For Quick Alerts
  ALLOW NOTIFICATIONS  
  For Daily Alerts

  ಪೊಗರು ತುಂಬಿದ 'ಟಗರು' ಶಿವಣ್ಣನ ಜೊತೆ ಸುಹಾಸಿನಿ.?

  By Suneetha
  |

  'ಕಡ್ಡಿಪುಡಿ' ಚಿತ್ರದ ನಂತರ ನಿರ್ದೇಶಕ ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಟಗರು-ಮೈಯೆಲ್ಲಾ ಪೊಗರು' ಆಗಸ್ಟ್ 21, ಭಾನುವಾರದಂದು ಸೆಟ್ಟೇರಿದೆ.

  ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆಗಳನ್ನು ಸೇರಿಸಿಕೊಂಡು ಸಿನಿಮಾ ಮಾಡುತ್ತಿರುವ ಸೂರಿ ಅವರು, ನಟ ಧನಂಜಯ್ ಅವರಿಗೆ ವಿಭಿನ್ನ ಲುಕ್ ಕೊಟ್ಟು, ಚಿತ್ರದಲ್ಲಿ ವಿಲನ್ ರೋಲ್ ಮಾಡಲು ಹೇಳಿದ್ದಾರೆ. ಜೊತೆಗೆ ಇವರಿಗೆ ಅಪರೂಪದ ಪ್ರತಿಭೆ ವಸಿಷ್ಠ ಸಿಂಹ ಅವರು ಬೇರೆ ಸಾಥ್ ಕೊಡುತ್ತಿದ್ದಾರೆ.[ಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ]

  ಇದೆಲ್ಲಾ ಓಕೆ, ಇದೀಗ 'ಟಗರು' ಚಿತ್ರದ ಖಾಸ್ ಖಬರ್ ಏನಪ್ಪಾ ಅಂದ್ರೆ, ಮತ್ತೊಬ್ಬ ಅದ್ಭುತ ಪ್ರತಿಭೆ 'ಟಗರು' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇವರು ಬೇರಾರು ಅಲ್ಲ, ಖ್ಯಾತ ಬಹುಭಾಷಾ ನಟಿ ಸುಹಾಸಿನಿ ಅವರು. ಈಗಾಗಲೇ ಮಾತುಕತೆಗಳು ನಡೆಯುತ್ತಿದ್ದು, ಸುಹಾಸಿನಿ ಅವರು ಈ ಚಿತ್ರದಲ್ಲಿ ಯಾವ ಪಾತ್ರ ವಹಿಸಲಿದ್ದಾರೆ, ನೋಡಿ ಸ್ಲೈಡ್ಸ್ ಗಳಲ್ಲಿ.....

  ಮಾತು-ಕತೆ ನಡೆಸಿದ ಸೂರಿ

  ಮಾತು-ಕತೆ ನಡೆಸಿದ ಸೂರಿ

  'ಬಂಧನ', 'ಅಮೃತವರ್ಷಿಣಿ' ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿದ್ದ ಸುಹಾಸಿನಿ ಅವರನ್ನು, 'ಟಗರು' ಚಿತ್ರದಲ್ಲಿ ನಟಿಸಲು ಸೂರಿ ಅವರು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.[ಸುಹಾಸಿನಿ ಉತ್ತಮ ನಟಿಯಲ್ಲವೇ? ಅವರ ಪತಿಗೆ ಅನುಮಾನವಂತೆ]

  ಶಿವಣ್ಣನ ಅಕ್ಕ ಆಗ್ತಾರಾ ಸುಹಾಸಿನಿ.?

  ಶಿವಣ್ಣನ ಅಕ್ಕ ಆಗ್ತಾರಾ ಸುಹಾಸಿನಿ.?

