್ಕಾಗಿ ಬರಲಿರುವ ಈ ನಾಯಕಿ, ಈಗಾಗಲೇ ಸೂಪರ್ ಸ್ಟಾರ್ ರಜನಿಕಾಂತ್, ಚಿಯಾನ್ ವಿಕ್ರಮ್, ಅಕ್ಷಯ್ ಕುಮಾರ್, ತಮಿಳು ನಟ ಧನುಷ್ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದ್ದಾರೆ.

'ದಿ ವಿಲನ್'ಗಾಗಿ ಬ್ರಿಟಿಷ್ ನಾಯಕಿ!

ಸಿ.ಆರ್ ಮನೋಹರ್ ನಿರ್ಮಾಣ ಹಾಗೂ ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರಕ್ಕೆ ಹಲವು ನಟಿಯರ ಹೆಸರು ಕೇಳಿಬಂದಿತ್ತು. ಆದ್ರೀಗ, ಬ್ರಿಟಿಷ್ ಮಾಡೆಲ್ ಹಾಗೂ ನಟಿಯಾಗಿರುವ ಆಮಿ ಜಾಕ್ಸನ್ ಕನ್ನಡದ 'ದಿ ವಿಲನ್' ಚಿತ್ರಕ್ಕೆ ಹೀರೋಯಿನ್ ಆಗಲಿದ್ದಾರೆ ಎನ್ನಲಾಗುತ್ತಿದೆ.[ಕಿಚ್ಚ ಸುದೀಪ್ ಇದಕ್ಕೆ ಒಪ್ಪಿದ್ದಾರಾ? ಪ್ರೇಮ್ ಪ್ಲಾನ್ ಠುಸ್ ಪಟಾಕಿ ಆಗ್ಬಿಟ್ರೆ?]

ಸುದೀಪ್-ಶಿವಣ್ಣನ ಜೊತೆ ಆಮಿ ಡ್ಯುಯೆಟ್!

ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ಆಮಿ ಜಾಕ್ಸನ್ ಇಬ್ಬರ ಜೊತೆ ಡ್ಯುಯೆಟ್ ಮಾಡಲಿದ್ದಾರಂತೆ.

ತಮನ್ನಾ-ಅನುಷ್ಕಾ ಶೆಟ್ಟಿ ಬರಬೇಕಿತ್ತು!

ಈ ಮೊದಲು 'ವಿಲನ್' ಚಿತ್ರಕ್ಕಾಗಿ ಸೌತ್ ಸುಂದರಿ ತಮನ್ನಾ ಭಾಟಿಯಾ ಹಾಗೂ ಅನುಷ್ಕಾ ಶೆಟ್ಟಿ ಅವರ ಹೆಸರು ಕೇಳಿಬಂದಿತ್ತು. ನಂತರ ಹಲವು ಬಾಲಿವುಡ್ ನಟಿಯರ ಹೆಸರುಗಳು ಕೂಡ ಓಡಾಡುತ್ತಿದ್ದವು. ಅದ್ಯಾವುದು ಕನ್‌ಫರ್ಮ್ ಆಗಿರಲಿಲ್ಲ. ಆದ್ರೀಗ ಆ ಜಾಗಕ್ಕೆ ಆಮಿ ಜಾಕ್ಸನ್ ಅವರು ಹೆಸರು ಕೇಳಿಬರುತ್ತಿದೆ.[ತಮನ್ನಾ ತಕಧಿಮಿತಕ್ಕೆ, ನಖಶಿಖಾಂತ ಉರಿದ ಪ್ರೇಮ್ ]

ರಜನಿ 2.0 ಚಿತ್ರದಲ್ಲಿ 'ಆಮಿ' ನಾಯಕಿ!

ಆಮಿ ಜಾಕ್ಸನ್ ಸದ್ಯಕ್ಕೆ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ '2.0' ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಆ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆ ಆಮಿ ಜಾಕ್ಸನ್ 'ದಿ ವಿಲನ್' ತಂಡವನ್ನ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಭಾರತೀಯ ಚಿತ್ರಗಳಲ್ಲಿ ಬ್ರಿಟಿಷ್ ನಟಿ!

ಬ್ರಿಟಿಷ್ ರೂಪದರ್ಶಿ ಆಮಿ ಜಾಕ್ಸನ್ ತಮಿಳಿನ 'ಮದ್ರಾಸಪಟ್ಟಿಣಂ' ಚಿತ್ರದ ಮೂಲಕ ವೃತ್ತಿಜೀವನ ಪ್ರಾರಂಭಿಸಿದ್ದರು. ನಂತರ 'ಏಕ್ ದಿವಾನ ಥಾ' ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟ ಆಮಿ, 'ಸಿಂಗ್ ಇಸ್ ಬ್ಲಿಂಗ್', 'ಫ್ರೀಕಿ ಅಲಿ' ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಪ್ರಭುದೇವ್ ನಿರ್ದೇಶನದಲ್ಲಿ ಮೂಡಿಬಂದ ತ್ರಿಭಾಷಾ ಚಿತ್ರ 'ದೇವಿ'ಯಲ್ಲಿ ಆಮಿ ಕೊನೆದಾಗಿ ಕಾಣಿಸಿಕೊಂಡಿದ್ದರು.

ಮಲ್ಲಿಕಾ, ಸನ್ನಿ ಪರಿಚಯ ಮಾಡಿದ್ದು ಪ್ರೇಮ್!

ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಟಿಯರನ್ನು ಪ್ರೇಮ್ ಕರೆತಂದಿರುವುದು ಇದೆ ಮೊದಲೇನಲ್ಲ. ಈ ಹಿಂದೆ 'ಜೋಗಿ' ಚಿತ್ರದಲ್ಲಿ ಮಲ್ಲಿಕಾ ಶರಾವತ್ ಮತ್ತು 'ಡಿಕೆ' ಚಿತ್ರದಲ್ಲಿ ಸನ್ನಿ ಲಿಯೋನ್ ರನ್ನು ಕನ್ನಡದ ತೆರೆಗೆ ಪರಿಚಯಿಸಿದ್ದರು. ಹೀಗಾಗಿ 'ಆಮಿ ಜಾಕ್ಸನ್' ಅವರ ವಿಚಾರದಲ್ಲಿ ಪ್ರೇಮ್ ಅವರನ್ನ ಅಲ್ಲೆಗಳಿಯುವಂತಿಲ್ಲ!

English summary
According to our sources, Amy Jackson has been signed up to play the female lead in Kannada Movie ''THE VILLAIN''. Shivarajkumar and Sudeep-starrer 'The Villain' getting close to its shooting schedule of January 21. the film Directed by jogi Prem

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada