»   » ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ

ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಟಾಲಿವುಡ್ ನ ಉದಯೋನ್ಮುಖ ನಟಿ ಶ್ವೇತಾ ಬಸು ಪ್ರಸಾದ್ ಬಂಧನವಾಗಿದೆ. ಹೈದರಾಬಾದಿನ ಬಂಜಾರ ಹಿಲ್ಸ್ ನ ಸ್ಟಾರ್ ಹೋಟೆಲ್ ವೊಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ಶ್ವೇತಾ ಬಸು ಕೂಡಾ ಇದ್ದರು ಅವರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಉದ್ಯಮಿಯೊಬ್ಬರ ಜೊತೆ ನಟಿ ಶ್ವೇತಾ ಬಸು ಪ್ರಸಾದ್ ಕಂಡು ಬಂದಿದ್ದು, ಶ್ವೇತಾ ಅವರು ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ. ಪಿಂಪ್ ಬಾಲು ಎಂಬಾತ ಶ್ವೇತಾ ಅವರಿಗೆ ಉದ್ಯಮಿಯನ್ನು ಪರಿಚಯಿಸಿದ್ದ ಎಂದು ತಿಳಿದು ಬಂದಿದೆ.

ಶ್ವೇತಾ, ಪಿಂಪ್ ಬಾಲು, ಉದ್ಯಮಿ ಸೇರಿದಂತೆ ಅನೇಕರನ್ನು ಹೈದರಾಬಾದಿನ ಬಂಜಾರಾ ಹಿಲ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಈ ಹಿಂದೆ ಕೂಡಾ ವೇಶ್ಯಾವಾಟಿಕೆ ಜಾಲದಲ್ಲಿ ನಟಿ ಶ್ವೇತಾ ಇದ್ದ ಬಗ್ಗೆ ಅನುಮಾನಗಳಿತ್ತು.

ಈ ಬಗ್ಗೆ ಸ್ಥಳೀಯ ಟಿವಿ ಚಾನೆಲ್ ವೊಂದು ಸ್ಟಿಂಗ್ ಆಪರೇಷನ್ ನಡೆಸಿ ಆಕೆಯ ನಿಜ ಬಣ್ಣ ಬಯಲು ಮಾಡಿತ್ತು.ಈ ಹಿಂದೆ ಕೂಡಾ ವೇಶ್ಯಾವಾಟಿಕೆ ಜಾಲದಲ್ಲಿ ನಟಿ ಶ್ವೇತಾ ಇದ್ದ ಬಗ್ಗೆ ಅನುಮಾನಗಳಿತ್ತು. ಈ ಬಗ್ಗೆ ಸ್ಥಳೀಯ ಟಿವಿ ಚಾನೆಲ್ ವೊಂದು ಸ್ಟಿಂಗ್ ಆಪರೇಷನ್ ನಡೆಸಿ ಆಕೆಯ ನಿಜ ಬಣ್ಣ ಬಯಲು ಮಾಡಿತ್ತು.

ಈ ಹಿಂದೆ ದಕ್ಷಿಣದ ಹಿರಿಯ ನಟಿ ಕಿನ್ನೆರಾ, ಯಮುನಾ ಸೇರಿದಂತೆ ಭುವನೇಶ್ವರಿ, ಸಯೀರಾ ಭಾನು, ಜ್ಯೋತಿ,ತೆಲುಗು ಕಿರುತೆರೆ ನಟಿ ಶ್ರಾವಣಿ ಸೇರಿದಂತೆ ಹಲವು ಹತ್ತು ಮಂದಿ ತಾರೆಗಳು ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದಿದ್ದರು. ತಾಜಾ ಬೆಳವಣಿಗೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಶ್ವೇತಾ ಬಸು ಸಿಕ್ಕಿಬಿದ್ದಿದ್ದಾರೆ. ಯಾರೀಕೆ ಶ್ವೇತಾ? ಮುಂದೆ ಓದಿ

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಶ್ವೇತಾ ಬಸು ಪ್ರಸಾದ್

ಹಿಂದಿಯಲ್ಲಿ ಮಕ್ ಡಿ ಚಿತ್ರದ ನಟನೆಗಾಗಿ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ 23 ವರ್ಷ ವಯಸ್ಸಿನ ಶ್ವೇತಾ ಬಸು ಪ್ರಸಾದ್ ಮೂಲತಃ ಜಾರ್ಖಂಡ್ ನ ಜೇಮ್ ಶೇಡ್ ಪುರದವರು.ಬೆಂಗಾಳಿ, ತೆಲುಗು, ತಮಿಳು ಚಿತ್ರಗಳಲ್ಲೂ ನಟನೆ. ಶ್ವೇತಾ ಅವರ ಕುಟುಂಬ ಬಿಹಾರದಿಂದ ಮುಂಬೈಗೆ ತೆರಳಿದೆ. ತಾಯಿ ಶರ್ಮಿಷ್ಠಾ ಬೆಂಗಾಳಿ. ಅಪ್ಪ ಅನುಜ್ ಬಿಹಾರದವರು.