  ಈ ಚಿತ್ರದಲ್ಲಿ ನಟಿ ಸುಹಾಸಿನಿ ಅವರನ್ನು ಶಿವಣ್ಣ ಅವರ ಅಕ್ಕನ ಪಾತ್ರ ವಹಿಸಲು ಸೂರಿ ಅವರು ಕೇಳಿದ್ದು, ಅವರು ಗ್ರೀನ್ ಸಿಗ್ನಲ್ ಕೊಟ್ಟರೆ, ರೀಲ್ ನಲ್ಲಿ ಸುಹಾಸಿನಿ ಅವರು ಶಿವಣ್ಣ ಅವರ ಅಕ್ಕನಾಗಲಿದ್ದಾರೆ. ಸದ್ಯಕ್ಕೆ ಸುಹಾಸಿನಿ ಅವರ ಕಡೆಯಿಂದ ಯಾವುದೇ ರೆಸ್ಪಾನ್ಸ್ ಬಂದಿಲ್ಲ.

  ಸುಹಾಸಿನಿ ಮಾಡಿದರೆ ಚೆಂದ

  ಸುಹಾಸಿನಿ ಮಾಡಿದರೆ ಚೆಂದ

  ಇಡೀ ಚಿತ್ರದಲ್ಲಿ ಸುಹಾಸಿನಿ ಅವರದು ಬಹಳ ಮುಖ್ಯ ಪಾತ್ರವಾಗಿದ್ದು, ಈ ಪಾತ್ರ ಅವರಿಗೆ ಮಾತ್ರ ಸರಿ. ಬೇರಾರು ಈ ಪಾತ್ರವನ್ನು ಅಷ್ಟು ಚೆನ್ನಾಗಿ ನಿಭಾಯಿಸಲಾರರು ಎಂಬುದು ಸೂರಿ ಅವರ ಆಲೋಚನೆ. ಒಟ್ನಲ್ಲಿ ಈ ಪಾತ್ರ ಸುಹಾಸಿನಿ ಅವರಿಗಾಗಿಯೇ ಮಾಡಲಾಗಿದ್ದು, ಅವರೇ ಮಾಡಿದರೆ ಚೆಂದ ಎನ್ನುತ್ತಾರೆ ಸೂರಿ.

  ಗ್ಯಾಂಗ್ ಸ್ಟರ್ ಆದ ಶಿವಣ್ಣ

  ಗ್ಯಾಂಗ್ ಸ್ಟರ್ ಆದ ಶಿವಣ್ಣ

  ನಟ ಶಿವಣ್ಣ ಅವರು ಈ ಚಿತ್ರದಲ್ಲಿ 'ಗ್ಯಾಂಗ್ ಸ್ಟರ್' ಪಾತ್ರ ಮಾಡಿದ್ದು, ಇವರಿಗೆ 'ಟಗರು' ಎಂದು ಅಡ್ಡ ಹೆಸರು ಇಡಲಾಗಿದೆ. 'ಜೋಗಿ' ಚಿತ್ರದ ನಂತರ ಮತ್ತೆ ಸೆಂಚುರಿ ಸ್ಟಾರ್ ಶಿವಣ್ಣ ಅವರು ಲಾಂಗ್ ಹಿಡಿದು ತೆರೆಯ ಮೇಲೆ ವಿಜೃಂಭಿಸಲಿದ್ದಾರೆ.

  ಯಾವಾಗ ಶೂಟಿಂಗ್

  ಯಾವಾಗ ಶೂಟಿಂಗ್

  ಈಗಾಗಲೇ ಮುಹೂರ್ತ ನೆರವೇರಿಸಿಕೊಂಡಿರುವ 'ಟಗರು' ಚಿತ್ರದ ಶೂಟಿಂಗ್ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಚಿತ್ರಕ್ಕೆ ಕೆ.ಪಿ ಶ್ರೀಕಾಂತ್ ಅವರು ಬಂಡವಾಳ ಹೂಡಿದ್ದು, ನಟಿ ಮಾನ್ವಿತಾ ಹರೀಶ್ ಅವರು ಶಿವಣ್ಣ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.

  English summary
  Director Duniya Soori is in talks with veteran actress Suhasini Maniratnam to play an important role in his new film "Tagaru- Maiyella Pogaru". The film Shooting will start only in September. Kannada Actor Shiva Rajkumar, Kannada Actor Dhananjay, Actress Manvitha Harish, Kannada Actor Vasishta N.Simha in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X