ಬಾಲನಟಿಯಾಗಿ ಗಮನ ಸೆಳೆದ ಶ್ವೇತಾ ಪ್ರಸಾದ್

ಮುಂಬೈನ ಸಾಂತಾ ಕ್ರೂಜ್ ನ ಆರ್ ಎನ್ ಪೊದ್ದಾರ್ ಹೈಸ್ಕೂಲ್ ನಲ್ಲಿ ಓದಿರುವ ಶ್ವೇತಾ ತನ್ನ ತಾಯಿಯ ಹೆಸರು 'ಬಸು' ಬಳಸಿಕೊಂಡು ಸ್ಕ್ರೀನ್ ನೇಮ್ ಶ್ವೇತಾ ಬಸು ಪ್ರಸಾದ್ ಎನಿಸಿಕೊಂಡಿದ್ದರು.

ಬಾಲನಟಿಯಾಗಿ ಗಮನ ಸೆಳೆದ ಶ್ವೇತಾ ಪ್ರಸಾದ್ ಮಕ್ಡಿ, ಇಕ್ಬಾಲ್ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. ಮಕ್ಡಿ ಚಿತ್ರದ ಚುನ್ನಿ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಗಳಿಸಿದ್ದರು. ನಂತರ ಡರ್ನಾ ಜರೂರಿ ಹೈ(ಹಿಂದಿ), ಕೊತ್ತ ಬಂಗಾರು ಲೋಕಂ(ತೆಲುಗು), ಎಕ್ ನದೀರ್ ಗೊಲ್ಪೋ(ಬೆಂಗಾಳಿ) ಚಿತ್ರಗಳಲ್ಲಿ ನಟಿಸಿದ್ದರು.

ಇನ್ನೂ ಕೇಸ್ ಬುಕ್ ಆಗಿಲ್ಲವಂತೆ

ಶ್ವೇತಾ ಬಸು ಸದ್ಯಕ್ಕೆ ಪೊಲೀಸರ ವಶದಲ್ಲಿದ್ದಾರೆ. ಜೊತೆಗೆ ಪಿಂಪ್ ಬಾಲು ಕೂಡಾ ಇದ್ದಾರೆ ಎನ್ನಲಾಗಿದೆ. ಅದರೆ, ಉದ್ಯಮಿಯನ್ನು ಬಳಸಿಕೊಂಡು ಪೊಲೀಸರು ಈಕೆಯನ್ನು ರೆಡ್ ಹ್ಯಾಂಡೆಡ್ ಆಗಿ ಬಂಧಿಸಿದರು ಎನ್ನಲಾಗಿದೆ. ಅದರೆ, ಇನ್ನೂ ಎಫ್ ಐಆರ್ ದಾಖಲಿಸಿದ ಬಗ್ಗೆ ವರದಿ ಬಂದಿಲ್ಲ.

ವಿವಾದಕ್ಕೆ ಕಾರಣವಾಗಿದ್ದ ಟ್ಯಾಟೋ

ತನ್ನ ಬೆನ್ನ ಹಿಂದೆ ಗಣೇಶ ಮೂರ್ತಿಯ ಟ್ಯಾಟೋ ಹಾಕಿಕೊಂಡಿದ್ದ ಶ್ವೇತಾ ಬಸು ವಿವಾದಕ್ಕೆ ಕಾರಣವಾಗಿದ್ದರು. ಅಲ್ಲದೆ, ಈ ಹಿಂದೆ ಕೂಡಾ ಸ್ಥಳೀಯ ಟಿವಿ ನಡೆಸಿದ್ದ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದಿದ್ದ ಶ್ವೇತಾ ಬಂಧನದಿಂದ ಬಚಾವ್ ಆಗಿದ್ದರು. ಅದರೆ, ಯಾವುದೇ ಚಿತ್ರಗಳು ಕೈಯಲ್ಲಿರಲಿಲ್ಲ. ಹೀಗಾಗಿ ಈ ಅಡ್ಡದಾರಿ ಹಿಡಿದಿರಬಹುದು ಎಂದು ಫಿಲಂಸಿಟಿಯಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.

English summary
Banjara Hills police unearthed a flesh trade racket after they raided a hotel in Banjara hills, Hyderabad on Sunday night. Tollywood actress Swetha Basu Prasad, along with other Businessmen were caught red handed during the police raids on the hotel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada